ಇಷ್ಟು ಸಂಭಾವನೆ ಪಡೆದ ಇನ್ನೊಬ್ಬ ನಟನಿಲ್ಲ: ಬಾಲಿವುಡ್ ಸ್ಟಾರ್ ಗಳಿಗೆ ಪ್ರಭಾಸ್ ಟಕ್ಕರ್

Written by Soma Shekar

Published on:

---Join Our Channel---

ಬಾಹುಬಲಿ, ಸಾಹೋ ಸಿನಿಮಾಗಳ ನಂತರ ತೆಲುಗು ನಟ ಪ್ರಭಾಸ್ ಭಾರತೀಯ ಸಿನಿಮಾ ರಂಗದ ಸ್ಟಾರ್ ನಟರಲ್ಲಿ ಒಬ್ಬರೆನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ರಭಾಸ್ ವೃತ್ತಿ ಜೀವನದಲ್ಲಿ ಬಾಹುಬಲಿ ಸಿನಿಮಾ ಅವರ ಖ್ಯಾತಿಯನ್ನು ಭಾರತದ ಗಡಿಯಾಚೆಗೂ ಕೊಂಡೊಯ್ದಿದ್ದು, ಈ ನಟನಿಗೆ ವಿಶ್ವದಾದ್ಯಂತ ಸಹಾ ಅಭಿಮಾನಿಗಳು ಇದ್ದು, ದೊಡ್ಡ ಸ್ಟಾರ್ ಡಂ ಹೊಂದಿರುವ ನಟ ಪ್ರಭಾಸ್. ಪ್ರಭಾಸ್ ಸಿನಿಮಾಗಳು ಬಿಡುಗಡೆ ನಂತರ ಹೊಸ ದಾಖಲೆಗಳನ್ನು ಬರೆಯುವುದು ಸಹಾ ಸಾಮಾನ್ಯ ಎನ್ನುವಂತಾಗಿದೆ. ‌

ಸಿನಿಮಾಗಳು ದಾಖಲೆ ಮಾಡುವುದು ಒಂದು ಕಡೆಯಾದರೆ ಇದೀಗ ನಟ ಪ್ರಭಾಸ್ ಅವರ ಸಂಭಾವನೆ ವಿಷಯ ಕೂಡಾ ಸಾಕಷ್ಟು ಸುದ್ದಿಯಾಗಿರುವುದು ಮಾತ್ರವೇ ಅಲ್ಲದೇ ನಟನ ಸಂಭಾವನೆ ವಿಚಾರವು ಸಹಾ ಹೊಸ ದಾಖಲೆಯೊಂದನ್ನು ಬರೆಯಲಿದೆ ಎನ್ನುವುದು ನಟ ಪ್ರಭಾಸ್ ಅವರ ಅಭಿಮಾನಿಗಳಿಗೆ ಬಹಳ ಖುಷಿಯನ್ನು ನೀಡಿದೆ. ಪ್ರಭಾಸ್ ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಡ ಎನಿಸಿಕೊಂಡಿರುವ ವಿಚಾರ ಗಮನ ಸೆಳೆದಿದೆ.

ನಟ ಪ್ರಭಾಸ್ ಈ ಹಿಂದೆ ಒಮ್ಮೆ 100 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದಿಟ್ಟಿರುವ ನಟ ಪ್ರಭಾಸ್ ಅವರ ಸಂಭಾವನೆ ಈಗ ನೂರು ಕೋಟಿಯ ಗಡಿಯನ್ನು ದಾಟಿ ಮುಂದೆ ಹೋಗಿದೆ. ದಿನಕಳೆದಂತೆ ತನ್ನ ಚಾರ್ಮ್ ಹೆಚ್ಚಿಸಿಕೊಂಡಿರುವ, ತನ್ನ ಅದ್ಭುತ ನಟನೆ ಹಾಗೂ ಸ್ಟಾರ್ ಡಂ ನಿಂದ ಪ್ರಭಾಸ್ ಸಂಭಾವನೆ ಸಹಾ ಈಗ ಹೆಚ್ಚಾಗಿದೆ.

ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಹೊಸ ಸುದ್ದಿಯೊಂದರ ಪ್ರಕಾರ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹೊಸ ಸಿನಿಮಾ ಸ್ಪಿರಿಟ್ ನಲ್ಲಿ ನಟಿಸಲು ಪ್ರಭಾಸ್ ಬರೋಬ್ಬರಿ 150 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದೇ ಮೊತ್ತದ ಸಂಭಾವನೆಯನ್ನು ಪ್ರಭಾಸ್ ಆದಿ ಪುರಷ್ ಸಿನಿಮಾಗಾಗಿಯೂ ಪಡೆದಿದ್ದಾರೆನ್ನಲಾಗಿದ್ದು, ಭಾರತದಲ್ಲಿ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದ ನಟ ಇನ್ನೊಬ್ಬರಿಲ್ಲ ಎನ್ನಲಾಗಿದೆ.

Leave a Comment