ಸಂಪೂರ್ಣವಾಗಿ ರಾಜನಂದಿನಿಯ ವಶವಾದ್ಲಾ ಅನು?? ಮಹತ್ವದ ತಿರುವಿನತ್ತ ಜೊತೆ ಜೊತೆಯಲಿ ಸೀರಿಯಲ್

0 2

ಕಿರುತೆರೆಯ ಹೆಸರು ಬಂದಾಗ ತಟ್ಟನೆ ಮನಸ್ಸಲ್ಲಿ ಬರುವುದು ಸೀರಿಯಲ್ ಗಳ ದೃಶ್ಯ. ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಸೀರಿಯಲ್ ಗಳು ಪ್ರೇಕ್ಷಕರ ಮನಸ್ಸಿನ ಮೇಲೆ ಪರಿಣಾಮ ಬೀರಿವೆ. ಆದ್ದರಿಂದಲೇ ಸೀರಿಯಲ್ ನ ಪಾತ್ರಗಳನ್ನು ತಮ್ಮ ಕುಟುಂಬದ ಪಾತ್ರಗಳಂತೆ ಭಾವಿಸಿ ಅನೇಕರು ಭಾವನಾತ್ಮಕವಾಗಿ ಅವುಗಳೊಂದಿಗೆ ಬೆಸೆದು ಕೊಂಡಿರುತ್ತಾರೆ. ಇದರಿಂದಾಗಿ ಸೀರಿಯಲ್ ನಲ್ಲಿನ ತಿರುವುಗಳು ಹಾಗೂ ರೋಚಕ ಘಟ್ಟಗಳು ಜನರಿಗೆ ಪ್ರತಿ ಸಂಚಿಕೆಯನ್ನು ನೋಡಲು ಬಹಳ ಕುತೂಹಲದಿಂದ ಕಾಯುತ್ತಾ ಇರುತ್ತಾರೆ.

ಹೀಗೆ ಜನ ಬಹು ನಿರೀಕ್ಷೆಯಿಂದ ನೋಡುವ ಸೀರಿಯಲ್ ಗಳಲ್ಲಿ ಜೊತೆ ಜೊತೆಯಲಿ ಸೀರಿಯಲ್ ಸಹಾ ಒಂದಾಗಿದೆ. ಆರಂಭದಿಂದಲೂ ಜನರ ಮನಸ್ಸನ್ನು ಗೆದ್ದಿರುವ ಸೀರಿಯಲ್ ನಲ್ಲಿ ಇದೀಗ ಮೊದಲ ಇಂತ ಮುಗಿದು ಎರಡನೇ ರೋಚಕ ಹಂತದ ಸಂಚಿಕೆಗಳು ಪ್ರಸಾರವಾಗುತ್ತಿವೆ. ನಂಬಿಕೆಯೇ ಜೀವನ ಅಂತ ಮುಖವಾಡ ಧರಿಸಿ, ಜನರಿಗೆ ಮೋಸ ಮಾಡಿ ಬದುಕುತ್ತಿದ್ದ ನಾಯಕ ಆರ್ಯ , ಅವನ ಆಪ್ತ ಜೇಂಡೇ ಅಸಲಿ ಬಣ್ಣವನ್ನು ಅನು ಅಂದ್ರೆ ರಾಜನಂದಿನಿಯ ಪುನರ್ಜನ್ಮ ಪಡೆದ ನಾಯಕಿ ಬಯಲು ಮಾಡಿದ್ದಾಗಿದೆ.

ರಾಜನಂದಿನಿಗೆ ಆರ್ಯನ ಮೇಲೆ ಸೇ ಡು, ಆದರೆ ಅನು ಮನಸ್ಸಿನಲ್ಲಿ ಆರ್ಯನಿಗಾಗಿ ಎಲ್ಲೋ ಒಂದು ಕಡೆ ಪ್ರೇಮ‌. ಸಾಲದ ಕ್ಕೆ ಪ್ರೀತಿಯ ಸಂಕೇತವಾಗಿ ಅವಳ ಗರ್ಭದಲ್ಲಿರುವ ಮಗು ಅವಳನ್ನು ಆರ್ಯನ ವಿ ರು ದ್ಧ ಹೋಗಲು ತಡೆಯನ್ನು ಹಾಕುತ್ತಿದೆ. ಆರ್ಯನಿಗೆ ಆಗಬೇಕಾದ ಶಿ ಕ್ಷೆ ಆಗುವ ಮೊದಲೇ ಅನು ಮನಸ್ಸಲ್ಲಿ ಆರ್ಯನ ಬಗ್ಗೆ ಮೃದು ಧೋರಣೆ ಮೂಡಿದೆ. ಅಲ್ಲದೇ ಆರ್ಯನ ತಪ್ಪು ಇಲ್ವೋನೋ ಕೆಲವು ವಿಚಾರಗಳಲ್ಲಿ ಅನ್ನೋ ಭಾವನೆ ಅವಳಲ್ಲಿ ಮೂಡಿದೆ‌.

ಈ ಎಲ್ಲಾ ಬೆಳವಣಿಗೆಗಳ ನಡುವೆ ಅನುವಿನಲ್ಲೇ ಇರುವ ರಾಜನಂದಿನಿ ಇದೀಗ ಅನುವನ್ನು ಸಂಪೂರ್ಣವಾಗಿ ಆವರಿಸ ತೊಡಗಿದ್ದಾಳೆ. ಅನು ತವರು ಮನೆಗೆ ಹೋಗದಂತೆ ತಡೆದಿದ್ದಾಳೆ. ಅನು ಅವರ ತಾಯಿ ತಂದೆ ಮಗಳ ವರ್ತನೆ ಕಂಡು ಆ ತಂ ಕ ಪಟ್ಟಿದ್ದಾರೆ. ರಾಜನಂದಿನಿಯಾಗಿರೋ ಅನು ಜಲಂಧರನಿಗೆ ಕರೆ ಮಾಡಿ ಆರ್ಯನ ಅಸಲಿ ರೂಪ ಹೊರ ತರಲು ಇದೇ ಸರಿಯಾದ ಸಮಯ, ನಿಮ್ಮ ಸಹಾಯ ನನಗೆ ಬೇಕು ಎಂದು ಸಹಾ ಕೇಳಿದ್ದಾಳೆ.
ಅನು ತಾನು ಅನು ಎನ್ನುವುದನ್ನೇ ಮರೆತಂತೆ ವರ್ತಿಸುತ್ತಿದ್ದಾಳೆ.

ವಾಹಿನಿ ಶೇರ್ ಮಾಡಿರುವ ಹೊಸ ಪ್ರೋಮೋ ದಲ್ಲಿ ಸಹಾ ಅನು ಹರ್ಷನ ಬಳಿ ಅವನ ಅತ್ತಿಗೆಯಾಗಿ ಅಲ್ಲದೇ ರಾಜನಂದಿನಿಯಾಗೇ ಮಾತನಾಡಿದ್ದಾಳೆ. ಅನು ಮೇಲೆ ರಾಜನಂದಿನಿ ಯ ಪ್ರಭಾವವೇ ಹೆಚ್ಚಾಗಿದೆ. ರಾಜನಂದಿನಿ ಆರ್ಯವರ್ಧನ್ ಗೆ ಆತನ ಅಸಲಿ ಮುಖವನ್ನು ತೋರಿಸಲು ಸಜ್ಜಾಗಿದ್ದಾಳೆ.. ಈಗ ಪ್ರೇಕ್ಚಕರಿಗೆ ಅನು ಮೇಲೆ ರಾಜನಂದಿನಿಯ ಪ್ರಭಾವ ಹೇಗಿರಲಿದೆ? ರಾಜನಂದಿನಿ ಅನುವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತಗೊಂಡು ಬಿಟ್ಲಾ ಎನ್ನುವ ಕುತೂಗಲವನ್ನು ಕೆರಳಿಸಿದೆ.

Leave A Reply

Your email address will not be published.