ಸಂಪೂರ್ಣ ಬೆತ್ತಲಾದ ರಣವೀರ್ ಸಿಂಗ್: ದೀಪಿಕಾ ಅವರೇ ಇಲ್ಲಿ ನೋಡಿ ಎಂದು ಟಾಂಗ್ ಕೊಟ್ಟ ನೆಟ್ಟಿಗರು

Entertainment Featured-Articles Movies News

ಬಾಲಿವುಡ್ ನಟ ರಣ್ವೀರ್ ಸಿಂಗ್ ತಮ್ಮ ಬಿಂದಾಸ್ ನಡೆ ಮತ್ತು ನುಡಿಗೆ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟ. ರಣ್ವೀರ್ ತಮ್ಮ ಫ್ಯಾಷನ್ ಅಂದರೆ ಧರಿಸುವ ಡ್ರೆಸ್ ಗಳು, ಹೇರ್ ಸ್ಟೈಲ್ ಗಳಿಗೆ ಸಿಕ್ಕಾಪಟ್ಟೆ ಫೇಮಸ್. ಅದರಲ್ಲೂ ವಿಶೇಷವಾಗಿ ಸಿನಿಮಾ ಅವಾರ್ಡ್ ಕಾರ್ಯಕ್ರಮಗಳಾದರೆ ಅಲ್ಲಿ ರಣ್ವೀರ್ ಸಿಂಗ್ ಯಾವ ಡ್ರೆಸ್ ಧರಿಸಿ ಬರುತ್ತಾರೆ ಎನ್ನುವ ಕುತೂಹಲ ಸದಾ ಇದ್ದೇ ಇರುತ್ತದೆ. ಹೀಗೆ ಸದಾ ತಾನು ತೊಡುವ ವಸ್ತ್ರಗಳಿಂದ ಸದ್ದು ಮಾಡುತ್ತಿದ್ದ ರಣ್ವೀರ್ ಈಗ ಬಟ್ಟೆಗಳೇ ಇಲ್ಲದೇ ಸಂಚಲನ ಸೃಷ್ಟಿಸಿದ್ದಾರೆ.

ಹೌದು, ನಟ ರಣ್ವೀರ್ ಸಿಂಗ್ ಅವರು ಸಂಪೂರ್ಣ ಬೆತ್ತಲಾಗಿ ಕ್ಯಾಮರಾಗೆ ಪೋಸ್ ಗಳನ್ನು ನೀಡಿದ್ದಾರೆ. ರಣ್ವೀರ್ ಬೆತ್ತಲಾಗಿ ಪೋಸ್ ನೀಡಿ ಮಾಡಿರುವ ಫೋಟೋ ಶೂಟ್ ನ ಫೋಟೋ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಸ್ಟಾರ್ ನಟನ ಈ ವೈರಲ್ ಫೋಟೋಗಳನ್ನು ನೋಡಿದ ನೆಟ್ಟಿಗರು ಶಾ ಕ್ ಆಗಿದ್ದಾರೆ. ವೈವಿದ್ಯಮಯ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಅಲ್ಲದೇ ನೆಟ್ಟಿಗರು ನಟನ ಇಂತಹುದೊಂದು ವರ್ತನೆಯನ್ನು ಖಂಡಿಸುತ್ತಿದ್ದಾರೆ.

ನೆಟ್ಟಿಗರು ಕಾಮೆಂಟ್ ಬಾಕ್ಸ್ ನಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ಗಮನ ಸೆಳೆಯಲು ನಟಿಯನ್ನು ಟ್ಯಾಗ್ ಮಾಡುತ್ತಿದ್ದಾರೆ. ಇನ್ನು ರಣ್ವೀರ್ ಇದ್ದಕ್ಕಿದ್ದ ಹಾಗೆ ಹೀಗೆ ಕ್ಯಾಮರಾ ಮುಂದೆ ಬೆತ್ತಲಾಗಿದ್ದಾದರೂ ಏಕೆ ಎನ್ನುವುದಾದರೆ ನಟ ರಣ್ವೀರ್ ಅವರು ಪೇಪರ್ ಮ್ಯಾಗಜೀನ್ ನ ಕವರ್ ಫೋಟೋ ಗಾಗಿ ಇಂತಹುದೊಂದು ಪೋಸ್ ನೀಡಿದ್ದಾರೆ. ಈ ಮ್ಯಾಗಜೀನ್ ನ ಹೊಸ ಸಂಚಿಕೆಯಲ್ಲಿ ನಟನ ಬೆ ತ್ತ ಲೆ ಫೋಟೋ ಗಳ ಜೊತೆಗೆ ಅವರ ಸಂದರ್ಶನ ಸಹಾ ಪ್ರಕಟವಾಗಿದೆ.

ಇನ್ನು ನಟ ರಣ್ವೀರ್ ತಮ್ಮ ಬೋಲ್ಡ್ ಹೇಳಿಕೆಗಳಿಗೆ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಟ್ರೋಲ್ ಗಳ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.‌ ನಟ ರಣ್ವೀರ್ ಸ್ವತಃ, ನಟಿಸುವಾಗ ಬೆತ್ತಲಾಗುವುದು ನನಗೆ ತುಂಬ ಸುಲಭ. ಸಾವಿರಾರು ಜನರ ಎದುರಿನಲ್ಲೇ ನಾನು ನ ಗ್ನ ವಾಗಬಲ್ಲೆ. ಆದರೆ ಅವರಿಗೆ ಮುಜುಗರ ಆಗುತ್ತದೆ ಅಷ್ಟೇ’ ಎಂದು ರಣವೀರ್​ ಸಿಂಗ್​ ಹೇಳುವ ಮೂಲಕ ಗಮನ ಸೆಳೆದಿದ್ದರು. ರಣ್ವೀರ್ ಹೊಸ ಫೋಟೋ ವಿವಿಧ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ದೀಪಿಕಾ ಪಡುಕೋಣೆಯವರೇ ಇಲ್ಲಿ ಸ್ವಲ್ಪ ನೋಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published.