ಶಿವ ಪೂಜೆಯಲ್ಲಿ ಈ ನಿಯಮ ಪಾಲಿಸದೇ ಇದ್ದಲ್ಲಿ ಪುಣ್ಯದ ಬದಲಿದೆ ಪಾಪ ಹೆಗಲೇರುವುದು ಎಚ್ಚರ!

Astrology tips Entertainment News ಜೋತಿಷ್ಯ

ಹಿಂದೂ ಧರ್ಮದಲ್ಲಿ, ಸೋಮವಾರವನ್ನು ಶಿವನ ಪೂಜೆ ಮತ್ತು ಆರಾಧನೆಗೆ ಸಮರ್ಪಣೆ ಮಾಡಲಾಗಿದೆ. ಸೋಮವಾರ ಲಯಕಾರನಾದ ಮಹಾದೇವ ಶಿವನ ಆರಾಧನೆಯನ್ನು ಭಕ್ತಿಯಿಂದ ಮಾಡಿದರೆ ಒಬ್ಬ ವ್ಯಕ್ತಿಯು ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಿ ಹೊಂದುತ್ತಾನೆ ಮತ್ತು ಪ್ರತಿಯೊಂದು ಇಚ್ಛೆಯೂ ನೆರವೇರುತ್ತದೆ ಎನ್ನುವ ನಂಬಿಕೆಯಿದೆ.‌ ಸನಾತನ ಸಂಪ್ರದಾಯದ ಪ್ರಕಾರ ಶಿವನು ಭಕ್ತರ ಸರಳ ಆರಾಧನೆಯಿಂದಲೇ ಸಂತೃಪ್ತನಾಗುವನು ಎನ್ನಲಾಗಿದೆ. ಭಕ್ತರ ಭಕ್ತಿಗೆ ಮೆಚ್ಚಿ ಬಹಳ ಬೇಗ ಬಯಸಿದ ವರವನ್ನು ನೀಡುತ್ತಾನೆ ಎನ್ನುವುದು ನಂಬಿಕೆಯಾಗಿದೆ.

ಮಹಾ ಶಿವನ ಆರಾಧನೆಯ ವಿಚಾರ ಬಂದಾಗ ಇಲ್ಲಿ ನಾವು ಕೆಲವೊಂದು ಪ್ರಮುಖ ನಿಯಮಗಳನ್ನು ತಪ್ಪದೇ ಪಾಲಿಸುವುದರಿಂದ ಶಿವರ ಕೃಪೆ ಪ್ರಾಪ್ತವಾಗುವುದು ಎನ್ನಲಾಗಿದೆ‌. ಅಲ್ಲದೇ ಇದು ಅಕಾಲಿಕ ಮ ರ ಣದ ಅಪಾಯವನ್ನು ತಪ್ಪಿಸುತ್ತದೆ ಮತ್ತು ಎಲ್ಲಾ ಶ ತ್ರುಗಳ ಮೇಲೆ ವಿಜಯವನ್ನು ಪಡೆಯಲು ನೆರವು ನೀಡುವುದು. ಅದನ್ನು ನಿರ್ಲಕ್ಷಿಸಿ ಮಾಡುವ ಆರಾಧನೆಯು ಪುಣ್ಯಕ್ಕೆ ಬದಲಾಗಿ ಪಾಪ, ಲಾಭದ ಬದಲಿಗೆ ನಷ್ಟ ಆಗಬಹುದು. ಆದ್ದರಿಂದಲೇ ಶಿವನ ಆರಾಧನೆಯ ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳೋಣ ಬನ್ನಿ.

ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುವುದರಿಂದ ಹೇಗೆ ಮಾಡುವ ಕೆಲಸದಲ್ಲಿ ತ್ವರಿತ ಯಶಸ್ಸು ಸಿಗುತ್ತದೆಯೋ ಅದೇ ರೀತಿ ದೇವರ ದೇವರಾದ ಮಹಾದೇವನನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ, ಭಕ್ತಿಯಿಂದ ಆರಾಧನೆ ಮಾಡಿದರೆ ಯಶಸ್ಸು ಶೀಘ್ರದಲ್ಲೆ ಸಿಗುತ್ತದೆ ಮತ್ತು ಶಿವನ ಆಶೀರ್ವಾದ ನಮ್ಮದಾಗುತ್ತದೆ. ಗಂಗಾ ಜಲವಿಲ್ಲದೆ ಶಿವನ ಆರಾಧನೆ ಅಥವಾ ಅಭಿಷೇಕವನ್ನು ಅಪೂರ್ಣವೆಂದು ಪರಿಗಣಿಸಲಾಗಿದೆ, ಆದ್ದರಿಂದ ಶಿವರಾಧನೆಯ ಶುಭ ಫಲಗಳನ್ನು ಪಡೆಯಲು ಒಬ್ಬರು ಶಿವನಿಗೆ ಹಾಲು ಮತ್ತು ಗಂಗಾಜಲವನ್ನು ಅರ್ಪಿಸಬೇಕು.

