ಕನ್ನಡದ ಕಿಸ್ ಸಿನಿಮಾ ಮೂಲಕ ಸಿನಿ ರಂಗಕ್ಕೆ ಅಡಿಯಿಟ್ಟು ಯುವ ಹೃದಯಗಳಿಗೆ ಲಗ್ಗೆ ಇಟ್ಟ ನಟಿ ಶ್ರೀಲೀಲಾ ಅನಂತರ ಭರಾಟೆಯಲ್ಲಿ ನಾಯಕಿಯಾದರು. ಇನ್ನು ಬೈ ಟು ಲವ್ ಹಾಗೂ ದುಬಾರಿ ಅವರ ನಟನೆಯ ಹೊಸ ಸಿನಿಮಾಗಳಾಗಿವೆ. ಆದರೆ ಈ ನಡುವೆ ಅವರು ತೆಲುಗಿನ ಪೆಳ್ಳಿ ಸಂದಡಿ ಸಿನಿಮಾದಲ್ಲಿ ಹಿರಿಯ ನಟ ಶ್ರೀಕಾಂತ್ ಅವರ ಪುತ್ರ ರೋಷನ್ ಜೊತೆ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟಿದ್ದು, ನಟ ರವಿತೇಜ ಅವರ ಮುಂಬರುವ ಸಿನಿಮಾದಲ್ಲಿ ಸಹಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಈಗ ನಟಿ ಶ್ರೀಲೀಲಾ ತಂದೆ ಯಾರು?? ಎನ್ನುವ ವಿಚಾರ ಸಖತ್ ಸದ್ದು ಮಾಡಿದೆ.
ಹೌದು, ನಟಿ ಶ್ರೀಲೀಲಾ ಅವರ ತಾಯಿಯ ಹೆಸರು ಸ್ವರ್ಣಲತಾ.. ಆದರೆ ತಂದೆಯ ಹೆಸರು ಬಂದಾಗ ಆಂಧ್ರದ ಉದ್ಯಮಿ ಶುಭಕರ್ ರಾವ್ ಸುರಪನೇನಿ ಹೆಸರನ್ನು ಹೇಳಲಾಗುತ್ತದೆ. ಆದರೆ ಇದೀಗ ಇದೇ ಉದ್ಯಮಿ ವಿಜಯವಾಡದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಚಿತ್ರನಟಿ ಶ್ರೀಲೀಲಾ ನನ್ನ ಮಗಳಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರು ಪತ್ರಿಕಾಗೋಷ್ಠಿಯಲ್ಲಿ ನಟಿ ಶ್ರೀಲೀಲಾ ಹಲವು ವೇದಿಕೆಗಳಲ್ಲಿ ತಂದೆಯ ಹೆಸರು ಬಂದಾಗ ನನ್ನ ಹೆಸರು ಹೇಳಿದ್ದು, ಇದನ್ನು ನಾನು ಅಲ್ಲಗಳೆಯುತ್ತೇನೆ ಎಂದಿದ್ದಾರೆ.
ಶ್ರೀಲೀಲಾ ಅವರ ತಾಯಿ ತನ್ನ ಮಾಜಿ ಪತ್ನಿಯಾಗಿದ್ದು, ಆಕೆಯನ್ನು ತೊರೆಯ ಇಪ್ಪತ್ತು ವರ್ಷಗಳ ಮೇಲಾಗಿದೆ. ಆಕೆಯಿಂದ ಬೇರ್ಪಡುವಾಗ ಆಕೆ ಕನಿಷ್ಠ ಗರ್ಭಿಣಿ ಸಹಾ ಆಗಿರಲಿಲ್ಲ. ಅಂದ ಮೇಲೆ ಅನಂತರ ಹುಟ್ಟಿದ್ದ ಮಗಳನ್ನು ನನ್ನ ಮಗಳೆಂದು ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದಿರುವ ಶುಭಕರ್ ರಾವ್ ಸರುಪನೇನಿ, ಅಮ್ಮ ಮಗಳು ನನ್ನ ಹೆಸರಿನ ಮೇಲೆ ಸಾಲ ಪಡೆಯುವ, ಆಸ್ತಿ ಮೇಲೆ ಹಕ್ಕು ಪಡೆಯುವ ಪ್ರಯತ್ನ ಮಾಡಿದ್ದಾರೆ ಎನ್ನುವ ಆರೋಪವನ್ನು ಸಹಾ ಅವರು ಈ ವೇಳೆ ಮಾಡಿದ್ದಾರೆ.
ಶುಭಕರ್ ರಾವ್ ಸುರಪನೇನಿ ಅವರು ಕೇವಲ ಆಸ್ತಿಗಾಗಿ ಅವರು ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದು ಅವರಿಗೆ ಲೀಗಲ್ ನೋಟೀಸ್ ನೀಡಲಾಗಿದೆ. ನಮ್ಮ ವಿಚ್ಛೇದನದ ಕೇಸ್ ಫ್ಯಾಮಿಲಿ ಕೋರ್ಟ್ ನಲ್ಲಿದ್ದು ಅದು ಶೀಘ್ರದಲ್ಲೇ ಇತ್ಯರ್ಥ ಆಗಲಿದೆ. ಅಲ್ಲದೇ ಅವರು ತನಗೆ ಇರುವುದು ಒಬ್ಭಳೇ ಮಗಳು ಅದು ಸಾಯಿ ತನ್ವಿ ಸುರಪನೇನಿ ಎಂದು ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದು, ನಟಿ ಶ್ರೀಲೀಲಾ ಈ ಹೇಳಿಕೆಗೆ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಕಾದು ನೋಡಬೇಕಾಗಿದೆ.