ಶೀಘ್ರದಲ್ಲೇ ಮುಗಿಯಲಿದೆಯಾ ಜೊತೆ ಜೊತೆಯಲಿ ಸೀರಿಯಲ್?? ವೀಕ್ಷಕರನ್ನು ಕಾಡಿದೆ ಈ ಪ್ರಶ್ನೆ

Entertainment Featured-Articles Movies News

ಕಿರುತೆರೆ ವಿಚಾರ ಯಾವಾಗಲೇ ಬಂದರೂ ಕೂಡಾ ತಕ್ಷಣ ನೆನಪಾಗುವುದು ಧಾರಾವಾಹಿಗಳು. ‌ಧಾರಾವಾಹಿಗಳು ನೂರಿದ್ದರೂ ಸಹಾ ಟಾಪ್ ಸೀರಿಯಲ್ ಎನ್ನುವ ಹೆಗ್ಗಳಿಕೆಗೆ ಮಾತ್ರವೇ ಕೆಲವೇ ಸೀರಿಯಲ್ ಗಳು ಪಾತ್ರವಾಗಿದ್ದು, ಇವು ಕಿರುತೆರೆಯ ಅಪಾರ ಪ್ರೇಕ್ಷಕರ ಆದರ ಅಭಿಮಾನಗಳನ್ನು ಗಳಿಸಿಕೊಂಡು ಮಿಂಚುತ್ತಿವೆ. ಸಂಜೆಯಾದರೆ ಅನೇಕರಿಗೆ ಮನರಂಜನೆಯ ಪ್ರಮುಖ ಮೂಲವಾಗಿದೆ ಈ ಧಾರಾವಾಹಿಗಳು. ಪ್ರೇಕ್ಷಕರು ಇವುಗಳೊಂದಿಗೆ ಭಾವನಾತ್ಮಕವಾಗಿ ಸಹಾ ಬೆಸೆದುಕೊಂಡಿರುತ್ತಾರೆ.

ಸೀರಿಯಲ್ ಪಾತ್ರಗಳು ತಮ್ಮ ಕುಟುಂಬದ ಒಂದು ಭಾಗವೇನೋ ಎನ್ನುವ ಹಾಗೆ ಭಾವಿಸುವವರ ಸಂಖ್ಯೆ ಸಹಾ ಕಡಿಮೆ ಏನಿಲ್ಲ. ಹೀಗೆ ಜನಪ್ರಿಯತೆಯ ಶಿಖರ ಏರಿ ಅಪಾರ ಸಂಖ್ಯೆಯ ಪ್ರೇಕ್ಷಕರ ಮನಗೆದ್ದ ಸೀರಿಯಲ್ ಮುಗಿಯುವ ಹಂತಕ್ಕೆ ಬರುತ್ತಲಿದೆ ಎಂದಾಗ ಸಹಜವಾಗಿಯೇ ಆ ಸೀರಿಯಲ್ ನ ಅಭಿಮಾನಿಗಳಿಗೆ ಬೇಸರ ಉಂಟಾಗುತ್ತದೆ. ವರ್ಷಗಳ ಕಾಲ ರಂಜಿಸದ ಪಾತ್ರಗಳು ದೂರವಾಗುವುದು ಎನ್ನುವ ಅಸಮಾಧಾನ ಸಹಾ ಅವರನ್ನು ಕಾಡುವುದು ಸಹಜ.

