ಸದ್ದಿಲ್ಲದೇ ಸಿಂಪಲ್ಲಾಗಿ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಅಡಿಯಿಟ್ಟ ನಟಿ ಶುಭಾ ಪೂಂಜಾ
ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ತಮ್ಮ ಬಹು ದಿನಗಳ ಗೆಳೆಯ ಸುಮಂತ್ ಅವರೊಡನೆ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಅಡಿಯಿಡಿರಿಸಿದ್ದಾರೆ. ಶುಭಾ ಪೂಂಜಾ ಅವರು ಸುಮಂತ್ ಅವರೊಡನೆ ಮಂಗಳೂರಿನಲ್ಲಿ ಸಿಂಪಲ್ ಆಗಿ ಸಪ್ತಪದಿಯನ್ನು ತುಳಿದಿದ್ದಾರೆ. ಮಂಗಳೂರಿನ ಮಜಲಬೆಟ್ಟು ಬೀಡುವಿನಲ್ಲಿ ಸುಮಂತ್ ಹಾಗೂ ಶುಭಾ ಅವರು ಸರಳವಾಗಿ ವಿವಾಹ ಮಾಡಿಕೊಂಡು ಹೊಸ ಜೀವನಕ್ಕೆ ಶುಭಾರಂಭವನ್ನು ಮಾಡಿದ್ದಾರೆ. ಮದುವೆಗೆ ಕೇವಲ ಅವರ ಕುಟುಂಬದವರು ಮತ್ತು ಆಪ್ತರು ಮಾತ್ರವೇ ಹಾಜರಿದ್ದರು ಎನ್ನಲಾಗಿದೆ.
ಶುಭಾ ಪೂಂಜಾ ತಮ್ಮ ವಿವಾಹದ ಶುಭ ಕ್ಷಣಗಳ ಕುರಿತಾದ ಖುಷಿಯನ್ನು ಫೋಟೋ ಮೂಲಕ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶುಭಾ ಅವರು ಫೋಟೋ ಹಂಚಿಕೊಂಡು, “ಎಲ್ಲರಿಗೂ ನಮಸ್ಕಾರಗಳು, ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು ಹಿರಿಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆ ನಮ್ಮ ಮೇಲಿರಲಿ” ಎಂದು ಬರೆದುಕೊಂಡಿದ್ದಾರೆ.
ಶುಭಾ ಅವರ ಮದುವೆಗೆ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಮಂಜು ಪಾವಗಡ ಅವರು ಕೂಡಾ ಹಾಜರಾಗಿದ್ದರು. ಶುಭಾ ಹಾಗೂ ಸುಮಂತ್ ಬಹುಕಾಲದ ಸ್ನೇಹಿತರಾಗಿದ್ದು, ಶುಭಾ ಅವರು ತಮ್ಮ ಗೆಳೆಯನ ಜೊತೆಗಿರುವ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಬಂದಾಗಲೂ ಅವರು ಬಿಗ್ ಬಾಸ್ ಗಾಗಿ ಮದುವೆಯನ್ನು ಮುಂದೂಡಿದ ವಿಷಯವನ್ನು ಹಂಚಿಕೊಂಡಿದ್ದರು.