ಶೃತಿ ಹಾಸನ್ ಗೆ ಮದುವೆ ಆಯ್ತಾ? ಶೃತಿ ಬಾಯ್ ಫ್ರೆಂಡ್ ಶಂತನು ಹೇಳಿಕೆಗೆ ಅಭಿಮಾನಿಗಳು ಶಾ ಕ್ !! ಏನಿದು ಸುದ್ದಿ?
ದಕ್ಷಿಣ ಸಿನಿರಂಗದ ಖ್ಯಾತ ನಟ, ದಿಗ್ಗಜ ನಟ ಕಮಲ ಹಾಸನ್ ಅವರ ಪುತ್ರಿ ಶೃತಿ ಹಾಸನ್ ಸಹಾ ದಕ್ಷಿಣ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ, ಬಹು ಬೇಡಿಕೆಯ ನಟಿಯಾಗಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಶೃತಿ ದಕ್ಷಿಣದಲ್ಲಿ ತಮಿಳು ಹಾಗೂ ತೆಲುಗಿನಲ್ಲಿ ಬಹುತೇಕ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಶೃತಿ ಹಾಸನ್ ಸಿನಿಮಾಗಳ ವಿಷಯವಾಗಿ ಮಾತ್ರವೇ ಅಲ್ಲದೇ ತಮ್ಮ ವೈಯಕ್ತಿಕ ಜೀವನದ ವಿಷಯಗಳಿಂದಲೂ ಸುದ್ದಿಯಾಗುವುದು ಉಂಟು. ಅವರ ಲವ್ ಲೈಫ್ ಬಗ್ಗೆ ಈಗಾಗಲೇ ಸುದ್ದಿಗಳಾಗಿದ್ದು, ಶೃತಿ ಹಾಸನ್ ಪ್ರಸ್ತುತ ಶಂತನು ಹಜಾರಿಕಾ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ.
ಶೃತಿ ಈ ಮೊದಲು ಅಂದರೆ ಶಂತನು ಜೊತೆ ಪ್ರೀತಿಯಲ್ಲಿ ಬೀಳುವ ಮೊದಲು ಮೈಕೆಲ್ ಕೊರ್ಸಲೆ ಜೊತೆಗೆ ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಶೃತಿ ಹಾಗೂ ಮೈಕಲ್ ನಡುವಿನ ಪ್ರೀತಿಯ ಕುರಿತಾಗಿ ಅವರು 2016 ರಲ್ಲಿ ಮಾಹಿತಿಯನ್ನು ಬಹಿರಂಗ ಪಡಿಸಿದ್ದರು. ಆದರೆ ಇದು ಮೂರು ವರ್ಷಗಳ ನಂತರ ಬ್ರೇಕಪ್ ಆಯಿತು. 2019 ರಲ್ಲಿ ಶೃತಿ ಹಾಗೂ ಮೈಕೆಲ್ ಕೊರ್ಸಲೆ ನಡುವಿನ ಸಂಬಂಧ ಮುರಿದು ಬಿದ್ದಿತ್ತು. ಇದಾದ ನಂತರ ಕೆಲವು ದಿನಗಳ ಕಾಲ ಶೃತಿ ಡಿಪ್ರೆಶನ್ ಗೆ ಒಳಗಾಗಿದ್ದರು ಎಂದು ಸಹಾ ಹೇಳಲಾಗುತ್ತದೆ.
ಅನಂತರ ಖಿನ್ನತೆಯಿಂದ ಹೊರ ಬಂದ ಶೃತಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾದರು. ಆಗಲೇ ಅವರಿ ಶಂತನು ಪರಿಚಯವಾಗಿದ್ದು, ಆ ಪರಿಚಯ ಸ್ನೇಹ ಮತ್ತು ಪ್ರೀತಿಯಾಗಿ ಬದಲಾಯ್ತು. ಪ್ರಸ್ತುತ ಶೃತಿ ಮತ್ತು ಶಂತನು ಡೇಟಿಂಗ್ ಮಾಡುತ್ತಿದ್ದಾರೆ. ಇನ್ನು ಇವೆಲ್ಲವುಗಳ ನಡುವೆ ಶಂತನು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಈ ವೇಳೆ ಅವರು ಒಂದು ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದಾರೆ. ಶಂತನು ಮಾತುಗಳನ್ನು ಕೇಳಿ ಶೃತಿ ಅವರ ಅಭಿಮಾನಿಗಳು ಶಾ ಕ್ ಆಗಿದ್ದಾರೆ.
ಶಂತನು ಮಾತನಾಡತ್ತಾ, ನಾವಿಬ್ಬರೂ ಈಗಾಗಲೇ ಮದುವೆಯಾಗಿದ್ದೇವೆ. ನಾವಿಬ್ಬರೂ ಸೃಜನಾತ್ಮಕವಾಗಿ ವಿವಾಹವಾಗಿದ್ದು, ಇದು ನಮ್ಮಿಬ್ಬರ ನಡುವಿನ ಬಂಧ ಎಷ್ಟು ಗಟ್ಟಿಯಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ. ಅಲ್ಲದೇ ಅವರು ನಾವಿಬ್ಬರೂ ಸಹಾ ಸೃಜನಾತ್ಮಕ ವ್ಯಕ್ತಿಗಳು, ನಾವು ಸೃಜನಾತ್ಮಕವಾದ ಕೆಲಸಗಳನ್ನು ಒಟ್ಟಾಗಿ ಮಾಡುತ್ತೇವೆ. ಇದು ನಮಗೆ ತುಂಬಾ ಮುಖ್ಯವಾಗಿದೆ. ಇನ್ನು ಮದುವೆ ವಿಚಾರ ಬಂದಾಗ ಅದರ ಬಗ್ಗೆ ನನಗೆ ಗೊತ್ತಿಲ್ಲ, ಕಾಲ ಹೇಗೆ ನಡೆಯುತ್ತೆ ನೋಡೋಣ ಎನ್ನುವ ಮಾತನ್ನು ಹೇಳಿದ್ದಾರೆ.
ಶೃತಿ ತನಗೆ ತುಂಬಾ ಸ್ಪೂರ್ತಿಯನ್ನು ನೀಡುತ್ತಾರೆ ಎನ್ನುವ ಶಂತನು, ನಾವು ಸ್ಪೂರ್ತಿದಾಯಕ ಜೋಡಿ ಎಂದು ಸಹಾ ಹೇಳಿಕೊಂಡಿದ್ದಾರೆ. ಇಬ್ಬರೂ ಅನೇಕ ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತೇವೆ, ನಮ್ಮ ನಡುವಿನ ಬಂಧ ಬಲವಾಗಿದೆ ಎಂದು ಶಂತನು ಹೇಳಿದ್ದಾರೆ. ಶೃತಿ ಪ್ರಸ್ತುತ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ನಟ ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾದಲ್ಲಿಯೂ ಶೃತಿ ಹಾಸನ್ ಅವರು ನಾಯಕಿಯಾಗಿದ್ದಾರೆ.