ಸಂಚಲನ ಸೃಷ್ಟಿಸಿದ ಧೋನಿ ಫಸ್ಟ್ ಲುಕ್: ಯಾವ ಸೂಪರ್ ಹೀರೋಗೂ ಕಮ್ಮಿ ಇಲ್ಲ ಎಂದ ನೆಟ್ಟಿಗರು!!
ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಎನ್ನುವ ಹೆಸರಿಗೆ ಪ್ರತ್ಯೇಕವಾದ ಪರಿಚಯದ ಅಗತ್ಯ ಖಂಡಿತ ಇಲ್ಲ. ಟೀಂ ಇಂಡಿಯಾ ಆಟಗಾರನಾಗಿ, ತಂಡದ ದಕ್ಷ ಕ್ಯಾಪ್ಟನ್ ಆಗಿ ಅವರು ಮಾಡಿರುವ ಸಾಧನೆಯಿಂದಾಗಿಯೇ ಅವರಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಧೋನಿ ಅವರ ಜೀವನ ಹಾಗೂ ಸಾಧನೆ ಸಿನಿಮಾ ರೂಪದಲ್ಲೂ ಜನರ ಮುಂದೆ ಬಂದಾಗಿದೆ. ಕ್ರಿಕೆಟ್ ನಿಂದ ಅವರು ನಿವೃತ್ತಿ ಘೋಷಣೆ ಮಾಡಿದರೂ ಸಹಾ ಅವರ ಮೇಲಿನ ಅಭಿಮಾನ ಕ್ರಿಕೆಟ್ ಅಭಿಮಾನಿಗಳಲ್ಲಿ ಕುಗ್ಗಿಲ್ಲ. ಜಾಹೀರಾತು ಗಳಲ್ಲಿ ಧೋನಿ ಚಾರ್ಮ ಹೆಚ್ಚುತ್ತಲೇ ಇದೆ. ಅವರ ಕ್ರೇಜ್ ದುಪ್ಪಟ್ಟಾಗಿದೆ.
ಹೀಗೆ ಕ್ರಿಕೆಟ್ , ವಿಶ್ವ ಪ್ರಸಿದ್ಧ ಬ್ರಾಂಡ್ ಗಳ ರಾಯಭಾರಿ ಆಗಿ ದೊಡ್ಡ ಮಟ್ಟದಲ್ಲಿ ಸದ್ದು, ಸುದ್ದಿ ಮಾಡುವ ಧೋನಿ ಇದೀಗ ಮತ್ತೊಂದು ಜೊಸ ಲುಕ್ ನಲ್ಲಿ ಜನರು ಹಾಗೂ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಅವರ ಹೊಸ ಲುಕ್ ನೋಡಿ ಜನ ಹಾಗೂ ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ. ಹಾಗಾದರೆ ಏನು ಈ ಲುಕ್ ನ ಹಿಂದಿನ ವಿಶೇಷ, ಇಷ್ಟಕ್ಕೂ ಮಹೇಂದ್ರ ಸಿಂಗ್ ಧೋನಿ ಅವರು ಈ ಹೊಸ ಲುಕ್ ಆದ್ರೂ ಏಕೆ? ಎನ್ನೋ ಕುತೂಹಲ ನಿಮ್ಮಲ್ಲಿ ಮೂಡಿದ್ರೆ ಅದಕ್ಕೆ ಉತ್ತರ ಇಲ್ಲಿದೆ.
ಪೌರಾಣಿಕ ವೈಜ್ಞಾನಿಕ ಕಾಲ್ಪನಿಕ ಸರಣಿಯೊಂದರಲ್ಲಿ ಅಥರ್ವ ಪಾತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಫಸ್ಟ್ ಲುಕ್ ಬಹಿರಂಗವಾಗಿದೆ. ಹೌದು ಹೊಸ ಯುಗದ ಧಾರ್ಮಿಕ ಗ್ರಾಫಿಕ್ ಕಾದಂಬರಿ, “ಅಥರ್ವ: ದಿ ಓರಿಜನ್” ನಲ್ಲಿನ ಧೋನಿ ಅವರ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಇದೊಂದು ಪೌರಾಣಿಕ ವೈಜ್ಞಾನಿಕ ವೆಬ್ ಸರಣಿಯಾಗಿದೆ. ಇದು ಧೋನಿ ಎಂಟರ್ಟೈನ್ಮೆಂಟ್ ನಿಂದ ಬೆಂಬಲಿತ ಶೋ ಕೂಡಾ ಆಗಲಿದೆ ಎನ್ನುವುದು ವಿಶೇಷವಾಗಿದೆ.
ಇದು ತಮಿಳಿನ ಬರಹಗಾರ ರಮೇಶ್ ತಮಿಳ್ಮಣಿ ಅವರ ಕಲ್ಪನೆಯಲ್ಲಿ ಮೂಡಿರುವ ಕಥೆಯಾಗಿದ್ದು, ಫಸ್ಟ್ ಲುಕ್ ನಲ್ಲಿ ಧೋನಿ ಯು ದ್ಧ ಭೂಮಿಯಲ್ಲಿ ಆ್ಯನಿಮೇಟಡ್ ಅವತಾರದಲ್ಲಿ ರಾ ಕ್ಷ ಸ ಸೈನ್ಯದ ವಿ ರು ದ್ಧ ಹೋ ರಾ ಡುತ್ತಲಿರುವ ವೀರನ ಪಾತ್ರದಲ್ಲಿ ಇರುವ ಹಾಗೆ ಕಾಣಿಸಿಕೊಂಡಿದ್ದು, ಫಸ್ಟ್ ಲುಕ್ ನೋಡಿ ಅವರ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಅದ್ಭುತವಾಗಿದೆ ಎಂದು ಹಾಡಿ ಹೊಗಳಿ ಕಾಮೆಂಟ್ ಗಳನ್ನು ಹರಿಸುತ್ತಿದ್ದಾರೆ.