ಈಗ ಇಡೀ ವಿಶ್ವದ ಗಮನ ರಷ್ಯಾ ಮತ್ತು ಉಕ್ರೇನ್ ಕಡೆಗೆ ಕೇಂದ್ರೀಕೃತವಾಗಿದೆ. ಅನಿರೀಕ್ಷಿತ ಬೆಳವಣಿಗೆಗಳಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಸ ಮ ರ ಆರಂಭವಾಗಿದೆ. ಈಗಾಗಲೇ ಹಲವು ಜೀವಗಳನ್ನು ಈ ಸ ಮ ರ ಬಲಿ ಪಡೆದಾಗಿದೆ. ರಷ್ಯಾ ಈ ವಿಚಾರವಾಗಿ ಇದು ಕೇವಲ ಉಕ್ರೇನ್ ನ ಮಿಲಿಟರಿ ಮೇಲಿನ ತಮ್ಮ ಕಾರ್ಯಾಚರಣೆ ಎಂದು ಮೇಲ್ನೋಟಕ್ಕೆ ಹೇಳುತ್ತಿದೆಯಾದರೂ ಕೂಡಾ ವಾಸ್ತವದಲ್ಲಿ ವಸತಿ ಪ್ರದೇಶಗಳಲ್ಲಿ ಸಹಾ ದಾ ಳಿ ಗಳು ನಡೆಯುತ್ತಿರುವುದು ಅಲ್ಲಿನ ಜನರಲ್ಲಿ ಪ್ರಾಣ ಭೀ ತಿ ಯನ್ನು ಉಂಟು ಮಾಡಿದೆ. ಜನ ನಗರಗಳನ್ನು ತೊರೆದು ಹೋಗುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕರ್ನಾಟಕದ ಕೋಡಿ ಮಠದ ಶ್ರೀಗಳಾದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿಗಳು ಹಿಂದೊಮ್ಮೆ ನುಡಿದಿದ್ದ ಭವಿಷ್ಯವಾಣಿ ನಿಜವಾಗಿ ಹೋಗಿದ್ಯಾ? ಎನ್ನುವ ವಿಚಾರವೊಂದು ಈಗ ಚರ್ಚೆಯನ್ನು ಹುಟ್ಟು ಹಾಕಿದೆ. ಹೌದು ಕೆಲ ಸಮಯದ ಹಿಂದೆ ಶ್ರೀಗಳು ನುಡಿದಿದ್ದ ಒಂದು ಭವಿಷ್ಯವಾಣಿಯೊಂದನ್ನು ಮೊದಲು ಬೇರೊಂದು ಘಟನೆಗೆ ತಳಕು ಹಾಕಲಾಗಿತ್ತು. ಆದರೆ ಈಗ ಅಂದು ಅವರು ನುಡಿದಿದ್ದು ಈ ಘಟನೆಯ ಬಗ್ಗೆ ಎಂದು ಕೆಲವರು ಹೊಸ ವಿಚಾರವನ್ನು ಮಾತನಾಡುತ್ತಿದ್ದಾರೆ.
ಹೌದು, ಕೋಡಿ ಮಠದ ಶ್ರೀಗಳು ಹಿಂದೊಮ್ಮೆ ವಿಶ್ವದ ಭೂಪಟದಿಂದ ದೇಶವೊಂದು ಮಾಯವಾಗಲಿದೆ ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದರು. ತಾಲಿಬಾನಿಗಳು ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗ ಅವರ ಭವಿಷ್ಯವಾಣಿಯನ್ನು ಅದಕ್ಕೆ ತಳಕು ಹಾಕಲಾಗಿತ್ತು. ಆದರೆ ಈಗ ಅಂದು ಶ್ರೀಗಳು ನುಡಿದಿದ್ದ ಭವಿಷ್ಯವಾಣಿ ಉಕ್ರೇನ್ ನ ಬಗ್ಗೆ ಎನ್ನುವ ಹೊಸ ವಾದವು ಕೇಳಿ ಬರುತ್ತಿದೆ. ಈ ಮೂಲಕ ಕೆಲವರು ಕೋಡಿ ಶ್ರೀ ಗಳ ಭವಿಷ್ಯವಾಣಿ ಸತ್ಯವಾಗಿದೆ ಎನ್ನುತ್ತಿದ್ದಾರೆ.