“ಶ್ರೀದೇವಿ ಜೊತೆ ನಾನು ಸುತಾರಾಂ ನಟಿಸಿಲ್ಲ” ಎಂದಿದ್ದ ಬಾಲಿವುಡ್ ನಟ:ಆ ನಟ ಯಾರು? ಹಾಗೆನ್ನಲು ಕಾರಣವೇನು?

0 2

ಭಾರತೀಯ ಸಿನಿಮಾರಂಗದ ಮೊಟ್ಟಮೊದಲ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡ ನಟಿ ಎಂದರೆ ಅದು ದಿವಂಗತ ನಟಿ ಶ್ರೀದೇವಿ ಅವರು. ನಟಿ ಶ್ರೀದೇವಿ ಬಹುಭಾಷಾ ತಾರೆಯಾಗಿ ತನ್ನದೇ ಆದಂತಹ ವರ್ಚಸ್ಸನ್ನು ಭಾರತೀಯ ಚಿತ್ರರಂಗದಲ್ಲಿ ಉಳಿಸಿ ಹೋಗಿರುವ ಅದ್ಭುತ ಹಾಗೂ ಸೂಪರ್ ಸ್ಟಾರ್ ನಟಿಯಾಗಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜ ನಟರು ಶ್ರೀದೇವಿ ಅವರ ಜೊತೆ ನಾಯಕರಾಗಿ ನಟಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ನಟ ವೆಂಕಟೇಶ್, ನಾಗಾರ್ಜುನ, ಇನ್ನು ಹಿರಿಯ ನಟರಾದ ಎನ್ ಟಿ ರಾಮರಾವ್ ,‌ನಾಗೇಶ್ವರ ರಾವ್, ಶೋಭನ್ ಬಾಬು, ತಮಿಳು ನಟರಾದ ರಜನಿಕಾಂತ್,‌ ಶಿವಾಜಿ ಗಣೇಶನ್, ಕಮಲ ಹಾಸನ್, ಬಾಲಿವುಡ್ ನಲ್ಲಿ ಜಿತೇಂದ್ರ, ಅಮಿತಾ ಬಚ್ಚನ್,‌ ರಾಜೇಶ್ ಖನ್ನಾ, ಶಾರುಖ್ ಖಾನ್ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಏಕೆಂದರೆ ನಟಿ ಶ್ರೀದೇವಿ ಅವರು ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿಸಿದ್ದಾರೆ.

ಇಂತಹ ಸೂಪರ್ ಸ್ಟಾರ್ ಆಗಿದ್ದ ನಟಿ ಶ್ರೀದೇವಿ ಅವರ ಜೊತೆಗೆ ಬಾಲಿವುಡ್ ನಟ ಅಮೀರ್ ಖಾನ್ ಅವರು ಮಾತ್ರ ಸಿನಿಮಾ ಮಾಡಲು ಒಪ್ಪಿಕೊಂಡಿರಲಿಲ್ಲ ಎಂದರೆ ಅದು ಬಹಳ ಆಶ್ಚರ್ಯ ಉಂಟುಮಾಡುತ್ತದೆ. ಹೌದು ಬಾಲಿವುಡ್ ಸಿನಿಮಾ ರಂಗದಲ್ಲಿ ಮಿಸ್ಟರ್ ಪರ್ಫೆಕ್ಟ್ ಎನ್ನುವ ಹೆಸರನ್ನು ಪಡೆದುಕೊಂಡಿರುವ ನಟ ಅಮೀರ್ ಖಾನ್. ಇಂದು ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಟ ಅಮೀರ್ ಖಾನ್ ಅಂದು ಶ್ರೀದೇವಿ ಜೊತೆ ನಟಿಸುವುದಕ್ಕೆ ಸುತಾರಾಂ ಒಪ್ಪಿಕೊಂಡಿರಲಿಲ್ಲ ಎನ್ನುವ ವಿಚಾರ ಬಹಳ ವಿಚಿತ್ರ ಎನಿಸುವುದು ಮಾತ್ರವಲ್ಲದೇ ಅವರು ಏಕೆ ಹೀಗೆ ಹೇಳಿದರು ಎನ್ನುವ ಕುತೂಹಲ ಕೂಡಾ ಮೂಡುತ್ತದೆ.

1988 ರಲ್ಲಿ ಖಯಾಮತ್ ಸೆ ಖಯಾಮತ್ ಸಿನಿಮಾ ಬಿಡುಗಡೆಯಾಗಿ ಬಾಲಿವುಡ್ ಸೀಮೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿತು. ಈ ಸಿನಿಮಾದ ಯಶಸ್ಸಿನ ನಂತರ ಅಮೀರ್ ಖಾನ್ ಬಾಲಿವುಡ್ ನಲ್ಲಿ ದೊಡ್ಡ ಹೆಸರನ್ನು ಪಡೆದುಕೊಂಡರು. ಈ‌‌‌ ಒಂದು ಸಿ‌ನಿಮಾ ಮೂಲಕ ಅವರು ಸ್ಟಾರ್ ನಟನಾಗಿ ಹೋದರು. ಆ ದಿನಗಳಲ್ಲಿ ಅವರಿಗೆ ಸಹಜವಾಗಿಯೇ ನಟಿ ಶ್ರೀದೇವಿಯ ಜೊತೆ ನಾಯಕನಾಗಿ ನಟಿಸುವ ಅವಕಾಶವೊಂದು ಅವರನ್ನು ಅರಸಿ ಬಂದಿತ್ತು. ಅಲ್ಲದೇ ಆ ಹೊಸ ಸಿನಿಮಾಕ್ಕಾಗಿ ಶ್ರೀದೇವಿ ಅವರ ಜೊತೆಯಲ್ಲಿ ಅಮೀರ್ ಖಾನ್ ಫೋಟೋ ಶೂಟ್ ಕೂಡಾ ನಡೆದಿತ್ತು. ಆದರೆ ನಂತರದ ದಿನಗಳಲ್ಲಿ ಅಮೀರ್ ಖಾನ್ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಲಿಲ್ಲ.

ಅಮೀರ್ ಖಾನ್ ಈ ಸಿನಿಮಾ‌‌ ಮಾಡದೇ ಇರಲು ಪ್ರಮುಖವಾದ ಕಾರಣ ತಮ್ಮ ಹಾಗೂ ಶ್ರೀದೇವಿ ನಡುವಿನ ವಯಸ್ಸಿನ ಅಂತರ ವಾಗಿತ್ತು. ಅಮೀರ್ ಖಾನ್ ಅವರು ತಾನು ಶ್ರೀದೇವಿಗೆ ನಾಯಕನಾಗಿ ನಟಿಸುವುದನ್ನು ಜನರು ಖಂಡಿತವಾಗಿ ಒಪ್ಪುವುದಿಲ್ಲ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದರು ಎನ್ನಲಾಗಿತ್ತು. ಅಲ್ಲದೇ ಆಗ ಕಾಲೇಜು ಹುಡುಗನಾಗಿ ಸಿನಿಮಾಗಳಲ್ಲಿ ಇಮೇಜ್ ಪಡೆದುಕೊಂಡಿದ್ದ ಅವರಿಗೆ ಜನರು ಅವರನ್ನು ನಟಿ ಶ್ರೀದೇವಿ ಅವರಿಗೆ ನಾಯಕನಾಗಿ ನೋಡುವುದು ಇಷ್ಟವಾಗುವುದಿಲ್ಲ ಎನ್ನುವ ಕಾರಣಕ್ಕೆ ಅಮೀರ್ ಖಾನ್ ಅವರು ನಟಿ ಶ್ರೀದೇವಿ ಅವರ ಜೊತೆ ನಟಿಸಲು ಒಪ್ಪಲಿಲ್ಲ ಎನ್ನಲಾಗಿದೆ.

Leave A Reply

Your email address will not be published.