ಶೈನ್ ಶೆಟ್ಟಿಗೆ sorry ಮೆಸೆಜ್ ಮಾಡಿದ್ದ ಅಪ್ಪು: ದೊಡ್ಮನೆ ಹುಡುಗನ ದೊಡ್ಡ ಗುಣ ಏನಂತ ಹೇಳಿದ ಶೈನ್ ಶೆಟ್ಟಿ

Written by Soma Shekar

Published on:

---Join Our Channel---

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಈಗ ಒಂದು ಮರೆಯಲಾಗದ ನೆನಪಾಗಿ ಉಳಿದಿದ್ದಾರೆ. ಅವರು ಕೊನೆಯದಾಗಿ ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ಒಂದು ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಆದ ಶೈನ್ ಶೆಟ್ಟಿಯವರ ಹೊಸ ಹೊಟೇಲ್ ನ ಉದ್ಘಾಟನೆ ಕೂಡಾ ಒಂದಾಗಿತ್ತು. ಶೈನ್ ಬನಶಂಕರಿ ಯಲ್ಲಿ ತಾವು ತೆರೆದ ಹೊಸ ಹೊಟೇಲ್ ನ ಉದ್ಘಾಟನೆಗೆ ಅಪ್ಪು ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದರು. ಪುನೀತ್ ಅವರ ಜೊತೆಗೆ ತಮ್ಮ ಬಾಂಧವ್ಯದ ಕುರಿತಾಗಿ ಶೈನ್ ಮಾದ್ಯಮವೊಂದರ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶೈನ್ ಶೆಟ್ಟಿ ಪುನೀತ್ ಅವರನ್ನು ಮೊದಲು ಭೇಟಿಯಾಗಿದ್ದು ಜೇಮ್ಸ್ ಸಿನಿಮಾ‌ ಚಿತ್ರೀಕರಣದಲ್ಲಿ. ಶೈನ್ ಈ ಸಿನಿಮಾದಲ್ಲಿ ಪುನೀತ್ ಅವರ ಜೊತೆಗೆ ನಟಿಸಿದ್ದಾರೆ. ಮೊದಲ ಸಲ ಪುನೀತ್ ಅವರನ್ನು ಭೇಟಿಯಾದಾಗಲೇ ಅವರು ಶೈನ್ ಜೊತೆ ಮಾತನಾಡುತ್ತಾ, ನಿಮ್ಮದೊಂದು ಫುಡ್ ಟ್ರಕ್ ಇದೆ ಅಲ್ವಾ?? ನಾನು ವೀಡಿಯೋ ದಲ್ಲಿ ನೋಡಿದ್ದೇನೆ ಎಂದಾಗ, ದೊಡ್ಡ ಸೂಪರ್ ಸ್ಟಾರ್ ಗೆ ನನ್ನ ಬಗ್ಗೆ ಗೊತ್ತಿದೆ, ನಾನು ಏನು ಮಾಡುತೇನೆಂದು ಅವರಿಗೆ ತಿಳಿದಿದೆ ಎಂದಾಗ ನಂಬಲಾಗದ ಕ್ಷಣವದು ಎಂದಿದ್ದಾರೆ ಶೈನ್ ಶೆಟ್ಟಿ.

ಅವರ ಜೊತೆ ಮಾತನಾಡಲು ಐದು ನಿಮಿಷ ಸಮಯ ಕೇಳಿದರೆ, ಎರಡೂವರೆ ಗಂಟೆಗಳ ಕಾಲ ಮಾತನಾಡಿದರು. ಎಲ್ಲರಿಗೂ ಗಮನ ನೀಡುತ್ತಿದ್ದರು. ನಮ್ಮದು ಚಿಕ್ಕ ಸೆಟ್ಟಿಂಗ್ ಆಗಿದ್ದರಿಂದ ಅವರನ್ನು ಕರೆಯಲು ನಾನು ಹಿಂಜರಿಯುತ್ತಿದ್ದೆ. ಆದರೆ ಅವರು ಹೇಳಿದ್ದು ಒಂದೇ ಮಾತು, ಶೈನ್ ಡೇಟ್ ಹೇಳಿ,‌ ನಾನು ಬರುತ್ತೇನೆ ಎಂದಿದ್ದರಂತೆ. ಹೊಟೇಲ್ ಉದ್ಘಾಟನೆ ಮಾಡಿ ಮಂಗಳೂರು ಶೈಲಿಯ ಊಟವನ್ನು ಬಹಳ ಇಷ್ಟಪಟ್ಟು ಸವಿದಿದ್ದು ಮಾತ್ರವೇ ಅಲ್ಲದೇ ಶೈನ್ ಅವರ ತಾಯಿಯನ್ನು ಸಹಾ ಗುರ್ತಿಸಿ ಮಾತನಾಡಿಸಿದರಂತೆ.

ಶೈನ್ ಒಮ್ಮೆ ಫೋನ್ ನಲ್ಲಿ ಮಾತನಾಡುತ್ತಿರುವಾಗ ಒಂದು ಮಿಸ್ ಕಾಲ್ ಬಂದಿತ್ತಂತೆ. ಅನಂತರ ಒಂದು ಮೆಸೆಜ್ ಕೂಡಾ ಬಂದಿತ್ತಂತೆ. ಆ ಕಾಲ್ ಮತ್ತೆ ಮೆಸೆಜ್ ಮಾಡಿದ್ದವರು ಬೇರಾರೂ ಅಲ್ಲ ಪುನೀತ್ ರಾಜ್‍ಕುಮಾರ್ ಅವರು. ಮೆಸೆಜ್ ನಲ್ಲಿ ಅಪ್ಪು ಅವರು, ಸಾರಿ ಬ್ರದರ್, ದ ಕಾಲ್ ವಾಸ್ ಬೈ ಮಿಸ್ಟೇಕ್ ಎಂದು ಹೇಳಿದ್ದರಂತೆ. ಸೂಪರ್ ಸ್ಟಾರ್ ಆಗಿದ್ದ ಅವರು ಸಾರಿ ಎಂದು ಮೆಸೆಜ್ ಮಾಡಿದ್ದು ನೋಡಿ ಶೈನ್ ತಮ್ಮ ಮನಸ್ಸಿನಲ್ಲಿ ಹೇಗೆ ವ್ಯಕ್ತಿ ಇಷ್ಟು ಸರಳವಾಗಿರಲು ಸಾಧ್ಯ? ಎಂದು ಕೊಂಡಿರಂತೆ.

ಅಲ್ಲದೇ ಅವರು, ಯಾವ ರೀತಿ ಪುನೀತ್ ಅವರು ಬೆಳೆದಿರಬೇಕು? ಎಂದು ಆಲೋಚನೆ ಮಾಡಿದರಂತೆ. ಅಲ್ಲದೇ ನಾನು ಅವರು ತೆರೆ ಮೇಲೆ ನೋಡಿದಾಗ ಮೊದಲು ಭೇಟಿ ಮಾಡಿದಾಗ ಅಪ್ಪು ಸರ್ ಎಂದು ಕರೆಯುತ್ತಿದ್ದೆ. ಆನಂತರ ಅವರನ್ನು ಅಣ್ಣ ಎಂದು ಕರೆಯಲು ಶುರು ಮಾಡಿದೆ. ಅವರಲ್ಲಿ ಒಂದು ಡಿವೈನ್ ಪವರ್ ಇತ್ತು , ಎಂದು ಶೈನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ಮನಸ್ಸಿನ ಬಗ್ಗೆ ಮಾತನಾಡಿದ್ದಾರೆ.

Leave a Comment