ಸಂಪ್ರದಾಯದ ಸುಳಿಯಲ್ಲಿ ಕಳೆದೋದ್ಲಾ ಸತ್ಯ? ಬಿಂದಾಸ್ ಸತ್ಯಳನ್ನು ಮಿಸ್ ಮಾಡ್ಕೊಂಡ್ರಾ ಪ್ರೇಕ್ಷಕರು??

0 1

ಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿರುವ ಸತ್ಯ ಧಾರಾವಾಹಿ ಬೇರೆಲ್ಲಾ ಸೀರಿಯಲ್ ಗಳಿಗಿಂತ ಭಿನ್ನವಾದ ಕಥೆ ಮತ್ತು ಕಥಾನಕದೊಂದಿಗೆ ಮುಂದೆ ಸಾಗಿದೆ. ಹೆಣ್ಣಾದರೂ ತಾನೇನು ಗಂಡಿಗಿಂತ ಕಡಿಮೆ ಇಲ್ಲ ಎಂದು ಬದುಕುತ್ತಿದ್ದ ಬಿಂದಾಸ್ ಹುಡುಗಿ ಸತ್ಯಳ ಬಾಳಿನಲ್ಲಿ ಅವರ ಅಕ್ಕ ದಿವ್ಯ ಹಾಗೂ ನಾಯಕ ಕಾರ್ತಿಕ್ ನ ಅಕ್ಕ ಮಾಡಿದ ಕುತಂತ್ರದಿಂದ ದೊಡ್ಡ ತಿರುವು ಮೂಡಿದೆ. ಸತ್ಯ ಕಾರ್ತಿಕ್ ನ ಪತ್ನಿಯಾಗಿದ್ದಾಳೆ. ಗಂಡಿನಂತೆ ಉಡುಗೆ ತೊಟ್ಟು ಪುಂಡರ ಹುಟ್ಟಡಗಿಸುತ್ತಿದ್ದ ಸತ್ಯ ಈಗ ಸೀರೆಯುಟ್ಟು ದೊಡ್ಡ ಮನೆಯ ಸೊಸೆಯಾಗಿ ಅಲ್ಲಿನ ಸಂಪ್ರದಾಯಗಳನ್ನು ಕಲಿಯುವತ್ತ ಮುಖ ಮಾಡಿದ್ದಾಳೆ‌.

ಸತ್ಯ ಧಾರಾವಾಹಿಯಲ್ಲಿ ಸತ್ಯಳ ಪಾತ್ರವನ್ನು ನೋಡಿ ಬಹಳಷ್ಟು ಜನ ಪ್ರೇಕ್ಷಕರು ಅದರಲ್ಲೂ ವಿಶೇಷವಾಗಿ ಮಹಿಳಾ ಪ್ರೇಕ್ಷಕರು ಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಸತ್ಯಳ ಹಾಗೆ ಎಲ್ಲಾ‌ ಹೆಣ್ಣು ಮಕ್ಕಳು ಧೈರ್ಯವಾಗಿ ಇರಬೇಕು, ‌ಸತ್ಯ ಅದೆಷ್ಟೋ ಜನ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಈಗ ಸತ್ಯಳ ಬದುಕಿನಲ್ಲಿ ಎದುರಾಗಿರುವ ತಿರುವಿನಿಂದ ಸತ್ಯ ಕೂಡಾ ಎಲ್ಲಾ ಹೆಣ್ಮಕ್ಕಳಂತೆ ಸೀರೆಯುಟ್ಟು, ಸಂಪ್ರದಾಯದ ಹೆಸರಿನಲ್ಲಿ ತನ್ನದಲ್ಲದ ಸ್ಟೈಲ್ ನಲ್ಲಿ ಕಾಣಿಸುತ್ತಿರುವುದು ಸಹಜವಾಗಿಯೇ ಕೆಲವರಿಗೆ ಬೇಸರವನ್ನು ತಂದಿದೆ.

