ಶುರುವಾಗ್ತಿದೆ ಸರಿಗಮಪ ಚಾಂಪಿಯನ್ ಶಿಪ್: ರಾಜೇಶ್ ಕೃಷ್ಣನ್ ಅವರ ಸ್ಥಾನ ತುಂಬೋರು ಯಾರು??

0 3

ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಹಾಡುಗಾರಿಕೆಯ ಕಾರ್ಯಕ್ರಮವಾಗಿ ತನ್ನ ಗಾನಸುಧೆ ಮೂಲಕ ನಾಡಿನ ಸಂಗೀತಪ್ರಿಯರ ಮನಸ್ಸನ್ನು ಗೆದ್ದಿರುವ ಸಿಂಗಿಂಗ್ ರಿಯಾಲಿಟಿ ಶೋ ಎಂದರೆ ಅದು ಸರಿಗಮಪ. ಹಲವು ಯಶಸ್ವಿ ಸೀಸನ್ ಗಳನ್ನು ಮುಗಿಸಿರುವ ಸರಿಗಮಪ ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ಹೊಸ ರೂಪದಲ್ಲಿ ಮೂಡಿ ಬರಲು ಸಜ್ಜಾಗಿದೆ. ಈ ಮೂಲಕ ಮತ್ತೊಮ್ಮೆ ಸಂಗೀತಪ್ರಿಯರ ಮನೆಗಳಲ್ಲಿ ನಾದ ಸುಧೆಯನ್ನು ಹರಿಸಲು ಸಜ್ಜಾಗುತ್ತಿದೆ. ಸರಿಗಮಪ ಈ ಬಾರಿ ಸರಿಗಮಪ ಚಾಂಪಿಯನ್ಶಿಪ್ ಎನ್ನುವ ಹೊಸ ಕಾನ್ಸೆಪ್ಟ್ ನೊಂದಿಗೆ ಬರುತ್ತಿದೆ. ಒಂದರ್ಥದಲ್ಲಿ ಈ ಹಿಂದೆ ಕಾಮಿಡಿ ಕಿಲಾಡಿಗಳು ಚಾಂಪಿಯನ್ಶಿಪ್ ನಡೆಸಿದ ಪ್ರೀತಿಯಲ್ಲಿ ಇದೀಗ ಸರಿಗಮಪ ಚಾಂಪಿಯನ್ ಶಿಪ್ ಕೂಡ ಮೂಡಿಬರಲಿದೆ ಎನ್ನಲಾಗುತ್ತಿದೆ.

ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ಸರಿಗಮಪ ಶೋ ನಲ್ಲಿ ಹಿಂದಿನ ಸೀಸನ್ ಗಳಲ್ಲಿ, ಈಗಾಗಲೇ ತಮ್ಮ ಪ್ರತಿಭೆಯನ್ನು ಪ್ರದರ್ಶನ ನೀಡಿದ್ದ ಹಳೆಯ ಸ್ಪರ್ಧಿಗಳು ಮತ್ತೊಮ್ಮೆ ವೇದಿಕೆಗೆ ಬರಲಿದ್ದಾರೆ. ಅವರು ಚಾಂಪಿಯನ್ಶಿಪ್ ಗಾಗಿ ನಡೆಯುವ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಪ್ರಯತ್ನಕ್ಕೆ ತೊಡಗಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಕಷ್ಟು ಹೊಸ ಬದಲಾವಣೆಗಳನ್ನು ಮಾಡಿದ್ದು ಹೊಸ ರೂಪದಲ್ಲಿ ಕಿರುತೆರೆಯ ಪ್ರೇಕ್ಷಕರನ್ನು ಈ ಕಾರ್ಯಕ್ರಮ ರಂಜಿಸಲಿದೆ ಎನ್ನಲಾಗಿದೆ. ಇನ್ನು ಎಂದಿನಂತೆ ಕಿರುತೆರೆಯ ಪ್ರಖ್ಯಾತ ನಿರೂಪಕಿ ಅನುಶ್ರೀ ಅವರು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ.

ಇನ್ನುಳಿದಂತೆ ಗಾಯಕ ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಮಹಾ ಗುರುಗಳಾದ ಹಂಸಲೇಖ ಅವರು ಇರಲಿದ್ದು, ಈಗ ಪ್ರಶ್ನೆ ಮೂಡಿರುವುದು ಗಾಯಕ ರಾಜೇಶ್ ಕೃಷ್ಣನ್ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ?? ಎಂಬುದಾಗಿದೆ. ಹೌದು, ರಾಜೇಶ್ ಕೃಷ್ಣನ್ ಅವರು ಈಗಾಗಲೇ ಎದೆ ತುಂಬಿ ಹಾಡುವೇನು ಎನ್ನುವ ಸಿಂಗಿಂಗ್ ರಿಯಾಲಿಟಿ ಶೋದಲ್ಲಿ ತೊಡಗಿಕೊಂಡಿದ್ದಾರೆ, ಅವರು ಆ ಕಾರ್ಯಕ್ರಮದಲ್ಲಿ ಬ್ಯುಸಿ ಇರುವ ಕಾರಣ, ಸರಿಗಮಪ ಶೋನಲ್ಲಿ ಅವರ ಸ್ಥಾನಕ್ಕೆ ಬರುವವರು ಯಾರು?? ಎನ್ನುವುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಸರಿಗಮಪ ಚಾಂಪಿಯನ್ಶಿಪ್ ಘೋಷಣೆ ಬಹಳಷ್ಟು ಜನ ಸಂಗೀತಪ್ರಿಯರಿಗೆ ಖುಷಿ ನೀಡಿದೆ ಇದೇ ವೇಳೆ ಹೊಸ ಜಡ್ಜ್ ಯಾರು ಬರುತ್ತಾರೆ ಎನ್ನುವ ನಿರೀಕ್ಷಣೆ ಕೂಡಾ ಇದೆ.

Leave A Reply

Your email address will not be published.