ಶ್ರೀಮಂತ ಮಹಿಳೆಯರು ತಮಗಿಂತ ಚಿಕ್ಕವರನ್ನು ಮದುವೆಯಾಗೋದನ್ನ ನೋಡೋಕೆ ಖುಷಿ ಆಗ್ತಿದೆ: ಕತ್ರೀನಾರನ್ನು ಕುಟುಕಿದ ಕಂಗನಾ
ಬಾಲಿವುಡ್ ನಟಿ ಕಂಗನಾ ರಣಾವತ್ ಎಂದರೆ ಇತ್ತೀಚಿನ ದಿನಗಳಲ್ಲಿ ಒಂದು ಸಂಚಲನ, ಒಂದು ವಿ ವಾ ದ ಅಥವಾ ಹೊಸ ಚರ್ಚೆಗೆ ಕಾರಣವಾಗುವ ವ್ಯಕ್ತಿ ಎನ್ನುವಂತೆ ಆಗಿದೆ. ಕಂಗನಾ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ನೀಡುವ ಹೇಳಿಕೆಗಳು, ಹುಟ್ಟು ಹಾಕುವ ವಿ ವಾ ದಗಳು ಹಾಗೂ ಮಾಡುವ ಟೀಕೆಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಾಗುವುದು ಸಹಜವಾಗಿದೆ. ಈಗ ಮತ್ತೊಮ್ಮೆ ಕಂಗನಾ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅವರ ಟಾರ್ಗೆಟ್ ಆಗಿರೋದು ಬಾಲಿವುಡ್ ನ ಕ್ಯೂಟ್ ಕಪಲ್ ಎನಿಸಿಕೊಂಡ ವಿಕ್ಕಿ ಕೌಶಲ್ -ಕತ್ರೀನಾ ಕೈಫ್.
ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಮದುವೆ ಒಂದು ಹಾಟ್ ಟಾಪಿಕ್ ಆಗಿದೆ. ಈ ಅದ್ದೂರಿ ಮದುವೆಯ ಸುದ್ದಿಗಳು ಗಮನ ಸೆಳೆದಿವೆ. ಈಗ ಇದೇ ಮದುವೆಯ ಬಗ್ಗೆ ನಟಿ ಕಂಗನಾ ರಣಾವತ್ ಅವರು ಕಮೆಂಟ್ ಒಂದನ್ನು ಮಾಡಿದ್ದಾರೆ. ಆದರೆ ವಿಶೇಷ ಏನೆಂದರೆ ಕಂಗನಾ ಎಲ್ಲೂ ಕೂಡಾ ವಿಕ್ಕಿ-ಕತ್ರೀನಾ ಜೋಡಿಯ ಹೆಸರನ್ನು ಮಾತ್ರ ಬಳಸಿಲ್ಲ. ಹೆಸರು ಹೇಳದೆಯೇ ಕಂಗನಾ ಕಾಮೆಂಟ್ ಮಾಡಿದರೂ ಸಹಾ, ಅದು ಯಾರನ್ನು ಕುರಿತು ಎನ್ನುವುದು ಮಾತ್ರ ಸುಲಭವಾಗಿಯೇ ಎಲ್ಲರಿಗೂ ಅರ್ಥವಾಗುತ್ತಿದೆ.
ಕಂಗನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ಯಶಸ್ವಿ ಪುರುಷರು ತಮಗಿಂತ ಕಿರಿಯ ವಯಸ್ಸಿನ ಮಹಿಳೆಯರನ್ನು ಮದುವೆಯಾಗುವ ಕಥೆಗಳನ್ನು ನಾವು ಕೇಳುತ್ತಾ ಬೆಳೆದಿದ್ದೇವೆ. ಅಲ್ಲದೇ ಮಹಿಳೆಯರು ತಮಗಿಂತ ಪತಿಗಿಂತ ಹೆಚ್ಚು ಯಶಸ್ಸು ಪಡೆದಿರುವುದನ್ನೇ ಒಂದು ಸಮಸ್ಯೆ ಎಂದು ನೋಡುವಂತಹ ದಿನಗಳಲ್ಲಿ ವಯಸ್ಸು ಮೀರಿದ ಮಹಿಳೆಯರುವಯಸ್ಸಿನಲ್ಲಿ ಕಿರಿಯ ಪುರುಷರನ್ನು ಮದುವೆಯಾಗುವುದು ಅಸಾಧ್ಯವೇ ಆಗಿತ್ತು.
ಆದರೆ ಈಗ ಶ್ರೀಮಂತ ಮಹಿಳೆಯರು, ಭಾರತೀಯ ಸಿನಿಮಾ ರಂಗದ ಪ್ರಮುಖ ಮಹಿಳೆಯರು ಇಂತಹ ನಿಯಮಗಳನ್ನು ಮುರಿಯುವುದನ್ನು ನೋಡುವುದಕ್ಕೆ ಸಂತೋಷವಾಗುತ್ತಿದೆ. ಲಿಂಗ ಸಮಾನತೆಯ ಕುರಿತಾಗಿ ತಮ್ಮ ದೃಷ್ಟಿಕೋನವನ್ನು ಉತ್ತಮ ಪಡಿಸುತ್ತಿರುವ ಪುರುಷ, ಸ್ತ್ರೀಯರಿಗೆ ಅಭಿನಂದನೆಗಳು ಎಂದು ಕಂಗನಾ ಬರೆದುಕೊಂಡಿದ್ದಾರೆ. ಈ ಮೂಲಕ ವಿಕ್ಕಿ-ಕತ್ರೀನಾ ನಡುವಿನ ವಯಸ್ಸಿನ ಅಂತರದ ಬಗ್ಗೆ ಪರೋಕ್ಷವಾಗಿ, ಪಾಸಿಟಿವ್ ವಿಚಾರವೊಂದರ ಮೂಲಕ ಮಾತನಾಡಿದ್ದಾರೆ ಕಂಗನಾ.