ಸತ್ಯ ಎಂದರೆ ಧೈರ್ಯ, ಸತ್ಯ ಎಂದರೆ ಮಾತು ಎಂದೆಲ್ಲಾ ನೋಡುತ್ತಿದ್ದ ಪ್ರೇಕ್ಷಕರ ಮುಂದೆ ಸತ್ಯ ತನ್ನ ಮದುವೆಯ ನಂತರ ದಿನ ದಿನವೂ ಸಂಪ್ರದಾಯದ ಹೆಸರಿನಲ್ಲಿ ಕಾರ್ತಿಕ್ ತಾಯಿ ಸೀತಮ್ಮ‌ನಿಂದ ಬೈಗುಳ ಕೇಳುವುದು ಅನೇಕ ಮಂದಿ ಪ್ರೇಕ್ಷಕರ ಅಸಮಾಧಾನಕ್ಕೆ ಸಹಾ ಕಾರಣವಾಗಿದೆ. ಸಂಪ್ರದಾಯ ಎಂದು ಅಷ್ಟೆಲ್ಲಾ ಮಾತನಾಡುವ ಸೀತಮ್ಮ ತಮ್ಮ‌ ಮಗಳಿಗೆ ಏಕೆ ಅದನ್ನೆಲ್ಲಾ ಕಲಿಸಲಿಲ್ಲ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಯನ್ನು ಮಾಡಿದ್ದಾರೆ.

ಇದೇ ವೇಳೆ ಸತ್ಯ ಮೌನ, ಮಾತುಗಳನ್ನು ಕೇಳುತ್ತಾ ಸಹಿಸಿಕೊಳ್ಳುವುದು ಇದೆಲ್ಲಾ ನೋಡಿದಾಗ ಸತ್ಯ ಅಭಿಮಾನಿಗಳಿಗೆ ಇದು ಬೇಸರವನ್ನು ಉಂಟು ಮಾಡಿದೆ, ಸತ್ಯ ಮತ್ತೆ ತನ್ನ ಹಳೆಯ ಫಾರ್ಮ್ ಗೆ ಬರ್ತಾಳಾ? ಅಥವಾ ಕಾರ್ತಿಕ್ ಅವರ ಕೋಟೆ ಮನೆಗ ಸಂಪ್ರದಾಯಗಳ ಕೋಟೆಯಲ್ಲಿ ಸಿಲುಕಿಕೊಂಡು ಎಲ್ಲಾ ಸೊಸೆಯರ ಹಾಗೆ ಇದ್ದು ಬಿಡ್ತಾಳಾ ಅನ್ನೋದು ಕೂಡಾ ಪ್ರೇಕ್ಷಕರಲ್ಲಿ ಮೂಡಿರುವ ಅನುಮಾನವಾಗಿದೆ. ಇದಕ್ಕೆಲ್ಲಾ ಉತ್ತರ ಮುಂದಿನ ಸಂಚಿಕೆಗಳಲ್ಲಿ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ ಸತ್ಯ ಸೀರಿಯಲ್ ನ ಅಭಿಮಾನಿಗಳು.

ಇನ್ನು ಸೀರಿಯಲ್ ನ ಆರಂಭದಲ್ಲಿ ಕಾರ್ತಿಕ್ ಗೆ ಎಂತಹ ಹೆಣ್ಣು ಸಿಗುತ್ತಾಳೆ ಎಂದು ಭವಿಷ್ಯ ನುಡಿದಿದ್ದ ಗುರುಗಳು ಈಗ ಗುಡಿಯಲ್ಲಿ ಸಿಕ್ಕಿ ಸೀತಮ್ಮನಿಗೆ ಯಾವ ಸೊಸೆಯನ್ನು ಈಗ ನಿಂದನೆ ಮಾಡುತ್ತಿರುವರೋ ಅದೇ ಸೊಸೆಯನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುವ ದಿನ ಬರುತ್ತೆ, ಸತ್ಯ ಕೋಟೆ ಮನೆ ಕುಟುಂಬದ ರಕ್ಷಣೆ ಮಾಡ್ತಾಳೆ ಎಂದು ಹೇಳಿರುವ ಮಾತುಗಳು ಸೀತಮ್ಮನ ಮೇಲೆ ಯಾವ ಪರಿಣಾಮ‌ ಬೀರುತ್ತೇ ಅನ್ನೋದು ಕೂಡಾ ಕುತೂಹಲ ಉಂಟು ಮಾಡಿದೆ.

Leave A Reply

Your email address will not be published.