“ಸದಾ ಕೆಲಸದಲ್ಲಿ ಇರುತ್ತಿದ್ದೆ, ಅವರು ಏನು ಮಾಡ್ತಿದ್ರು ಗೊತ್ತಿರಲಿಲ್ಲ” ಪತಿ ರಾಜ್ ಕುಂದ್ರಾ ಬಗ್ಗೆ ಶಿಲ್ಪಾ ಶೆಟ್ಟಿ ಹೇಳಿಕೆ

Entertainment Featured-Articles News
79 Views

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿಗೆ ಹೆಚ್ಚು ಸುದ್ದಿಯಾಗಿದ್ದು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ವಿಚಾರದಿಂದಾಗಿ. ಹೌದು ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ನಿರ್ಮಾಣಕ್ಕೆ ಹಾಗೂ ಹಂಚಿಕೆ ವಿಚಾರದಲ್ಲಿ ಪ್ರಮುಖ ಆ ರೋ ಪಿ ಎನ್ನುವ ಕಾರಣದಿಂದ, ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಸಿಕ್ಕಿವೆ ಎನ್ನುವ ಕಾರಣದಿಂದ ಅವರನ್ನು ನ್ಯಾ ಯಾಂ ಗ ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲದೇ ಅವರ ಬಂಧನದ ನಂತರ ಕೆಲವು ನಟಿಯರು ಸಹಾ ರಾಜ್ ಕುಂದ್ರಾ ಮೇಲೆ ಆ ರೋ ಪಗಳನ್ನು ಮಾಡಿದ್ದಾರೆ. ಅವರ ಜಾಮೀನಿಗಾಗಿ ಸಲ್ಲಿಸಲಾದ ಅರ್ಜಿಗಳನ್ನು ಸಹಾ ಕೋರ್ಟ್ ತಿರಸ್ಕರಿಸಿದ ಕಾರಣ ಅವರು ಜೈಲಿನಿಂದ ಹೊರ ಬರುವುದು ಇನ್ನೂ ಸಾಧ್ಯವಾಗಿಲ್ಲ.

ಇನ್ನು ನಿನ್ನೆ ರಾಜ್ ಕುಂದ್ರಾ ಅವರ ಪ್ರಕರಣದ ವಿಚಾರವಾಗಿದೆ 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಈಗ ಇದೇ ವಿಚಾರದಲ್ಲಿ ನಟಿ ಶಿಲ್ಪಾ ಶೆಟ್ಟಿ ಬಹು ದಿನಗಳ ನಂತರ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಹೌದು ನಟಿ ಶಿಲ್ಪಾ ಶೆಟ್ಟಿ ಮತ್ತೊಮ್ಮೆ ತನಗೆ ತಮ್ಮ ಪತಿ ರಾಜ್ ಕುಂದ್ರಾ ನಡೆಸುತ್ತಿದ್ದ ಈ ವ್ಯವಹಾರದ ಕುರಿತಾದ ಮಾಹಿತಿ ಕೊಂಚ ಕೂಡಾ ಇರಲಿಲ್ಲ ಎನ್ನುವ ವಿಷಯವನ್ನು ಹೇಳಿದ್ದಾರೆ. ನಟಿ ಶಿಲ್ಪಾ ಅವರು ಹೇಳಿದ್ದೇನು ತಿಳಿಯೋಣ.

ಶಿಲ್ಪಾ‌ ಶೆಟ್ಟಿ ಅವರು, ಮುಂಬೈ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಪೋ ರ್ನ್ ವೀಡಿಯೋ ಪ್ರಕರಣದಲ್ಲಿ, ತನ್ನ ಪತಿ ರಾಜ್ ಕುಂದ್ರಾ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತನಗೆ ತಿಳಿದಿರಲಿಲ್ಲ. ಏಕೆಂದರೆ ನಾನು ಸ್ವಂತ ಕೆಲಸದಲ್ಲಿ “ತುಂಬಾ ಬ್ಯುಸಿ” ಆಗಿರುತ್ತಿದ್ದೆ. “ಹಾಟ್‌ಶಾಟ್‌ಗಳು ಅಥವಾ ಬಾಲಿಫೇಮ್ ಅಪ್ಲಿಕೇಶನ್‌ಗಳ ಬಗ್ಗೆ ನನಗೆ ತಿಳಿದಿಲ್ಲ” ಎಂದು ಅವರು ಹೇಳಿದ್ದಾರೆ. ಕುಂದ್ರಾ ಆ್ಯಪ್‌ಗಳಲ್ಲಿ ಅ ಶ್ಲೀ ಲ ವಿಷಯವನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದಾಗಲೇ ಆ ವಿಷಯದ ಬಗ್ಗೆ ನನಗೆ ತಿಳಿದಿದ್ದು ಎಂದು ಹೇಳಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಈ ಹಿಂದೆ ಕೂಡಾ ಪೋಲಿಸರು ಶಿಲ್ಪಾ ಅವರ ಮನೆಯಲ್ಲೇ ಅವರ ಪತಿಯನ್ನು ಕೂರಿಸಿ ಸುಮಾರು ಆರು ಗಂಟೆಗಳ ಕಾಲ ವಿಚಾರಣೆಯನ್ನು ನಡೆಸಿದ ಸಂದರ್ಭದಲ್ಲಿ ಪತಿ ಮೇಲೆ ಕೋಪಗೊಂಡು,ಇದೆಲ್ಲಾ ಅವಶ್ಯಕತೆ ಇತ್ತಾ? ಎಂದು ಪತಿಯ ಮೇಲೆ ಅಸಮಾಧಾನವನ್ನು ಹೊರ ಹಾಕಿದ್ದರು ಎನ್ನುವ ವಿಷಯ ಕೂಡಾ ಸಾಕಷ್ಟು ಸುದ್ದಿಯಾಗಿತ್ತು. ಕುಟುಂಬದ ಮಾರ್ಯದೆ ಮಣ್ಣು ಪಾಲು ಮಾಡಿದಿರಿ ಎಂದು ಅವರು ಕೂಗಾಡಿದ್ದರು.

ರಾಜ್ ಕುಂದ್ರಾ ಪ್ರಕರಣದ ನಂತರ ಶಿಲ್ಪ ಮಾದ್ಯಗಳಿಂದ ಕೆಲವು ಕಾಲ ದೂರು ಉಳದಿದ್ದರು. ಯಾವುದೇ ಹೇಳಿಕೆಗಳನ್ನು ನೀಡಲು ಅವರು ಸಿದ್ಧವಿರಲಿಲ್ಲ. ಆದರೆ ಇದೀಗ ಬಹಳ ದಿನಗಳ ನಂತರ ಅವರು ಪತಿಯ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಶಿಲ್ಪ ರಾಜ್ ಕುಂದ್ರಾ ಗೆ ವಿಚ್ಛೇದನ ನೀಡಬಹುದು ಎನ್ನುವ ಸುದ್ದಿ ಕೂಡಾ ಹರಿದಾಡಿದೆ.

Leave a Reply

Your email address will not be published. Required fields are marked *