ಶೂಟಿಂಗ್ ವೇಳೆ ಗಾಯಕಿಯ ಮುಖ ಕಚ್ಚಿದ ಹಾವು: ಶಾಕಿಂಗ್ ವೀಡಿಯೋ ವೈರಲ್
ಅಮೆರಿಕಾದ ಗಾಯಕಿಯು ಮೇಟಾ ಅವರು ಹಾಡೊಂದನ್ನು ಹಾಡುವ ವೀಡಿಯೋ ಚಿತ್ರೀಕರಣದ ಸಮಯದಲ್ಲಿ ಅವರ ಮುಖಕ್ಕೆ ಹಾವೊಂದು ಕಚ್ಚಿರುವ ಘಟನೆಯು ನಡೆದಿದೆ. ಗಾಯಕಿ ಮೇಟಾ ಅವರು ಈ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಹತ್ತು ಸೆಕೆಂಡ್ ಗಳ ಈ ವೀಡಿಯೋದಲ್ಲಿ ಆ ದೃಶ್ಯವನ್ನು ನೋಡಬಹುದಾಗಿದ್ದು, ಶಾಕಿಂಗ್ ವೀಡಿಯೋ ನೋಡಿದ ಮೇಟಾ ಅಭಿಮಾನಿಗಳು ಶಾ ಕ್ ಆಗಿದ್ದಾರೆ ಹಾಗೂ ನಟಿಗೆ ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ವೀಡಿಯೋದಲ್ಲಿ ನೋಡಿದಾಗ ಗಾಯಕಿ ಮೇಟಾ ಅವರು ನೆಲದ ಮೇಲೆ ಮಲಗಿದ್ದಾರೆ. ಅದಾಗಲೇ ಅವರ ಮೈಮೇಲೆ ಒಂದು ಕಪ್ಪು ಬಣ್ಣದ ಹಾವನ್ನು ಬಿಡಲಾಗಿರುತ್ತದೆ. ಅದೇ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಣದ ಶಾಟ್ ಗೆ ಅನುಸಾರವಾಗಿ ಇನ್ನೊಂದು ಹಾವನ್ನು ನಟಿಯ ಮೈಮೇಲೆ ಬಿಡಲು ಸಜ್ಜಾಗುತ್ತಿರುವುದನ್ನು ನೋಡಬಹುದು. ಹಾವನ್ನು ಬಿಡುತ್ತಿರುವ ವ್ಯಕ್ತಿಯ ಕೈಯಲ್ಲಿ ಒಂದು ಬಿಳಿಯ ಹಾವನ್ನು ನಾವು ನೋಡಬಹುದಾಗಿದೆ.
ಬಿಳಿ ಹಾವನ್ನು ಮೇಟಾ ಅವರ ಮೇಲೆ ಬಿಡುವ ವೇಳೆಗೆ ಸರಿಯಾಗಿ ಅನಿರೀಕ್ಷಿತ ಎನ್ನುವಂತೆ ಅದಾಗಲೇ ಅವರ ಮೇಲಿದ್ದ ಕಪ್ಪು ಬಣ್ಣದ ಹಾವು ಮೇಟಾ ಅವರ ಮುಖದ ಭಾಗದಲ್ಲಿ ಕಚ್ಚಿದೆ. ಮೇಟಾ ಕೂಡಲೇ ಅದನ್ನು ಕೈಯಲ್ಲಿ ಹಿಡಿದು ಪಕ್ಕಕ್ಕೆ ಹಾಕಿದ್ದಾರೆ. ಆ ದೃಶ್ಯದಲ್ಲಿ ಗಾಯಕಿಯ ಮುಖದಲ್ಲಿ ಒಂದು ಭಯ ಸ್ಪಷ್ಟವಾಗಿ ಕಾಣುವುದನ್ನು ನಾವು ನೋಡಬಹುದಾಗಿದೆ. ಈ ಶಾಕಿಂಗ್ ವೀಡಿಯೋವನ್ನು ಮೇಟಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮೇಟಾ ಶೇರ್ ಮಾಡಿದ ವೀಡಿಯೋವನ್ನು ಈಗಾಗಲೇ ನಾಲ್ಕು ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಲೈಕ್ ಗಳನ್ನು ನೀಡಿದ್ದಾರೆ. ಹಾವು ವಿಷಕಾರಿ ಆಗದ ಕಾರಣ ಗಾಯಕಿಗೆ ಅಪಾಯ ಸಂಭವಿಸಿಲ್ಲ. ಆಕೆಯ ಅಭಿಮಾನಿಗಳು ಕಾಮೆಂಟ್ ಮಾಡಿ, ದೇವರ ದಯೆ ನಿಮಗೇನು ಆಗಿಲ್ಲ, ನಮಗೆ ಈಗ ಸಮಾಧಾನ ಎನಿಸಿದೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.