ಸಂಚಲನ ಸೃಷ್ಟಿಸಿದ ನಟನ ಟ್ವೀಟ್: ಇಸ್ಲಾಂ ಧರ್ಮಕ್ಕೆ ಮತಾಂತರ ಆದ್ರಾ ನಟ ವಿಶಾಲ್??

Entertainment Featured-Articles News

ತಮಿಳು ನಟ ವಿಶಾಲ್ ತಮಿಳು ಭಾಷೆಯಲ್ಲಿ ಮಾತ್ರವೇ ಅಲ್ಲದೇ ದಕ್ಷಿಣದ ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ನಟನಾಗಿದ್ದಾರೆ. ತಮಿಳಿನ ಸ್ಟಾರ್ ನಟರಲ್ಲಿ ಗುರ್ತಿಸಲ್ಪಡುವ ಈ ನಟನಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಪ್ರಸ್ತುತ ಅವರು ಲಾಠಿ ಎನ್ನುವ ಹೆಸರಿನಲ್ಲಿ ನಿರ್ಮಾಣ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ತಮಿಳು ನಾಡಿನ ನಾಡಿಗರ ಸಂಗಮ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಪಡೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ.

ಈ ಎಲ್ಲಾ ಸಂತೋಷದ ವಿಚಾರಗಳ ನಡುವೆಯೇ ವಿಶಾಲ್ ಟ್ವಿಟರ್ ನಲ್ಲಿ ಮತ್ತೊಂದು ಸಂಭ್ರಮದ ವಿಚಾರವನ್ನು ಹಂಚಿಕೊಂಡಿದ್ದು, ಈ ವಿಚಾರಕ್ಕೆ ಈಗ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅಲ್ಲದೆ ಈ ಟ್ವೀಟ್ ಒಂದು ಹೊಸ ಚರ್ಚೆಯನ್ನು ಸಹಾ ಹುಟ್ಟು ಹಾಕಿದೆ. ಇಷ್ಟಕ್ಕೂ ಈ ಟ್ವೀಟ್ ಏನು? ಅದರಲ್ಲಿ ವಿಶಾಲ್ ಅವರು ಹೇಳಿದಂತಹ ಯಾವ ವಿಚಾರವು ಇದೀಗ ಚರ್ಚೆಯನ್ನು ಹುಟ್ಟು ಹಾಕಿದೆ ಎನ್ನುವ ಅನುಮಾನ ನಿಮ್ಮದಾದರೆ ಅದಕ್ಕೆ ಉತ್ತರ ಇಲ್ಲಿದೆ.

ವಿಶಾಲ್ ಅವರು ತಮ್ಮ ಟ್ವೀಟ್ ನಲ್ಲಿ, ಸರಿ, ನಾನು ಇನ್ನೂ ಹೆಚ್ಚಿನದಾಗಿ ಏನು ಕೇಳಲು ಸಾಧ್ಯವಿದೆ? ಮತ್ತೊಮ್ಮೆ ಅಂಕಲ್ ಆಗಿರುವುದಕ್ಕೆ ಬಹಳ ಖುಷಿಯಾಗಿದೆ. ನನ್ನ ಸಹೋದರಿ ಐಶು ಗೆ ಇಂದು ಒಬ್ಬ ರಾಜಕುಮಾರಿ ಜನಿಸಿದ್ದಾಳೆ. ದಂಪತಿ ಮತ್ತು ಹೆಣ್ಣು ಮಗುವಿಗೆ ಆ ದೇವರು ಆಶೀರ್ವದಿಸಲಿ ಎಂದಿರುವ ಅವರು, ಇಷ್ಟಕ್ಕೇ ಟ್ವೀಟ್ ಮುಗಿಸಿಲ್ಲ. ಮುಂದೆ ಅವರು ಇನ್ಶಾ ಅಲ್ಲಾ, ದೇವರು ಹರಸಲಿ ಎಂದು ಬರೆದು ತಮ್ಮ ಟ್ವೀಟಗ ಮುಗಿಸಿದ್ದಾರೆ.

ನಟ ವಿಶಾಲ್ ಮಾಡಿದ ಟ್ವೀಟ್ ಗೆ ಅವರ ಅಭಿಮಾನಿಗಳು ಖುಷಿಯಿಂದ ಅವರ ಸಹೋದರಿಗೆ ಶುಭ ಹಾರೈಕೆಗಳನ್ನು ನೀಡುತ್ತಾ ಕಾಮೆಂಟ್ ಮಾಡಿದ್ದಾರೆ. ಆದರೆ ಇದೇ ವೇಳೆ‌ ಕೆಲವರು ನಟ ಕೊನೆಯಲ್ಲಿ ಇನ್ಶಾ ಅಲ್ಲಾ ಎಂದು ಬರೆದಿದ್ದರ ಬಗ್ಗೆ ಮಾತನಾಡಿದ್ದು, ಅದನ್ನು ಗುರಿಯಾಗಿಸಿಕೊಂಡ ಕೆಲವರು ನಟ ವಿಶಾಲ್ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರಾ? ಎಂದು ಪ್ರಶ್ನೆ ಮಾಡಿದ್ದು, ಈ ವಿಷಯ ಒಂದು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಈ ವಿಚಾರದಲ್ಲಿ ಕೆಲವು ಸುದ್ದಿಗಳು ಸಹಾ ಹರಿದಾಡಿವೆ ಎನ್ನಲಾಗಿದೆ.

ಇದೇ ವೇಳೆ ನಟ ವಿಶಾಲ್ ಟ್ವೀಟ್ ಗಳನ್ನು ಮಾಡಿದಾಗ ದೇವರನ್ನಜ ಉಲ್ಲೇಖಿಸುವ ಅಭ್ಯಾಸವನ್ನು ಇಟ್ಟುಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ಅವರ ಆಪ್ತ ವಲಯ ವಿಶಾಲ್ ಎಲ್ಲಾ ಧರ್ಮಗಳನ್ನು ಸಹಾ ಒಂದೇ ರೀತಿಯಲ್ಲಿ ನೋಡುತ್ತಾರೆ. ಆದ್ದರಿಂದಲೇ ಅವರು ಈ ರೀತಿ ಟ್ವೀಟ್ ಒಂದನ್ನು ಮಾಡಿದ್ದಾರೆ ಎಂದಿದ್ದರೂ ಸಹಾ, ಸದ್ಯಕ್ಕಂತೂ ನಟನ ಟ್ವೀಟ್ ಚರ್ಚೆಯ ವಿಷಯವಾಗಿದೆ. ಇನ್ನೊಂದರ್ಥದಲ್ಲಿ ಇದು ಒಂದು ವಿ ವಾ ದಕ್ಕೆ ಕೂಡಾ ಕಾರಣವಾಗಿದೆ.

Leave a Reply

Your email address will not be published.