ಅಪ್ಪ ಸ್ಟಾರ್ ಕ್ರಿಕೆಟರ್, ಮಗಳು ಆಗ್ತಾಳಾ ಸ್ಟಾರ್ ಮಾಡೆಲ್?? ಸಚಿನ್ ತೆಂಡೂಲ್ಕರ್ ಮಗಳ ಹೊಸ ಸಾಹಸ

0 3

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎಂದರೆ ಕ್ರಿಕೆಟ್ ಲೋಕದಲ್ಲಿ ದೊಡ್ಡ ಹೆಸರು. ಅಭಿಮಾನಿಗಳು ಅವರನ್ನು ಕ್ರಿಕೆಟ್ ದೇವರು ಎಂತಲೇ ಕರೆಯುತ್ತಾರೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಸ್ಟಾರ್ ಕ್ರಿಕೆಟಿಗ ಸಚಿನ್ ಅವರ ಪುತ್ರಿ ಯಾವುದೇ ಸಿನಿಮಾ ನಟಿ ಅಥವಾ ಮಾಡೆಲ್ ಗಿಂತ ಕಡಿಮೆಯೇನಿಲ್ಲ ಎನ್ನುವಷ್ಟು ಅಂದಗಾತಿ. ಸೋಷಿಯಲ್ ಮೀಡಿಯಾಗಳಲ್ಲಿ ಆಕೆ ಕೂಡಾ ಯಾವುದೇ ಸೆಲೆಬ್ರಿಟಿ ಗಿಂತ ಕಡಿಮೆ ಏನಿಲ್ಲ ಎನ್ನುವಷ್ಟರ ಮಟ್ಟಿಗೆ ಹಿಂಬಾಲಕರನ್ನು ಹಾಗೂ ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ.

ಸಚಿನ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಗಾಸಿಪ್ ಗಳು ಹರಿದಾಡುತ್ತಲೇ ಇರುತ್ತವೆ. ಸಾರಾ ಸಿನಿಮಾ ಇಂಡಸ್ಟ್ರಿಗೆ ಅಡಿಯಿಡಲಿದ್ದಾರೆಂದೂ ಹಾಗೂ ರಣಬೀರ್ ಕಪೂರ್ ಸಿನಿಮಾದಲ್ಲಿ ನಾಯಕಿಯಾಗಲಿದ್ದಾರೆ ಎಂದು ಸುದ್ದಿಗಳಾಗಿತ್ತು. ಆದರೆ ಆ ಸುದ್ದಿ ಎಷ್ಟು ನಿಜವೋ, ಸುಳ್ಳೋ ಎನ್ನುವುದು ಸ್ಪಷ್ಟವಾಗುವ ಮೊದಲೇ ಈಗ ಹೊಸ ವಿಷಯವೊಂದು ಅಭಿಮಾನಿಗಳ ಮುಂದೆ ಬಂದು ಗಮನವನ್ನು ಸೆಳೆದಿದೆ.

ಹೌದು ಸಾರಾ ತೆಂಡೂಲ್ಕರ್ ಒಂದು ಬಟ್ಟೆಗಳ ಬ್ರಾಂಡ್ ನಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದು, ಈ ಹೊಸ ಜಾಹೀರಾತಿನ ವೀಡಿಯೋವನ್ನು ಸಾರಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಪ್ರಸಿದ್ಧ ವಸ್ತ್ರ ಬ್ರಾಂಡ್ ಆಗಿರುವ ಎಜಿಯೋಣ ಹೊಸ ವಸ್ತ್ರ ಸರಣಿಯನ್ನು ಮಾರುಕಟ್ಟೆಗೆ ತಂದಿದ್ದು, ಸಾರಾ ತೆಂಡೂಲ್ಕರ್ ಅವರು ಈ ವಸ್ತ್ರಗಳಿಗೆ ಮಾಡೆಲಿಂಗ್ ಮಾಡಿದ್ದಾರೆ. ಸಾರಾ ಫೋಟೋಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಾರಾ ಮಾಡಿರುವ ಮೊದಲ ಮಾಡೆಲಿಂಗ್ ಇದಾಗಿದೆ. ಈ ಮೂಲಕ ಜಾಹೀರಾತಿನ ಲೋಕಕ್ಕೆ ಕಾಲಿಟ್ಟಿರುವ ಸಾರಾ, ಮುಂದೆ ಇನ್ನೂ ಹೆಚ್ಚು ಹೆಚ್ಚು ಜಾಹೀರಾತಿಗಳಲ್ಲಿ ಕಾಣಿಸಿಕೊಳ್ಳಬಹುದು, ಮಾಡೆಲಿಂಗ್ ಕೆರಿಯರ್ ಮುಂದುವರೆಬಹುದು ಹಾಗೂ ಇದು ಬಾಲಿವುಡ್ ಎಂಟ್ರಿಗೆ ಮೆಟ್ಟಿಲು ಕೂಡಾ ಆಗಬಹುದು ಎನ್ನುವುದು ಅನೇಕರ ಅಭಿಪ್ರಾಯ ಆಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಾರಾ ತೆಂಡೂಲ್ಕರ್ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ನೀಡಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave A Reply

Your email address will not be published.