ಶಿವಾರಾಧನೆಯಲ್ಲಿ ಒಲಂಪಿಕ್ಸ್ ಪದಕ ವಿಜೇತ: ರಿಯಲ್ ಬಾಹುಬಲಿ ಎಂದ‌ ನೆಟ್ಟಿಗರು

0
194

ಟೋಕಿಯೋ ಒಲಂಪಿಕ್ಸ್ ನಲ್ಲಿ ಪದಕವನ್ನು ಗೆದ್ದ ನಂತರ ಭಾರತೀಯ ಕುಸ್ತಿಪಟು ರವಿ ದಹಿಯಾ ಅವರಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಅಸಂಖ್ಯಾತ ಭಾರತೀಯರು ಶುಭಾಶಯಗಳನ್ನು ಕೋರಿ ಮೆಚ್ಚುಗೆಯನ್ನು ಸೂಚಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ರವಿ ದಹಿಯಾ ಅವರಿಗೆ ಬಹಳಷ್ಟು ಜನರು ಅಭಿನಂದನೆಗಳನ್ನು ಸಲ್ಲಿಸಿದ್ದರು. ಪ್ರಸ್ತುತ ತಮ್ಮ ತವರಿಗೆ ವಾಪಸಾಗಿರುವ ರವಿ ದಹಿಯಾ ಅವರು ತಮ್ಮ ಹರಕೆಯನ್ನು ಪೂರೈಸಿದ್ದು, ಶಿವಲಿಂಗಕ್ಕೆ ಜಲಾಭಿಷೇಕ ವನ್ನು ಮಾಡಿದ್ದಾರೆ. ಅವರು ಹರಕೆಯನ್ನು ಪೂರೈಸಿ ಶಿವಲಿಂಗಕ್ಕೆ ಜಲಾಭಿಷೇಕವನ್ನು ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪಾರ ಜನಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

ರವಿ ದಹಿಯಾ ಅವರು ಒಲಂಪಿಕ್ಸ್ ನಲ್ಲಿ ಪದಕವನ್ನು ಗೆಲ್ಲಬೇಕೆಂಬ ಮನೋಕಾಮನೆ ಯಿಂದ ಅವರ ಕುಟುಂಬದ ಸದಸ್ಯರು ಮನೆಯಲ್ಲಿ ಅಖಂಡ ಜ್ಯೋತಿಯನ್ನು ಬೆಳಗಿಸಿದ್ದರು. ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಅವರ ಮನೋಕಾಮನೆ ನೆರವೇರಿದೆ. ಈ ಹಿನ್ನೆಲೆಯಲ್ಲಿ ತವರಿಗೆ ಹಿಂದಿರುಗಿದ ಕ್ರೀಡಾಪಟು ರವಿ ದಹಿಯಾ ಅವರು ಹರಕೆಯನ್ನು ಪೂರ್ಣಗೊಳಿಸುವುದಕ್ಕಾಗಿ ಕೊಡದಲ್ಲಿ ನೀರನ್ನು ಹೊತ್ತು ತಂದು, ಶಿವಲಿಂಗಕ್ಕೆ ಜಲಾಭಿಷೇಕ ವನ್ನು ಮಾಡಿದ್ದಾರೆ. ಅವರು ಕೊಡದಲ್ಲಿ ನೀರನ್ನು ಹೊತ್ತು ಮಂದಿರಕ್ಕೆ ಬಂದು ಶಿವ ಲಿಂಗಕ್ಕೆ ಜಲಾಭಿಷೇಕ ಮಾಡಿದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ದಹಿಯಾ ಅವರ ಫೋಟೋಗಳಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.‌‌‌ ಇನ್ನು ಬಹಳಷ್ಟು ನೆಟ್ಟಿಗರಿಂದ ಅಪಾರವಾದ ಮೆಚ್ಚುಗೆಗಳು ಹರಿದುಬರುತ್ತಿವೆ. ಫೋಟೋಗಳನ್ನು ನೋಡಿದ ನೆಟ್ಟಿಗರು ರವಿ ದಹಿಯಾ ಅವರನ್ನು ರಿಯಲ್ ಬಾಹುಬಲಿ ಎನ್ನುವ ಮಾತುಗಳಿಂದ ಹಾಡಿ ಹೊಗಳುತ್ತಿದ್ದಾರೆ. ರವಿ ದಹಿಯಾ ಅವರು ಒಲಂಪಿಕ್ಸ್ ನಿಂದ‌ ಬಂದ ನಂತರ ತಮಗೆ ಸ್ಪೂರ್ತಿಯಾಗಿರುವ ಜಮ್ಮುವಿನ ವಿಕ್ರಾಂತ್ ಮಹಾಜನ್ ಅವರನ್ನು ಭೇಟಿ ಮಾಡಿದ್ದರು.

LEAVE A REPLY

Please enter your comment!
Please enter your name here