ಈಗ ಅಂತಹುದೇ ಒಂದು ಭಾವನೆ ಪ್ರೇಕ್ಷಕರಲ್ಲಿ ಮೂಡಲು ಆರಂಭವಾಗಿದೆ. ಹೌದು, ಪ್ರೇಕ್ಷಕರಲ್ಲಿ ಸೂಪರ್ ಹಿಟ್ ಆಗಿ ಮನರಂಜನೆ ನೀಡುತ್ತಾ ಟಾಪ್ ಸ್ಥಾನಕ್ಕೆ ಏರಿದ್ದ ಜೊತೆ ಜೊತೆಯಲಿ ಸೀರಿಯಲ್ ಮುಗಿಯಲಿದೆಯಾ? ಎನ್ನುವ ಹೊಸ ಪ್ರಶ್ನೆ ಅಥವಾ ಅನುಮಾನ ಮೂಡಿದೆ. ಈ ಪ್ರಶ್ನೆ ಅಥವಾ ಅನುಮಾನಕ್ಕೆ ಕಾರಣವೂ ಇಲ್ಲದೇ ಇಲ್ಲ. ಏಕೆಂದರೆ ಕಳೆದ ಕೆಲವು ಸಂಚಿಕೆಗಳಿಂದ ಸೀರಿಯಲ್ ನ ಕಥಾ ಹಂದರದ ವೇಗ ಹೆಚ್ಚಾಗಿದೆ.‌ ರಾಜನಂದಿನಿ ಅಧ್ಯಾಯದ ನಂತರ ಸೀರಿಯಲ್ ಪ್ರಮುಖ ಘಟ್ಟ ತೆರೆದುಕೊಂಡಿದೆ.

ನಾಯಕಿ ಅನು ಆರ್ಯವರ್ಧನ್ ಮತ್ತು ಜೇಂಡೆಯ ಅಸಲಿ ಮುಖ ಏನು ಎನ್ನುವುದನ್ನು ಅರಿತುಕೊಂಡಿದ್ದಾಳೆ, ಮೀರಾಳಿಗೆ ಈ ಸತ್ಯವನ್ನು ತಿಳಿಸಿದ್ದಾಳೆ. ಮೀರಾ ಕೂಡಾ ಅನು ಜೊತೆಗೆ ಕೈ ಸೇರಿಸಿಯಾಗಿದೆ. ಇನ್ನು ಅನು ಹರ್ಷವರ್ಧನ್ ಮುಂದೆ ಕೂಡಾ ಆರ್ಯ ಹಾಗೂ ಜೇಂಡೆಯ ಮುಖದ ಮೇಲಿರುವ ನಾಟಕದ ಮುಖವಾಡ ತೆಗೆಯುವ ಮೊದಲ ಪ್ರಯತ್ನ ಮಾಡಿ ಆಗಿದೆ. ಹಾಗಾದರೆ ಆರ್ಯ ಮತ್ತು ಜೇಂಡೆಯ ಆಟ ಮುಗಿಯುವ ಕಾಲ ಹತ್ತಿರದಲ್ಲೇ ಇದೆ ಎನ್ನುವುದು ಅರ್ಥವಾಗಿದೆ.

ಹಾಗಿದ್ದ ಮೇಲೆ ಅನು ಈ ಇಬ್ಬರ ಅಸಲಿಯತ್ತನ್ನು ಜಗತ್ತಿಗೆ ಸಾರಿದರೆ, ಆರ್ಯನ ನಂಬಿಕೆಯ ಮುಖವಾಡ ಕಳಚಿದರೆ ಅಲ್ಲಿಗೆ ರಾಜನಂದಿನಿ ಮಾಡಿದ ಪ್ರತಿಜ್ಞೆ ಅನು ಸಿರಿಮನೆ ಮೂಲಕ ನೆರವೇರಿಸಿದರೆ ಅಲ್ಲಿಗೆ ಕಥೆಯು ಅಂತಿಮ ಚರಣವನ್ನು ಸೇರಿದಂತೆಯೇ ಅಲ್ಲವೇ?? ಹೌದು ಎನ್ನುತ್ತಾರೆ ಪ್ರೇಕ್ಷಕರು. ಅಲ್ಲದೇ ಅನೇಕರಿಗೆ ಜೊತೆ ಜೊತೆಯಲಿ ಅಂತಿನ ಹಂತಕ್ಕೆ ಬಂದಿದೆ ಎನ್ನುವ ನಂಬಿಕೆ ಗಟ್ಟಿಯಾಗತೊಡಗಿದೆ. ವೀಕ್ಷಕರ ಈ ಅನುಮಾನ ನಿಜವೋ, ಸುಳ್ಳೋ ಶೀಘ್ರದಲ್ಲೇ ತಿಳಿಯಬಹುದು.

Leave a Reply

Your email address will not be published.