ಕನ್ನಡ ಕಿರುತೆರೆಯಲ್ಲಿ ಜನರ ಪ್ರೀತಿಯನ್ನು ಗೆದ್ದಿರುವ ಕೆಲವು ಧಾರಾವಾಹಿಗಳು ಅತಿ ಶೀಘ್ರದಲ್ಲೇ ಮುಗಿಯಲಿವೆ. ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯ ಜೀವ ಹೂವಾಗಿದೆ ಹಾಗೂ ಮತ್ತೆ ವಸಂತ ಕ್ಲೈಮ್ಯಾಕ್ಸ್ ಎಪಿಸೋಡ್ ಗಳು ನಡೆಯುತ್ತಿವೆ. ಅಲ್ಲದೇ ಈ ಧಾರಾವಾಹಿಗಳ ಜಾಗಕ್ಕೆ ಮಧ್ಯಾಹ್ನದ ಮನರಂಜನೆ ಎನ್ನುವ ಹಾಗೆ ಎರಡು ತೆಲುಗು ಭಾಷೆಯಿಂದ ಡಬ್ಬಿಂಗ್ ಆಗಿರುವ ಸೀರಿಯಲ್ ಗಳ ಪ್ರೊಮೋಗಳು ಕೂಡಾ ಪ್ರಸಾರವಾಗಿರುವುದನ್ನು ಕಿರುತೆರೆಯ ಪ್ರೇಕ್ಷಕರು ಗಮನಿಸಿದ್ದಾರೆ. ಈಗ ಜೀವ ಹೂವಾಗಿದೆ ಹಾಗೂ ಮತ್ತೆ ವಸಂತ ಸಾಲಿಗೆ ಇನ್ನೊಂದು ಸೀರಿಯಲ್ ಸೇರುತ್ತಿದೆ.
ಹೌದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮತ್ತೊಂದು ಜನಪ್ರಿಯ ಧಾರಾವಾಹಿ ಇಂತಿ ನಿಮ್ಮ ಆಶಾ ಕೂಡಾ ಅತಿ ಶೀಘ್ರದಲ್ಲೇ ಕೊನೆಯಾಗಲಿದೆ ಎನ್ನುವ ಸುದ್ದಿಯೊಂದು ಹೊರ ಬಂದಿದೆ. ಇತ್ತೀಚಿಗಷ್ಟೇ ಯಶಸ್ವಿ 600 ಎಪಿಸೋಡ್ ಗಳನ್ನು ಪೂರ್ತಿ ಮಾಡಿದ ಇಂತಿ ನಿಮ್ಮ ಆಶಾ ಸೀರಿಯಲ್ ಕೂಡಾ ಕೊನೆಯ ಹಂತಕ್ಕೆ ಬಂದು ತಲುಪಿದ್ದು, ಇಂದಿನಿಂದ ಕ್ಲೈಮ್ಯಾಕ್ಸ್ ಎಪಿಸೋಡ್ ಗಳು ( ಡಿಸೆಂಬರ್ 28 ) ಪ್ರಸಾರವಾಗುತ್ತದೆ ಎನ್ನಲಾಗಿದೆ. ಈ ಸೀರಿಯಲ್ ನ ಮೆಚ್ಚಿ ನೋಡುವವರಿಗೆ ಇದು ಬೇಸರ ತರಬಹುದು.
ಇಂತಿ ನಿಮ್ಮ ಆಶಾ ಸೀರಿಯಲ್ ನಲ್ಲಿ ಕನ್ನಡದ ಜನಪ್ರಿಯ ನಟಿ ಸಂಗೀತ ಅನಿಲ್ ಅವರು ಆಶಾ ಪಾತ್ರಕ್ಕೆ ಜೀವ ತುಂಬುತ್ತಾ ಬರುತ್ತಿದ್ದಾರೆ. ಗೃಹಿಣಿಯಾಗಿ ಮನೆ, ಸಂಸಾರ, ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ, ಸಮಸ್ಯೆಗಳನ್ನು ಕೂಡಾ ದಿಟ್ಟತನದಿಂದ ಎದುರಿಸುವ ಮಹಿಳೆಯ ಪಾತ್ರದಲ್ಲಿ ಸಂಗೀತಾ ಅವರು ಮಹಿಳಾ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಸಂಗೀತಾ ಅವರು ತಮ್ಮ ಸಿನಿಮಾ ಹಾಗೂ ಕಿರುತೆರೆಯ ಜರ್ನಿ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.
ಈ ಸೀರಿಯಲ್ ನ ಮೂಲಕ ನಟ ಧರ್ಮ ಅವರು ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದರು. ಅವರು ಸೀರಿಯಲ್ ನಲ್ಲಿ ನಾಯಕಿ ಆಶಾ ಗಂಡನ ಪಾತ್ರದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು. ಒಟ್ಟಾರೆ ಮೂರು ಧಾರಾವಾಹಿಗಳು ಕೊನೆಯ ಹಂತವನ್ನು ತಲುಪಿದ್ದು, ಟಿ ಆರ್ ಪಿ ಕುಗ್ಗಿದ ಕಾರಣದಿಂದ ಈ ಸೀರಿಯಲ್ ಗಳನ್ನು ಮುಗಿಸಲಾಗುತ್ತಿದೆ ಎನ್ನುವ ಮಾತುಗಳು ಕೂಡಾ ಕೇಳಿ ಬರುತ್ತಿದೆ.