ಸತ್ಯ ಸೀರಿಯಲ್ ನಟಿಯ ಹೊಸ ಲುಕ್: ಸತ್ಯಳ ಅಪ್ಸರೆಯ ಲುಕ್ ಗೆ ನೆಟ್ಟಿಗರು ಫಿದಾ, ಫೋಟೋಗಳು ವೈರಲ್

Entertainment Featured-Articles Movies News

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಹಿಟ್ ಧಾರಾವಾಹಿಗಳ ಸಾಲಿನಲ್ಲಿ ಜೀ ಕನ್ನಡ ವಾಹಿನಿಯ ಸತ್ಯ ಧಾರಾವಾಹಿಯೂ ಕೂಡ ಸೇರಿದೆ. ಈ ಸೀರಿಯಲ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಈ ಧಾರಾವಾಹಿಯಲ್ಲಿ ನಾಯಕಿ ಸತ್ಯ ಪಾತ್ರವು ಅಪಾರವಾದ ಜನ ಮೆಚ್ಚುಗೆಯೂ ಸಿಕ್ಕಿದೆ. ಸೀರಿಯಲ್ ನಲ್ಲಿ ಬೋಲ್ಡ್ ಮತ್ತು ಬಿಂದಾಸ್ ಆಗಿರುವ ಸತ್ಯ, ಧೈರ್ಯ ಮತ್ತು ಸಾಹಸಕ್ಕೆ ಮಾತ್ರವೇ ಅಲ್ಲದೇ ಸಹನೆ ಮತ್ತು ತ್ಯಾಗಕ್ಕೂ ಉತ್ತಮ ಉದಾಹರಣೆ ಎನಿಸಿಕೊಂಡಿದ್ದಾಳೆ. ಸತ್ಯ ಪಾತ್ರದ ಮೂಲಕ ನಟಿ ಗೌತಮಿ ಜಾಧವ್ ಅವರು ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ನಟಿ ಗೌತಮಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಿಸುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಸತ್ಯ ಧಾರಾವಾಹಿಯಲ್ಲಿ ಗಂಡು ಹುಡುಗನ ಲುಕ್ ನಲ್ಲಿ ಕಾಣಿಸಿಕೊಳ್ಳುವ ಗೌತಮಿ ಅವರು ಇದೀಗ ಹೊಸ ಫೋಟೋಶೂಟ್ ಒಂದನ್ನು ಮಾಡಿಸಿದ್ದು, ಅವರ ಹೊಸ ಫೋಟೋಗಳು ನೆಟ್ಟಿಗರಿಗೆ ಅಚ್ಚರಿಯನ್ನು ಮೂಡಿಸಿದ್ದಾರೆ. ನಟಿ ಗೌತಮಿ ಅವರ ಫೇವರೆಟ್ ನಟಿ ದಕ್ಷಿಣ ಸಿನಿಮಾರಂಗದ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಯನತಾರಾ ಆಗಿದ್ದಾರೆ.

ನಟಿ ನಯನತಾರಾ ಅವರು ಇತ್ತೀಚೆಗೆ ತಮ್ಮ ವಿವಾಹದಲ್ಲಿ ತೊಟ್ಟಿದ್ದಂತಹ ಡ್ರೆಸ್ ಮತ್ತು ಆಭರಣಗಳಿಂದ ಅಪ್ಸರೆಯಂತೆ ಕಾಣಿಸಿಕೊಂಡು ಅಸಂಖ್ಯಾತ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಈಗ ಗೌತಮಿ ಅವರು ತಮ್ಮ ಅಭಿಮಾನ ನಟಿಯ ಹಾಗೆಯೇ ವಸ್ತ್ರ ಹಾಗೂ ಒಡವೆಗಳನ್ನು ಧರಿಸಿ ಹೊಸ ಫೋಟೋಶೂಟ್ ಒಂದನ್ನು ಮಾಡಿಸಿ, ಫೋಟೋ ಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಟಿ ನಯನತಾರಾ ತಮ್ಮ ಮದುವೆಯಲ್ಲಿ ವಿಶೇಷವಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಿಸಿಕೊಂಡಿದ್ದರು. ಅವರು ಕೆಂಪು ಬಣ್ಣದ ಸೀರೆ ಜೊತೆಗೆ ಹಸಿರು ಬಣ್ಣದ ಒಡವೆಗಳನ್ನು ತೊಟ್ಟು ಐತಿಹಾಸಿಕ ಲುಕ್ ನೀಡುವ ಪ್ರಯತ್ನವನ್ನು ಮಾಡಿದ್ದರು. ಈಗ ನಯನತಾರಾ ಅವರ ಅಂದಿನ ಅಲಂಕಾರದಿಂದ ಪ್ರೇರಣೆಗೊಂಡ ನಟಿ ಗೌತಮಿ ಅವರು ಕೂಡಾ ಕೆಂಪು ಬಣ್ಣದ ಸೀರೆ ಮತ್ತು ಹಸಿರು ಬಣ್ಣದ ಒಡವೆಗಳನ್ನು ತೊಟ್ಟು ಅಪ್ಪರೆಯ ಹಾಗೆ ಮಿಂಚಿದ್ದಾರೆ.

ಗೌತಮಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಈ ಹೊಸ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.‌ ಸತ್ಯ ಸೀರಿಯಲ್ ಪಾತ್ರದ ಗೆಟಪ್ ನಿಂದ ಭಿನ್ನವಾಗಿ ಬಹಳ ಅಂದವಾಗಿ ಕಾಣುತ್ತಿರುವ ನಟಿ ಗೌತಮಿ ಯವರಿಗೆ ಅವರ ಅಭಿಮಾನಿಗಳು ಮೆಚ್ಚುಗೆಗಳನ್ನು ನೀಡುತ್ತಾ ಸಾಗಿದ್ದಾರೆ.

Leave a Reply

Your email address will not be published.