ಶ್ರೀರೆಡ್ಡಿಗೆ ಇದೆಂತ ಕರ್ಮ: ಮಧ್ಯರಾತ್ರಿ ರಸ್ತೇಲಿ ನಿಂತು ಹುಡುಗರ ನಂಬರ್ ಪಡೆಯೋ ಸ್ಥಿತಿ ಬಂತಾ?

Entertainment Featured-Articles Movies News

ನಟಿ ಶ್ರೀ ರೆಡ್ಡಿ ಎನ್ನುವ ಹೆಸರು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಚಿರಪರಿಚಿತವಾಗಿದೆ. ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ನಟಿಯ ನಡೆಯು ದಕ್ಷಿಣ ಭಾರತದಲ್ಲಿ ಒಂದು ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ನಟಿ ಶ್ರೀ ರೆಡ್ಡಿ ಮಾಡಿದಂತಹ ಕೆಲಸದಿಂದ ಅಲ್ಲಿಯವರೆಗೂ ಅಷ್ಟಾಗಿ ಜನಪ್ರಿಯತೆ ಪಡೆಯದೆ ಇದ್ದ ನಟಿಯು ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿಬಿಟ್ಟರು. ಚಿತ್ರರಂಗದಲ್ಲಿ ಮಹಿಳೆಯರಿಗೆ ವಂಚನೆಯಾಗುತ್ತಿದೆ, ಅವಕಾಶಗಳ ಹೆಸರಿನಲ್ಲಿ ಲೈಂ ಗಿ ಕ ಶೋಷಣೆ ನಡೆಯುತ್ತಿದೆ ಎಂದು ಹೇಳಿದ್ದ ನಟಿ, ಫಿಲಂ ಚೇಂಬರ್ ಮುಂದೆ ಅ ರೆ ಬೆ ತ್ತ ಲೆಯಾಗಿ ಬಂದು ದೊಡ್ಡ ಸುದ್ದಿಯಾಗಿದ್ದರು. ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಮುಂದಾಳತ್ವ ವಹಿಸಿದ್ದ ನಟಿಯು ದೊಡ್ಡ ದೊಡ್ಡ ಸ್ಟಾರ್ ನಟರ ಹೆಸರುಗಳನ್ನು ಹೇಳಿ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಪ್ರಸ್ತುತ ನಟಿ ಹೈದರಾಬಾದ್ ನಲ್ಲಿ ಇಲ್ಲವಾದರೂ ಆಗಾಗ ಸಿನಿಮಾ ಶೂಟಿಂಗ್ ವಿಚಾರವಾಗಿ ಮತ್ತು ಸಂದರ್ಶನಗಳಿಗಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ತಮ್ಮದೇ ಆದ ಯುಟ್ಯೂಬ್ ಚಾನೆಲ್ ಒಂದನ್ನು ನಟಿ ಆರಂಭಿಸಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ನಟಿಯರಿಗಿಂತ ಹೆಚ್ಚು ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ ಶ್ರೀರೆಡ್ಡಿ. ನಟಿ ಶ್ರೀರೆಡ್ಡಿ ಇತ್ತೀಚಿಗೆ ಒನ್ ನೈಟ್ ಡೇಟಿಂಗ್ ಎಂಬ ನೈಟ್ ಜರ್ನಿಯಲ್ಲಿ ಯೂಟ್ಯೂಬ್ ಚಾನೆಲ್ ಆಂಕರ್‌ಗೆ ತಮ್ಮ ಸಂದರ್ಶನ ನೀಡಿದ್ದು, ಈ ವೇಳೆ ನಡೆದ ವಿಚಾರಗಳು ಈಗ ಸುದ್ದಿಯಾಗಿ ಎಲ್ಲೆಡೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಹೌದು, ನಟಿಯು ಸಂದರ್ಶನದ ವೇಳೆ ಎಂದಿನಂತೆ ತನ್ನದೇ ಆದ ಬಿಂದಾಸ್ ಶೈಲಿಯಲ್ಲಿ ಮಾತನಾಡುತ್ತಾ, ಆ್ಯಂಕರ್ ನನ್ನು ಚುಂಬಿಸಲು ಎಳೆದುಕೊಳ್ಳುವುದು, ಕಾರಿನಲ್ಲಿರುವ ದೀಪಗಳನ್ನು ಆಫ್ ಮಾಡುವುದು ಅದರ ಜೊತೆ ಜೊತೆಗೆ ಕೆಲವೊಂದು ವಯಸ್ಕರು ಮಾತ್ರವೇ ಕೇಳಬಹುದಾದಂತಹ ಸಂಭಾಷಣೆಗಳನ್ನು ಮಾಡುತ್ತಾ, ತುಂಟಾಟದ ಕೆಲಸಗಳನ್ನು ಮಾಡುತ್ತಿರುವಾಗ, ಯೂಟ್ಯೂಬ್ ಚಾನೆಲ್ ಆ್ಯಂಕರ್ ನಟಿಗೆ ಒಂದು ಸವಾಲನ್ನು ಸಹಾ ಹಾಕಿದ್ದಾರೆ. ಆತ ನಟಿಗೆ ರಾತ್ರಿ ವೇಳೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಫೋನ್ ನಂಬರ್ ಕಲೆಕ್ಟ್ ಮಾಡುವಂತೆ ಹೇಳಿದ್ದಾನೆ.

ಈ ಚಾಲೆಂಜ್ ಅನ್ನು ಒಪ್ಪಿಕೊಂಡ ನಟಿ ಶ್ರೀರೆಡ್ಡಿ ಕಾರಿನಿಂದ ಇಳಿದು, ರಸ್ತೆಯಲ್ಲಿ ಹೋಗುವವರನ್ನು ತಡೆದು, ಅವರನ್ನು ಚುಡಾಯಿಸಿ ಅವರಿಂದ ನಂಬರ್ ಪಡೆದಿದ್ದಾರೆ.‌ ಈ ವೇಳೆ ಕೆಲವರು ನಟಿ ಶ್ರೀ ರೆಡ್ಡಿಯನ್ನು ಗುರುತು ಹಿಡಿದಿದ್ದಾರೆ. ಒಟ್ಟಿನಲ್ಲಿ ನಟಿ ಶ್ರೀ ರೆಡ್ಡಿ ಸಿನಿಮಾಗಳಲ್ಲಿ ಹೆಸರು ಮಾಡುವಲ್ಲಿ ಯಶಸ್ಸು ಪಡೆಯಲಿಲ್ಲವಾದರೂ ಈಗ ಸೋಶಿಯಲ್ ಮೀಡಿಯಾಗಳು ಮತ್ತು ಯೂಟ್ಯೂಬ್ ವೀಡಿಯೋಗಳ ಮೂಲಕ ಸಿಕ್ಕಾಪಟ್ಟೆ ಸದ್ದು, ಸುದ್ದಿ ಎರಡನ್ನೂ ಮಾಡುತ್ತಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಮಾತನಾಡುತ್ತಾ ನೀಡುವ ಹೇಳಿಕೆಗಳ ಮೂಲಕ ವಿ ವಾ ದಕ್ಕೆ ಕಾರಣವಾಗುತ್ತಾರೆ.

Leave a Reply

Your email address will not be published.