ಸಂಭಾವನೆ ವಿಚಾರದಲ್ಲಿ ಕಿಚ್ಚನ್ನ ಮೀರಿಸೋರು ಯಾರು? ಬಿಗ್ ಬಾಸ್ ಓಟಿಟಿ ನಿರೂಪಣೆಗೆ ಸುದೀಪ್ ಪಡೆದಿದ್ದಾರೆ ಭಾರೀ ಸಂಭಾವನೆ

0 0

ಬಿಗ್ ಬಾಸ್ ಓಟಿಟಿ ಕನ್ನಡದಲ್ಲಿ ತನ್ನ ಮೊದಲನೇ ಸೀಸನ್ ಆರಂಭ ಮಾಡಿ ಅದನ್ನು ಯಶಸ್ವಿ ಮೊದಲನೇ ವಾರವನ್ನು ಪೂರ್ತಿ ಮಾಡಿದೆ. ಮೊದಲ ವಾರದಲ್ಲೇ ಮನೆಯ ಸ್ಪರ್ಧಿಗಳು ಚಟುವಟಿಕೆಗಳು, ಅವರ ಖಾಸಗಿ ಜೀವನದ ವಿಚಾರ, ಮನೆಯಲ್ಲಿ ಸದಸ್ಯರ ನಡುವಿನ ಸ್ನೇಹ, ಪ್ರೇಮ ಮತ್ತು ಕಿತ್ತಾಟಗಳು ನಡೆದು, ಸಾಕಷ್ಟು ಸುದ್ದಿ ಕೂಡಾ ಆಗಿದೆ. ಮೊದಲನೇ ಎಲಿಮಿನೇಷನ್ ಸಹಾ ನಡೆದಾಗಿದೆ. ಈಗ ಎಲ್ಲರ ಗಮನವು ಎರಡನೇ ವಾರದ ಕಡೆಗೆ ನೆಟ್ಟಿದೆ. ಇದರ ನಡುವೆಯೇ ಈಗ ಹೊಸ ವಿಚಾರವೊಂದು ಸದ್ದು ಮಾಡಿದ್ದು, ಎಲ್ಲರ ಗಮನ ನಟ ಸುದೀಪ್ ಅವರ ಕಡೆಗೆ ಹೊರಳಿದೆ. ಯಾವ ವಿಷಯಕ್ಕೆ ಹೊರಳಿದೆ ತಿಳಿಯೋಣ ಬನ್ನಿ.

ಕನ್ನಡದಲ್ಲಿ ಬಿಗ್ ಬಾಸ್ ಆರಂಭವಾದಾಗಿನಿಂದಲೂ ನಟ ಕಿಚ್ಚ ಸುದೀಪ್ ಅವರೇ ಈ ಶೋ ವನ್ನು ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೇ ಕನ್ನಡದಲ್ಲಿ ಬಿಗ್ ಬಾಸ್ ನ ಪ್ರಮುಖ ಆಕರ್ಷಣೆ ಸಹಾ ಅವರೇ ಆಗಿದ್ದಾರೆ. ಬಿಗ್ ಬಾಸ್ ಶೋ ವಾರಾಂತ್ಯದ ಎಪಿಸೋಡ್ ಗಳನ್ನು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಣೆ ಮಾಡುತ್ತಾರೆ. ಸುದೀಪ್ ಅವರ ನಿರೂಪಣೆ ಅಸಂಖ್ಯಾತ ಪ್ರೇಕ್ಷಕರು ಹಾಗೂ ಅವರ ಅಭಿಮಾನಿಗಳಿಂದ ವಿಶೇಷವಾದ ಮೆಚ್ಚುಗೆಯನ್ನು ಸಹಾ ಪಡೆದುಕೊಂಡಿದೆ. ಇನ್ನು ಈ ಬಾರಿ ಬಿಗ್ ಬಾಸ್ ಓಟಿಟಿಯಲ್ಲಿ ಸಹಾ ಮೊದಲನೇ ಸೀಸನ್ ಆರಂಭಿಸಿದೆ.

ಬಿಗ್ ಬಾಸ್ ಓಟಿಟಿಗೂ ಸಹಾ ಕಿಚ್ಚ ಸುದೀಪ್ ಅವರಿಂದಲೇ ನಿರೂಪಣೆ ಮಾಡಿಸುತ್ತಿರುವುದು ವಿಶೇಷವಾಗಿದೆ. ಇನ್ನು ಈ ಓಟಿಟಿ ಮೊದಲ ಸೀಸನ್ ಗೆ ನಿರೂಪಣೆ ಮಾಡಲು ನಟ ಕಿಚ್ಚ ಸುದೀಪ್ ಅವರು ಪಡೆದ ಸಂಭಾವನೆ ಎಷ್ಟು ಎನ್ನುವ ವಿಷಯವಾಗಿ ಚರ್ಚೆಯೊಂದು ಆರಂಭವಾಗಿದೆ. ಹೌದು, ಕೆಲವೊಂದು ವರದಿಗಳ ಪ್ರಕಾರ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಓಟಿಟಿ ನಿರೂಪಣೆಯನ್ನು ಮಾಡಲು ಕೋಟಿ ಕೋಟಿ ಹಣವನ್ನು ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ.

ಹಾಗಾದರೆ ನಟ ಕಿಚ್ಚ ಸುದೀಪ್ ಅವರು ಪಡೆದ ಸಂಭಾವನೆಯ ಮೊತ್ತ ಎಷ್ಟು ? ಎನ್ನುವುದಾದರೆ, ಈಗ ಕೆಲವೊಂದು ಮಾದ್ಯಮಗಳು ಮಾಡಿರುವ ಸುದ್ದಿಗಳ ಪ್ರಕಾರ ಸುದೀಪ್ ಅವರು ಬಿಗ್ ಬಾಸ್ ಓಟಿಟಿಯ ಮೊದಲನೇ ಸೀಸನ್ ಅನ್ನು ನಿರೂಪಣೆ ಮಾಡಲು ಬರೋಬ್ಬರಿ 5 ಕೋಟಿ ರೂ.ಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎನ್ನಲಾಗಿದೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದ್ಭುತವಾದ ನಿರೂಪಣೆಯ ಮೂಲಕ ಮನೆ ಮನೆ ಮಾತಾಗಿರುವ ಕಿಚ್ಚ ಸುದೀಪ್ ಅವರಿಗೆ ಈ ಸಂಭಾವನೆ ನೀಡಲೇಬೇಕು ಎನ್ನುತ್ತಿದ್ದಾರೆ ಪ್ರೇಕ್ಷಕರು.

Leave A Reply

Your email address will not be published.