ಸಂಸ್ಕೃತಿ, ಸಂಪ್ರದಾಯ ಮರೆಯದ Infosys ಸುಧಾ ಮೂರ್ತಿ ಅವರ ಮಗಳು, ಅಳಿಯ: ವೈರಲ್ ವೀಡಿಯೋ ನೋಡಿ ಹೊಗಳಿದ ಜನ

Entertainment Featured-Articles News Viral Video

ಬ್ರಿಟನ್ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗುವ ಸ್ಪರ್ಧೆಯಲ್ಲಿ ಭಾರತ ಮೂಲದ ರಿಷಿ ಸುನಕ್ ಅವರು ಅಂತಿಮ ಸ್ಪರ್ಧಿಯಾಗಿದ್ದಾರೆ. ಇತ್ತೀಚಿಗೆ ರಿಷಿ ಅವರ ಕುರಿತಾಗಿ ಸಾಕಷ್ಟು ಸುದ್ದಿಗಳಾಗುತ್ತಲೇ ಇರುತ್ತವೆ. ಬೋರಿಸ್ ಜಾನ್ಸನ್ ಅವರು ಬ್ರಿಟನ್ ಪ್ರಧಾನಿ ಯಾಗುವ ಮೂಲಕ ಒಂದು ಹೊಸ ಇತಿಹಾಸವನ್ನು ಬರೆಯಲಿದ್ದಾರೆ ಎನ್ನುವ ಸುದ್ದಿ ಸಖತ್ ಸದ್ದು ಮಾಡಿತ್ತು. ಇದೀಗ ರಿಷಿ ಸುನಕ್ ಅವರ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದ್ದು, ಈ ವೀಡಿಯೋಗೆ ಮೆಚ್ಚುಗೆಗಳು ಸಹಾ ದೊಡ್ಡ ಸಂಖ್ಯೆಯಲ್ಲಿ ಹರಿದು ಬರುತ್ತಿದೆ. ವಿಶೇಷವಾಗಿ ಭಾರತೀಯರ ಗಮನವನ್ನು ಸೆಳೆದಿದೆ ಈ ವೀಡಿಯೋ.‌

ಕನ್ಸರ್ವೇಟಿವ್ ಪಕ್ಷದ ನಾಯಕ ಆಗಿರುವ ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ಜೊತೆಗೆ ಲಂಡನ್ ನಲ್ಲಿ ಗೋ ಪೂಜೆ ಮಾಡಿರುವ ದೃಶ್ಯವನ್ನು ತೋರಿಸುತ್ತಿರುವ ವೀಡಿಯೋ ಒಂದು ವೈರಲ್ ಆಗಿದೆ. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರ ಜೊತೆಗೆ ಅವರ ಪತಿ ರಿಷಿ ಸುನಕ್ ಗೋಶಾಲೆಗೆ ಭೇಟಿ ನೀಡಿದ್ದು, ಅಲ್ಲಿ ಗೋ ಪೂಜೆಯನ್ನು ನೆರವೇರಿಸಿದ್ದಾರೆ. ವೀಡಿಯೋದಲ್ಲಿ ಗೋಪೂಜೆಗೆ ಸಿದ್ಧವಾಗಿ ನಿಂತಿರುವ ಹಸುವಿನ ಪಕ್ಕದಲ್ಲಿ ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ ದಂಪತಿ ನಿಂತಿರುವುದನ್ನು ನಾವು ಗಮನಿಸಬಹುದಾಗಿದೆ.

ರಿಷಿ ಅವರು ಹಸುವಿನ ಮೇಲೆ ಪವಿತ್ರವಾದ ಜಲವನ್ನು ಪ್ರೋಕ್ಷಣೆ ಮಾಡಿದ ನಂತರ ಅವರ ಕೈಯಲ್ಲಿ ಹಿತ್ತಾಳೆಯ ಪಾತ್ರೆಯನ್ನು ಹಿಡಿದಿದ್ದಾರೆ. ಈ ವೇಳೆ ಪುರೋಹಿತರು ದಂಪತಿಗೆ ಮುಂದಿನ ಆಚರಣೆಯ ಬಗ್ಗೆ ಮಾರ್ಗದರ್ಶನ ನೀಡುತ್ತಿರುವುದು ನಮಗೆ ವೀಡಿಯೋದಲ್ಲಿನ ಕಾಣುತ್ತದೆ.‌ ರಿಷಿ ಸುನಕ್ ದಂಪತಿ ಹಸುವಿಗೆ ಆರತಿ ಮಾಡಿದ್ದಾರೆ. ಹಸುವಿಗೆ ಎರಡು ಕೈ ಜೋಡಿಸಿ ನಮಸ್ಕರಿಸಿದ್ದಾರೆ. ಪೂಜೆಗೆ ಸಿದ್ಧವಾಗಿದ್ದ ಹಸುವಿನ ಮೇಲೆ ಬಣ್ಣ ಮತ್ತು ಕೈ ಮುದ್ರೆಗಳ ಮೂಲಕ ಅಲಂಕಾರ ಮಾಡಲಾಗಿತ್ತು. ಶೀಕೃಷ್ಣ ಜನ್ಮಾಷ್ಟಮಿಯಂದು ಈ ದಂಪತಿ ಕೃಷ್ಣನ ದೇಗುಲಕ್ಕೆ ಭೇಟಿ ನೀಡಿದ ವೀಡಿಯೋ ಸಹಾ ವೈರಲ್ ಆಗಿತ್ತು.

Leave a Reply

Your email address will not be published.