ರುದ್ರಾಕ್ಷವು ಶಿವನ ಕಣ್ಣೀರಿನಿಂದ ಸೃಷ್ಟಿಸಲ್ಪಟ್ಟಿದೆ ಎಂದು ನಂಬಲಾಗಿದ್ದು, ಇದು ಶಿವನಿಗೆ ತುಂಬಾ ಪ್ರಿಯವಾಗಿದೆ. ಆದ್ದರಿಂದಲೇ ಶಿವನ ಆರಾಧನೆಯಲ್ಲಿ, ರುದ್ರಾಕ್ಷದ ಜಪಮಾಲೆಯೊಂದಿಗೆ ಶಿವ ನಾಮಸ್ಮರಣೆ ಅಥವಾ ಶಿವ ಮಂತ್ರೋಚ್ಛಾರವನ್ನು ಮಾಡಿ, ರುದ್ರಾಕ್ಷವನ್ನು ಕೊರಳಲ್ಲಿ ಧರಿಸಿ.‌ ಶಿವಾರಾಧನೆಯಲ್ಲಿ ನಾಗಕೇಸರಿ, ಸಂಪಿಗೆ, ಮಲ್ಲಿಗೆ, ಕೇತ್ಕಿ, ಕೇವಡ ಇತ್ಯಾದಿ ಹೂವುಗಳನ್ನು ಎಂದಿಗೂ ಅರ್ಪಿಸಬಾರದು, ಹಾಗೆ ಅರ್ಪಿಸಿದರೆ ಪುಣ್ಯಕ್ಕೆ ಬದಲಾಗಿ ಪಾಪ ಅಂಟುವುದು ಎನ್ನಲಾಗಿದ್ದು, ಭಕ್ತನು ತಪ್ಪು ಮಾಡಿದಂತೆ ಆಗುವುದು.

ಶಿವನನ್ನು ಶೀಘ್ರದಲ್ಲೇ ಪ್ರಸನ್ನವಾಗಿಸಲು ಪೂಜೆಯಲ್ಲಿ ಬಿಲ್ವಪತ್ರೆಯನ್ನು ಅರ್ಪಿಸಬೇಕು. ಆದರೆ ಇದನ್ನು ಮಾಡುವ ಮೊದಲು ಎಲೆಯ ವಜ್ರ ಭಾಗವನ್ನು ಅಂದರೆ ಕಾಂಡವನ್ನು ಮುರಿದು, ಅದನ್ನು ತಲೆ ಕೆಳಗಾಗಿ ಶಿವಲಿಂಗದ ಮೇಲೆ ಅಥವಾ ಶಿವನ ವಿಗ್ರಹದ ಮೇಲೆ ಇಡಬೇಕು. ಬಿಲ್ವ ಪತ್ರದ ಎಲೆಗಳು ಹರಿದಿಲ್ಲ ಎಂದು ಖಚಿತಪಡಿಸಿಕೊಂಡು ಇಡಿ.
ಶಿವನನ್ನು ಪೂಜಿಸುವಾಗ, ಶಿವನನ್ನು ಸಂಪೂರ್ಣವಾಗಿ ಪ್ರದಕ್ಷಿಣೆ ಮಾಡಬಾರದು. ಏಕೆಂದರೆ ಶಿವನ ಪೂಜೆಯಲ್ಲಿ ಶಿವಲಿಂಗದ ಹರಿದು ಹೋಗುವುದನ್ನು ದಾಟಿ ಬರುವುದು ನಿಷಿದ್ಧವಾಗಿದ್ದು,ಶಿವ ಭಕ್ತರು ಅರ್ಧ ದಾರಿಯಲ್ಲಿ ಹಿಂತಿರುಗಿ ಪ್ರದಕ್ಷಿಣೆ ಪೂರ್ಣಗೊಳಿಸಬೇಕು.

ಭಗವಾನ್ ಶಿವನ ಆಶೀರ್ವಾದವನ್ನು ಪಡೆಯಲು, ಸೋಮವಾರದಂದು ಉಪವಾಸವನ್ನು ಆಚರಿಸಬೇಕು ಮತ್ತು ಈ ದಿನದಂದು ಕೇವಲ ಒಂದು ಬಾರಿ ಉಪ್ಪು ರಹಿತ ಪ್ರಸಾದವನ್ನು ಸ್ವೀಕರಿಸಬೇಕು.
( ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳ ಆಧಾರದಲ್ಲಿ ವಿವರಣೆ ನೀಡಲಾಗಿದ್ದು, ಇದು ಸನಾತನ ಸಂಪ್ರದಾಯದ ಭಾಗವಾಗಿದ್ದು, ಜನರ ನಂಬಿಕೆಯ ಹಾಗೂ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಪ್ರಸ್ತುತಪಡಿಸಲಾಗಿದೆ )

Leave a Reply

Your email address will not be published.