ಶೀರಾಮ ಕುತಂತ್ರಿ ಎಂದು ಅವಹೇಳನ ಮಾಡಿದ ಸಹಾಯಕ ಪ್ರಾಧ್ಯಾಪಕಿಗೆ ವಿಶ್ವವಿದ್ಯಾಲಯ ಮಾಡಿದ್ದೇನು??

Entertainment Featured-Articles News

ಅಸಂಖ್ಯಾತ ಹಿಂದುಗಳ ಆರಾಧ್ಯ ದೈವ ಎನಿಸಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಬಗ್ಗೆ ಅ ವ ಹೇ ಳ ನಕಾರಿ ಮಾತುಗಳನ್ನು ಆಡುವ ಮೂಲಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಯೊಬ್ಬರು ಸಾರ್ವಜನಿಕರ ಆ ಕ್ರೋ ಶ ಕ್ಕೆ ಗುರಿಯಾಗಿದ್ದಾರೆ. ಸಹಾಯಕ ಪ್ರಾಧ್ಯಾಪಕಿಯು ನಾಲಗೆ ಹರಿ ಬಿಟ್ಟು ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅದನ್ನು ನೋಡಿದ ಜನರು ಪ್ರಾದ್ಯಾಪಕಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದ ಕೂಡಲೇ, ವಿಶ್ವವಿದ್ಯಾಲಯವು ಆಕೆಯನ್ನು ವಜಾಗೊಳಿಸಿದೆ.

ಇಂತಹದೊಂದು ಘಟನೆಯು ಪಂಜಾಬ್‌ ‌ನ ಜಲಂಧರ್ ನಲ್ಲಿ ನಡೆದಿದೆ. ಶ್ರೀ ರಾಮನ ಬಗ್ಗೆ ನಾಲಿಗೆ ಹರಿಬಿಟ್ಟ ಸಹಾಯಕ ಪ್ರಾಧ್ಯಾಪಕಿಯ ಹೆಸರು ಗುರ್ಸಾಂತ್ ಪ್ರೀತ್ ಕೌರ್ ಎಂದು ತಿಳಿದುಬಂದಿದ್ದು, ಈಕೆ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದರು. ಶ್ರೀರಾಮನನ್ನು ಅ ವ ಹೇ ಳನ ಮಾಡುವಂತಹ ಮಾತುಗಳನ್ನು ಆಡಿದ್ದ ಆಕೆ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು ಎನ್ನಲಾಗಿದೆ. ಇದು ಜನರ ತೀ ವ್ರ ಅಸಮಾಧಾನ ಮತ್ತು ಆ ಕ್ರೋ ಶ ಕ್ಕೆ ಕಾರಣವಾಗಿದೆ.

ಆಕೆ, ಶ್ರೀರಾಮ ಒಬ್ಬ ಒಳ್ಳೆಯ ವ್ಯಕ್ತಿಯಲ್ಲ, ಆತನೊಬ್ಬ ಕುತಂತ್ರಿ ಎಂದು ನಾನು ಕಂಡು ಕೊಂಡಿದ್ದೇನೆ. ರಾವಣ ಒಳ್ಳೆಯ ವ್ಯಕ್ತಿ. ರಾಮನು ಸೀತೆಯನ್ನು ತನ್ನ ಬಲೆಗೆ ಬೀಳಿಸಿಕೊಳ್ಳಲು ಎಲ್ಲಾ ಉಪಾಯಗಳನ್ನು ಮಾಡಿದನು. ಅನಂತರ ಆಕೆಯನ್ನು ಕಷ್ಟಕ್ಕೆ ಸಿಲುಕುವಂತೆ ಮಾಡಿದನು. ರಾವಣನ ಮೇಲೆ ಎಲ್ಲಾ ದೋಷಗಳನ್ನು ಹಾಕಿದ. ಇಂದು ಇಡೀ ಜಗತ್ತು ರಾವಣನನ್ನು ಕೆಟ್ಟವನು ಎಂದು ಹೇಳಿ, ರಾಮನನ್ನು ಒಳ್ಳೆಯವನು ಎಂದು ಪೂಜಿಸುತ್ತಿದೆ ಎನ್ನುವ ಮಾತುಗಳನ್ನು ಆಡಿದ್ದಾರೆ.

ಈ ವಿಡಿಯೋ ವೈರಲ್ ಆಗಿ ಸಾರ್ವಜನಿಕರು ಆ ಕ್ರೋ ಶ ವ್ಯಕ್ತಪಡಿಸಿದ ಬೆನ್ನಲ್ಲೇ ಆಕೆಯನ್ನು ವಜಾ ಮಾಡಿದ ವಿಶ್ವವಿದ್ಯಾಲಯವು ಪ್ರಕಟಣೆ ಯೊಂದನ್ನು ಹೊರಡಿಸಿ, ಗುರ್ಸಾಂಗ್ ಪ್ರೀತ್ ಕೌರ್ ನೀಡುವ ಹೇಳಿಕೆ ಗಳೆಲ್ಲವೂ ಕೂಡಾ ಆಕೆಯ ವೈಯಕ್ತಿಕ ಹೇಳಿಕೆ ಗಳಾಗಿವೆ. ಅವ್ಯಾವುವೂ ಕೂಡಾ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿಲ್ಲ. ನಮ್ಮದು ಜಾತ್ಯಾತೀತ ವಿಶ್ವವಿದ್ಯಾಲಯವಾಗಿದೆ. ಇಲ್ಲಿ ಎಲ್ಲಾ ಜಾತಿ ಹಾಗೂ ಧರ್ಮಗಳ ಜನರನ್ನು ಒಂದೇ ರೀತಿಯ ಗೌರವ ಹಾಗೂ ಪ್ರೀತಿಯಿಂದ ನೋಡಲಾಗುತ್ತದೆ ಬಂದು ಹೇಳಿದೆ.

Leave a Reply

Your email address will not be published.