ಸಂಭಾವನೆ ವಿಷಯದಲ್ಲಿ ನಯನತಾರಾ ಹೊಸ ದಾಖಲೆ: ಮೆಗಾಸ್ಟಾರ್ ಪಕ್ಕ ನಟಿಸಲು ಪಡೆದ ಸಂಭಾವನೆ ಎಷ್ಟು ಗೊತ್ತಾ??

Written by Soma Shekar

Published on:

---Join Our Channel---

ಸಿನಿಮಾಗಳಲ್ಲಿ ನಾಯಕ ಹಾಗೂ ನಾಯಕಿಯರ ಸಂಭಾವನೆ ವಿಚಾರ ಬಂದಾಗಲೆಲ್ಲಾ ಸಹಾ ನಾಯಕರಿಗಿಂತ ನಾಯಕಿಯರ ಸಂಭಾವನೆ ಕಡಿಮೆ ಇರುವುದು ಸಹಜ. ಇದಕ್ಕೆ ಪ್ರಮುಖ ಕಾರಣ ಸಿನಿಮಾಗಳಲ್ಲಿ ಬಹುತೇಕ ನಾಯಕರೇ ಪ್ರಧಾನ ಆದ ಕಾರಣ ನಾಯಕರು ಬಹುಕೋಟಿ ಮೌಲ್ಯದಲ್ಲಿ ಸಂಭಾವನೆಯನ್ನು ಪಡೆದರೆ, ನಾಯಕಿಯರ ಸಂಭಾವನೆ ಒಂದೆರಡು ಕೋಟಿಗಳಾಗಿರುತ್ತವೆ. ಆದರೆ ಅದರಲ್ಲೂ ಹೆಚ್ಚಿನ ಸಂಭಾವನೆ ಪಡೆಯುವ ನಟಿ ಯಾರು?? ಎನ್ನುವ ವಿಷಯ ತಿಳಿಯುವ ಕುತೂಹಲ ಸಹಜವಾಗಿಯೇ ಅಭಿಮಾನಿಗಳಲ್ಲಿ ಇರುತ್ತದೆ.

ಇತ್ತೀಚೆಗೆ ನಟಿ ಸಮಂತಾ ವಿಚ್ಚೇದನದ ನಂತರ ಹೊಸ ಸಿನಿಮಾವೊಂದಕ್ಕೆ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಂಡ ವಿಷಯವು ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಅದಾದ ಕೆಲವೇ ದಿನಗಳಲ್ಲಿ ದಕ್ಷಿಣ ಸಿನಿಮಾ ರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ನಟಿ ನಯನ ತಾರಾ ಹೊಸ ಸಿನಿಮಾವೊಂದಕ್ಕೆ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆಯುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

ನಟಿ ನಯನತಾರಾ ಮೆಗಾಸ್ಟಾರ್ ಚಿರಂಜೀವಿ ಅವರ ಹೊಸ ಸಿನಿಮಾ ಗಾಡ್ ಫಾದರ್ ಸಿನಿಮಾದಲ್ಲಿನ ಪಾತ್ರಕ್ಕಾಗಿ ಕೋಟಿಗಳ ಮೊತ್ತದಲ್ಲಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ನಯನತಾರಾ ನಟ ಚಿರಂಜೀವಿ ಅವರ ಪಕ್ಕದಲ್ಲಿ ನಾಯಕಿಯಾಗಿ ನಟಿಸುತ್ತಿಲ್ಲ. ಬದಲಿಗೆ ನಯನತಾರಾ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಈ ಸಿನಿಮಾದಲ್ಲಿ ತಂಗಿಯಾಗಿ ಕಾಣಿಸಿಕೊಳ್ಳಲಿರುವುದು ಎಲ್ಲರ ಕುತೂಹಲವನ್ನು ಕೆರಳಿಸಿದೆ.

ಹಾಗಿದ್ರೆ ನಯನತಾರಾ ಈ ಸಿನಿಮಾಕ್ಕೆ ಪಡೆಯಲಿರುವ ಸಂಭಾವನೆ ಎಷ್ಟೆಂದು ತಿಳಿಯೋಣ ಬನ್ನಿ. ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ನಯನತಾರಾ ಗಾಡ್ ಫಾದರ್ ಸಿನಿಮಾಕ್ಕಾಗಿ ಬರೋಬ್ಬರಿ 4 ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಈ ಮೂಲಕ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದಂತಹ ಮೊಟ್ಟ ಮೊದಲ ದಕ್ಷಿಣದ ನಟಿಯಾಗಿ ಹೊರಹೊಮ್ಮಿದ್ದಾರೆ ನಯನತಾರಾ.

Leave a Comment