ಶಿವಣ್ಣನಿಂದ ಅದ್ಭುತ ಗಿಫ್ಟ್ ಪಡೆದು, ನಿಮ್ಮಲ್ಲಿ ಪರಮಾತ್ಮನ ಕಂಡೆ ಎಂದು ಭಾವುಕರಾದ ಆ್ಯಂಕರ್ ಅನುಶ್ರೀ

Entertainment Featured-Articles Movies News

ಕನ್ನಡ ಕಿರುತೆರೆಯಲ್ಲಿ ನಿರೂಪಕಿಯಾಗಿ ದೊಡ್ಡ ಮಟ್ಟದ ಯಶಸ್ಸನ್ನು ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡು, ಸ್ಟಾರ್ ನಿರೂಪಕಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಅನುಶ್ರೀ. ಕನ್ನಡ ಸಿನಿಮಾರಂಗದ ಕಾರ್ಯಕ್ರಮಗಳಲ್ಲಿ ನಿರೂಪಣೆ ವಿಚಾರ ಬಂದಾಗ ಅಲ್ಲಿ ಮೊದಲ ಆಯ್ಕೆ ಅನುಶ್ರೀ ಅವರೇ ಆಗಿರುತ್ತಾರೆ ಎನ್ನುವುದು ನಿಜ. ಕರ್ನಾಟಕದಲ್ಲಿ ಒಬ್ಬ ಸ್ಟಾರ್ ನಟಿಯಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ಅನುಶ್ರೀ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಫಾಲೋಯರ್ಸ್ ಇದ್ದಾರೆ ಎನ್ನುವುದು ಅಕ್ಷರಶಃ ಸತ್ಯವಾದ ವಿಷಯವಾಗಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಷ್ಠಿತ ಶೋಗಳನ್ನು ನಿರೂಪಣೆ ಮಾಡುವ ಮೂಲಕ ಆ ಕಾರ್ಯಕ್ರಮಗಳಿಗೆ ಇನ್ನಷ್ಟು ಮೆರುಗನ್ನು ನೀಡುತ್ತಾರೆ ನಿರೂಪಕಿ ಅನುಶ್ರೀ. ಕನ್ನಡ ಭಾಷೆಯನ್ನು ಅರಳು ಹುರಿದಂತೆ ಮಾತನಾಡುವ ಅನುಶ್ರೀ ಅವರು ಬಹುಬೇಡಿಕೆಯ ನಿರೂಪಕಿ ಕೂಡಾ ಹೌದು. ಅನುಶ್ರೀ ಅವರು ಸಿನಿಮಾರಂಗದಲ್ಲಿಯೂ ತಮ್ಮದೇ ಆದ ಹೆಸರನ್ನು ಮಾಡಿದ್ದು, ಸಿನಿಮಾ ಸೆಲೆಬ್ರಿಟಿಗಳ ಜೊತೆಗೆ ಉತ್ತಮವಾದ ಸ್ನೇಹವನ್ನು ಹೊಂದಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟು ಕೊಂಡಿದ್ದಾರೆ.

ಪ್ರಸ್ತುತ ಅನುಶ್ರೀ ಅವರು ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಡ್ಯಾನ್ಸ್ ರಿಯಾಲಿಟಿ ಶೋ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಈ ಬಾರಿ ಈ ಶೋನ ಭಾಗವಾಗಿದ್ದಾರೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು. ಶೋ ನ ನಾಲ್ಕು ಜನ ಜಡ್ಜ್ ಗಳಲ್ಲಿ ಶಿವಣ್ಣ ಸಹಾ ಒಬ್ಬರಾಗಿದ್ದು, ಕಾರ್ಯಕ್ರಮಕ್ಕೆ ಶಿವಣ್ಣನ ಆಗಮನ ವಿಶೇಷ ಕಳೆಯನ್ನು ಕಟ್ಟಿದೆ. ಕಿರುತೆರೆಯಲ್ಲಿ ಶಿವಣ್ಣನನ್ನು ನೋಡಿ ಪ್ರೇಕ್ಷಕರು ಹಾಗೂ ಅವರ ಅಭಿಮಾನಿಗಳು ಕಾರ್ಯಕ್ರಮವನ್ನು ಬಹಳ ಎಂಜಾಯ್ ಮಾಡುತ್ತಿದ್ದಾರೆ

ಇದೇ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕಡೆಯಿಂದ ನಿರೂಪಕಿ ಅನುಶ್ರೀ ಅವರಿಗೆ ಅಪರೂಪದ ