ಕೆಲವು ದಿನಗಳ ಹಿಂದೆಯಷ್ಟೇ ಗುಜರಾತಿನ ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಿ, ತಾನೇ ಹನಿಮೂನ್ ಎಂದು ಗೋವಾಕ್ಕೆ ಹೋದ ಘಟನೆಯು ವರದಿಯಾಗಿ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಮಾತ್ರವೇ ಅಲ್ಲದೇ ಇಡೀ ದೇಶದಲ್ಲಿ ಅದು ಸಂಚಲನವನ್ನು ಸೃಷ್ಟಿಸಿತ್ತು ಹಾಗೂ ಈ ವಿಚಾರ ಒಂದು ಹಂತದಲ್ಲಿ ವಿ ವಾ ದವನ್ನು ಸಹಾ ಹುಟ್ಟು ಹಾಕಿತ್ತು. ಅಲ್ಲದೇ ಆ ಮದುವೆಗೆ ದೇವಾಲಯದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಸಹಾ ಹೇಳಲಾಗಿತ್ತು. ಈ ವಿಷಯ ಜನರು ಮರೆಯುವ ಮೊದಲೇ ಇದೀಗ ಇಂತಹುದೇ ಮತ್ತೊಂದು ಹೊಸ ಸುದ್ದಿ ಹೊರ ಬಂದಿದ್ದು, ಕಿರುತೆರೆಯ ಜನಪ್ರಿಯ ನಟಿಯೊಬ್ಬರು ತನ್ನನ್ನು ತಾನೇ ಮದುವೆಯಾಗಿ ಅಚ್ಚರಿ ಯನ್ನು ಮೂಡಿಸಿದ್ದಾರೆ.
ಹಿಂದಿ ಕಿರುತೆರೆಯ ಜನಪ್ರಿಯ ಸೀರಿಯಲ್ ದಿಯಾ ಔರ್ ಬಾತಿ ಯ ಮೂಲಕ ಜನಪ್ರಿಯತೆಯನ್ನು ಪಡೆದಿರುವ ನಟಿ ಕನಿಷ್ಕ ಸೋನಿ ಇತ್ತೀಚಿನ ದಿನಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ನಟಿಯ ಕೆಲವೊಂದು ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋಗಳು ದೊಡ್ಡ ಸಂಚಲನವನ್ನು ಸೃಷ್ಟಿಸಿದೆ ಹಾಗೂ ಎಲ್ಲರಿಗೂ ಅಚ್ಚರಿ ಯನ್ನು ಉಂಟು ಮಾಡಿದೆ. ಏಕೆಂದರೆ ನಟಿಯು ಹಣೆಗೆ ಸಿಂಧೂರವನ್ನಿಟ್ಟು, ಕೊರಳಲ್ಲಿ ತಾಳಿ ಧರಿಸಿದ್ದಾರೆ. ಹಾಗಂತ ಅವರು ಯಾವುದೋ ಸೀರಿಯಲ್ ಗಾಗಿ ಆ ರೀತಿ ಸಿದ್ಧವಾಗಿದ್ದಾರೆ ಎಂದು ಕೊಂಡರೆ ಅದು ತಪ್ಪಾಗುತ್ತದೆ.
ಏಕೆಂದರೆ ಇದು ಚಿತ್ರೀಕರಣಕ್ಕಾಗಿ ಅಲ್ಲ, ನಟಿಯು ತನ್ನ ಸೋಶಿಯಲ್ ಮೀಡಿಯಾ ಖಾತೆಯ ಪೋಸ್ಟ್ ಮೂಲಕ ತಾನು ಮದುವೆಯಾಗಿರುವುದಾಗಿ ಹೇಳಿದ್ದಾರೆ. ಆದರೆ ನಟಿಯು ಅನಂತರ ಹೇಳಿದ ವಿಚಾರವೇ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ನಟಿಯು ತಮ್ಮ ಇತ್ತೀಚಿನ ಪೋಸ್ಟ್ ಗಳಲ್ಲಿ ತನ್ನನ್ನು ತಾನೇ ಮದುವೆಯಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಫೋಟೋಗಳನ್ನು ಹಂಚಿಕೊಂಡ ಈ ನಟಿಯು, ನನ್ನನ್ನು ನಾನೇ ಮದುವೆಯಾಗಿದ್ದೇನೆ, ಏಕೆಂದರೆ ನಾನು ನನ್ನೆಲ್ಲಾ ಕನಸುಗಳನ್ನು ಪೂರೈಸಿದ್ದೇನೆ. ನನ್ನನ್ನು ಪ್ರೀತಿಸುವ ಏಕೈಕ ವ್ಯಕ್ತಿ ನಾನೇ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಅವರು ನಾನು ದೇವತೆ, ನಾನು ಶಕ್ತಿಶಾಲಿ, ನನ್ನೊಳಗೆ ಶಿವ, ಶಕ್ತಿ ಎಲ್ಲರೂ ಇದ್ದಾರೆ, ಧನ್ಯವಾದಗಳು ಎಂದು ಸಹಾ ಬರೆದುಕೊಂಡಿದ್ದಾರೆ. ನಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದ್ದು, ಇದನ್ನು ನೋಡಿದ ನಟಿಯ ಅಭಿಮಾನಿಗಳು ನಟಿಯ ನಿಲುವಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಬಹಳಷ್ಟು ಜನರು ನಟಿಗೆ ಶುಭ ಹಾರೈಸಿದ್ದಾರೆ. ಆದರೆ ಇದೇ ವೇಳೆ ಕೆಲವರು ತಮ್ಮ ಕಾಮೆಂಟ್ ಗಳಲ್ಲಿ ಟೀಕೆಗಳನ್ನು ಸಹಾ ಮಾಡಿದ್ದಾರೆ. ಆದರೂ ನಟಿ ಯಾವುದಕ್ಕೂ ಸಹಾ ತಲೆಯನ್ನು ಕೆಡಿಸಿಕೊಂಡಿಲ್ಲ ಎನ್ನುವುದು ಸಹಾ ವಾಸ್ತವವಾಗಿದೆ.