ಸದ್ದಿಲ್ಲದೇ ನಡೆಸ್ತಿದ್ದಾರೆ ದೀಪಿಕಾ ಪಡುಕೋಣೆ ಪಿ.ವಿ.ಸಿಂಧು ಬಯೋಪಿಕ್ ಗೆ ಸಿದ್ಧತೆ: ಬಿ ಟೌನ್ ನಲ್ಲಿ ಗುಸು ಗುಸು
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶಾರೂಖ್ ಖಾನ್ ಜೊತೆ ಪಠಾಣ್ ಸಿನಿಮಾ ಮುಗಿಸಿ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಹೊಸ ಸಿನಿಮಾಗಳ ವಿಷಯವಾಗಿ ಅಲ್ಲದೇ ಇದೀಗ ಅವರು ಬೇರೊಂದು ವಿಷಯವಾಗಿ ಮಾದ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಹೌದು ದೀಪಿಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಫೋಟೋಗಳು ಹಾಗೂ ವೀಡಿಯೋ ತುಣುಕು ನೋಡಿದ ಮೇಲೆ ಎಲ್ಲರಿಗೂ ಈಗಾಗಲೇ ಅದು ಅರ್ಥವಾಗಿದೆ ಕೂಡಾ. ಏನು ಆ ಫೋಟೋಗಳ ವಿಶೇಷತೆ ಹಾಗೂ ಅದರ ಹಿಂದಿನ ಕಾರಣ ಅನ್ನೋದರ ಬಗ್ಗೆ ನಾವು ತಿಳಿಯೋಣ ಬನ್ನಿ.
ಇತ್ತೀಚಿಗೆ ದೀಪಿಕಾ ಪಡುಕೋಣೆ ಹೆಚ್ಚಾಗಿ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಎರಡು ಬಾರಿ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿರುವ ಪಿ.ವಿ.ಸಿಂಧು ಅವರ ಜೊತೆಗೆ ಸಮಯವನ್ನು ಕಳೆಯುತ್ತಿದ್ದಾರೆ. ಇತ್ತೀಚೆಗೆ ಪಿ.ವಿ.ಸಿಂಧು ಜೊತೆಗೆ ಅವರು ಬ್ಯಾಡ್ಮಿಂಟನ್ ಆಡಿದ್ದು, ಅದರ ಫೋಟೋಗಳು ಹಾಗೂ ವಿಡಿಯೋ ವನ್ನು ಶೇರ್ ಮಾಡಿಕೊಂಡಿದ್ದಾರೆ. ದೇಹದಲ್ಲಿ ಕ್ಯಾಲರಿ ಬರ್ನ್ ಆಗಿ, ಮುಖದಲ್ಲಿ ಕಾಂತಿ ಹೆಚ್ಚಿತು ಎಂದು ದೀಪಿಕಾ ಬರೆದುಕೊಂಡಿದ್ದಾರೆ.
ಆದರೆ ವಿಷಯ ಅದಲ್ಲ, ದೀಪಿಕಾ ಪಡುಕೋಣೆ ಪಿ.ವಿ.ಸಿಂಧು ಜೊತೆ ಹೆಚ್ಚಿನ ಸಮಯ ಕಳೆಯುತ್ತಿರುವ ಹಿಂದಿನ ಕಾರಣ ಏನಿರಬಹುದು ಎನ್ನುವ ವಿಚಾರವಾಗಿ ಈಗ ಒಂದು ಅನುಮಾನ ಎದ್ದಿದ್ದು, ಬಿ ಟೌನ್ ನಲ್ಲಿ ಈ ವಿಷಯದ ಕುರಿತಾಗಿ ಗುಸು ಗುಸು ಆರಂಭವಾಗಿದೆ. ಆದರೆ ಇದು ಅನುಮಾನ ಮಾತ್ರವಾಗಿ ಉಳಿಯುವುದೋ ಅಥವಾ ನಿಜವಾಗುವುದೋ ಅದಕ್ಕೆ ಒಂದಷ್ಟು ದಿನಗಳ ಕಾಲ ಕಾಯಬೇಕಾಗಿದೆ.
ಇಷ್ಟಕ್ಕೂ ಎದ್ದಿರುವ ಅನುಮಾನ ಏನೆಂದರೆ, ನಟಿ ದೀಪಿಕಾ ಪಡುಕೋಣೆ ಈಗಾಗಲೇ ನಿರ್ಮಾಪಕಿ ಕೂಡಾ ಆಗಿದ್ದಾರೆ. ಚಪಾಕ್ ಸಿನಿಮಾ ಮೂಲಕ ಆ್ಯ ಸಿ ಡ್ ಧಾಳಿಗೊಳಗಾದ ಯುವತಿಯ ಬಯೋಪಿಕ್ ನಿರ್ಮಾಣ ಮಾಡಿದ್ದರು. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸನ್ನು ಕಾಣಲಿಲ್ಲ. ಅದಾದ ಮೇಲೆ ದೀಪಿಕಾ ಈಗ ಮತ್ತೊಂದು ಬಯೋಪಿಕ್ ನಿರ್ಮಾಣದ ಕಡೆಗೆ ಗಮನ ನೀಡಿರಬಹುದು ಎನ್ನವ ಅನುಮಾನ ಮೂಡಿದೆ.
ಬಹುಶಃ ದೀಪಿಕಾ ಪಡುಕೋಣೆ ಪಿ.ವಿ.ಸಿಂಧು ಬಯೋ ಪಿಕ್ ಕಡೆಗೆ ಆಸಕ್ತಿ ತೋರಿರಬಹುದು , ಅದಕ್ಕಾಗಿಯೇ
ಪಿ.ವಿ.ಸಿಂಧು ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾ, ಬ್ಯಾಡ್ಮಿಂಟನ್ ಆಡುತ್ತಾ, ಪಿ.ವಿ.ಸಿಂಧು ಅವರ ಸ್ಟೈಲ್, ಬಾಡಿ ಲಾಂಗ್ವೇಜ್ ಹಾಗೂ ಜೀವನ ವಿಧಾನವನ್ನು ಗಮನಿಸುತ್ತಿದ್ದಾರೆ, ಇದು ಬಹುಶಃ ಬಯೋಪಿಕ್ ನಿರ್ಮಾಣದ ಉದ್ದೇಶದಿಂದಲೇ ಎನ್ನುವ ಮಾತುಗಳು ಕೇಳಿ ಬಂದಿವೆ.