ಸಂಸದೆ ಸುಮಲತ ಅವರ ಜನ್ಮದಿನದ ಸಂಭ್ರಮ:ಇಲ್ಲಿವೆ ಸೆಲೆಬ್ರಿಟಿಗಳ ಫೋಟೋ ಆಲ್ಬಂ

Written by Soma Shekar

Published on:

---Join Our Channel---

ದಕ್ಷಿಣ ಭಾರತ ಸಿನಿಮಾ ರಂಗ ಎಂದು ಬಂದಾಗ ಇಲ್ಲಿನ‌ ಲೆಜೆಂಡರಿ ನಟರ ಸಾಲಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಹೆಸರಿಸದೇ ಇರಲು ಸಾಧ್ಯವೇ ಇಲ್ಲ. ಈ ಮೇರು ನಟನ ಪತ್ನಿ ಹಿರಿಯ ನಟಿ, ಸಂಸದೆ ಸುಮಲತ ಅವರು ಕೂಡಾ ದಕ್ಷಿಣ ಸಿನಿ ರಂಗದ ಒಬ್ಬ ಸುಪ್ರಸಿದ್ದ ನಟಿ, ದಕ್ಷಿಣ ಸಿನಿಮಾ ರಂಗದಲ್ಲಿ ದಶಕಗಳ ಕಾಲ ಸಕ್ರಿಯವಾಗಿದ್ದ ಸುಮಲತ ಅವರಿಗೆ ಇಲ್ಲಿನ ಸಿನಿಮಾ ರಂಗದಲ್ಲಿ ಅವರದ್ದೇ ಆದ ವಿಶೇಷ ಸ್ಥಾನ ಹಾಗೂ ವರ್ಚಸ್ಸು ಎರಡೂ ಇದೆ. ಸುಮಲತ ಅವರು ತಮ್ಮ ಸಹಜ ನಟನೆಯ ಮೂಲಕ ಅಸಂಖ್ಯಾತ ಸಿನಿಮಾ ಪ್ರೇಕ್ಷಕರ ಮನಸ್ಸುಗಳನ್ನು ಗೆದ್ದಿರುವ ನಟಿ. ಅಂಬರೀಶ್ ಅವರ ನಿಧನಾನಂತರ ಮಂಡ್ಯ ಲೋಕ ಸಭಾ ಕ್ಷೇತ್ರದ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿ ಅಖಂಡ ವಿಜಯವನ್ನು ತನ್ನದಾಗಿಸಿಕೊಂಡು ಸಂಸದೆಯ ಪಟ್ಟವನ್ನು ಅವರು ಪಡೆದುಕೊಂಡಿದ್ದಾರೆ.

ಮೂಲತಃ ಆಂಧ್ರ ಪ್ರದೇಶದವರಾದ ಸುಮಲತ ಅವರು ಹುಟ್ಟಿದ್ದು ಚೆನ್ನೈನಲ್ಲಿ. ಹದಿನೈದನೇ ವಯಸ್ಸಿಗೆ ಸೌಂದರ್ಯ ಸ್ಪರ್ಧೆಯೊಂದರಲ್ಲಿ ಗೆದ್ದಾಗ ತೆಲುಗಿನ ನಿರ್ಮಾಪಕ ರಾಮಾನಾಯುವ ಅವರ ಕಣ್ಣಿಗೆ ಬಿದ್ದರು. ಮೊದಲ ಸಿನಿಮಾಕ್ಕೆ ಅಡ್ವಾನ್ಸ್ ನೀಡಿದರು. ಆದರೆ ಸುಮಲತಾ ಅವರು ಇಂಡಸ್ಟ್ರಿ ಗೆ ಅಡಿಯಿಟ್ಟಿದ್ದು ಮಾತ್ರ ತಮಿಳು ಸಿನಿಮಾದ ಮೂಲಕ. ಸಮಾಜಾನಿಕಿ ಸವಾಲ್ ಎನ್ನುವ ಸಿನಿಮಾ ಸಿನಿಮಾ ಮೂಲಕ ಅವರು ತೆಲುಗು ಸಿನಿಮಾ‌ ರಂಗಕ್ಕೆ ಅಡಿಯಿಟ್ಟರು. ಅನಂತರ ಅವರು ಕನ್ನಡ, ಮಲೆಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ಸಹಾ ನಟಿಸಿ ಪಂಚಭಾಷೆ ತಾರೆಯಾಗಿ ಹೆಸರನ್ನು ಮಾಡಿದರು.

ಇದೇ ಆಗಸ್ಟ್ 27 ರಂದು ನಟಿ ಸುಮಲತ ಅವರ ಜನ್ಮದಿನ. 59 ನೇ ವಸಂತಕ್ಕೆ ಸುಮಲತ ಅವರು ಕಾಲಿಟ್ಟ ಸಂದರ್ಭದಲ್ಲಿ ಸ್ಯಾಂಡಲ್ವುಡ್ ಮಾತ್ರವೇ ಅಲ್ಲದೇ ದಕ್ಷಿಣ ಸಿನಿ ರಂಗದ ಪ್ರಖ್ಯಾತ ನಟಿಯರು ಸುಮಲತ ಅವರ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಿ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಹಾಗೂ ಇನ್ನೂ ಅನೇಕ ತಾರೆಯರು ಸುಮಲತ ಅವರ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆ ಸೆಲೆಬ್ರೇಷನ್ ನ ಕೆಲವು ಫೋಟೋಗಳು ಇಲ್ಲಿವೆ.

Leave a Comment