ಶೂಟಿಂಗ್ ನಡುವೆ ಪ್ರಭಾಸ್ ಕೊಟ್ಟ ಸರ್ಪ್ರೈಸ್ ಕಂಡು ಸಖತ್ ಥ್ರಿಲ್ಲಾದ ದೀಪಿಕಾ ಪಡುಕೋಣೆ

Written by Soma Shekar

Published on:

---Join Our Channel---

ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನ ಯಾವ ಸ್ಟಾರ್ ನಟನಿಗೂ ಇಲ್ಲದ ಬೇಡಿಕೆ ಪಡೆದಿರುವ ಪ್ರಭಾಸ್ ಅವರಿಗೆ, ಬಾಲಿವುಡ್ ನಟರಿಗೂ ನೀಡದಷ್ಟೂ ಸಂಭಾವನೆಯನ್ನು ನೀಡಿ ತಮ್ಮ ಸಿನಿಮಾಗಳಿಗೆ ನಾಯಕನನ್ನಾಗಿ ಮಾಡಿಕೊಳ್ಳಲು ನಿರ್ಮಾಪಕರು ಹಾಗೂ ನಿರ್ದೇಶಕರು ಸಿದ್ಧರಿದ್ದಾರೆ. ರಾಧೇ ಶ್ಯಾಮ್, ಸಲಾರ್, ಆದಿಪುರುಷ್, ಪ್ರಾಜೆಕ್ಟ್ ಕೆ, ಸ್ಪಿರಿಟ್ ಹೀಗೆ ಒಂದರ ಬೆನ್ನಲ್ಲೇ ಮತ್ತೊಂದು ಸಿನಿಮಾದಲ್ಲಿ ಪ್ರಭಾಸ್ ಸಖತ್ ಬ್ಯುಸಿಯಾಗಿದ್ದಾರೆ.

ಪ್ರಸ್ತುತ ಪ್ರಭಾಸ್ ಮಹಾನಟಿ ನಿರ್ದೇಶಕ ನಾಗ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಟಾಲಿವುಡ್ ಅಂಗಳಕ್ಕೆ ಅಡಿಯಿಟ್ಟಿದ್ದಾರೆ. ಅಲ್ಲದೇ ನಟಿ ಈ ಹೊಸ ಸಿನಿಮಾ ಬಗ್ಗೆ ಹೊಸ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ನಟಿ ದೀಪಿಕಾ ಪಡುಕೋಣೆ ಗೆ ಪ್ರಭಾಸ್ ವಿಶೇಷವಾದ ಸರ್ಪ್ರೈಸ್ ಒಂದನ್ನು ನೀಡಿದ್ದು, ನಟಿ ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅದನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

ನಟ ಪ್ರಭಾಸ್ ಆದಿ ಪುರುಷ್ ಸಿನಿಮಾದ ವೇಳೆ ಸೈಫ್ ಕುಟುಂಬಕ್ಕೆ ಬಿರಿಯಾನಿ ಹಾಗೂ ವಿಶೇಷ ತಿನಿಸುಗಳನ್ನು ಕಳುಹಿಸಿದ್ದರು. ಆಗ ಕರೀನಾ ಬಹಳ ಖುಷಿಯಿಂದ ಆ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದರು. ಈಗ ಅದೇ ರೀತಿಯಲ್ಲಿ ತಮ್ಮ ಜೊತೆ ನಾಯಕಿಯಾಗಿ ನಟಿಸುತ್ತಿರುವ ದೀಪಿಕಾ ಪಡುಕೋಣೆಗೂ ಇಂತಹುದೇ ಒಂದು ಭೂರಿ ಭೋಜನದ ವಿಶೇಷ ಉಡಗೊರೆಯನ್ನು ನೀಡಿದ್ದು ದೀಪಿಕಾ ಪಡುಕೋಣೆ ಅದರ ಫೋಟೋ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.

ತೆಲುಗು ಸೀಮೆಯ ವಿಶೇಷ ಹಾಗೂ ಸಾಂಪ್ರದಾಯಿಕ ತಿನಿಸುಗಳನ್ನು ದೀಪಿಕಾ ಪಡುಕೋಣೆ ಅವರು ರುಚಿ ನೋಡಲು ಅನುವು ಮಾಡಿಕೊಟ್ಟಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ತನಗಾಗಿ ನೀಡಿದ ಈ ಭರ್ಜರಿ ಭೋಜನದ ಫೋಟೋವನ್ನು ಶೇರ್ ಮಾಡಿಕೊಂಡಿರುವ ದೀಪಿಕಾ ಪಡುಕೋಣೆ ನಟ ಪ್ರಭಾಸ್ ಮತ್ತು ನಿರ್ದೇಶಕ ನಾಗ್ ಅಶ್ವಿನ್ ಅವರ ಹೆಸರುಗಳನ್ನು ಬರೆದುಕೊಂಡಿದ್ದಾರೆ. ದೀಪಿಕಾ ಪ್ರಸ್ತುತ ತಮ್ಮ ಈ ಹೊಸ ಸಿನಿಮಾಕ್ಕಾಗಿ ಹೈದ್ರಾಬಾದ್ ನಲ್ಲೇ ಇದ್ದಾರೆ.

Leave a Comment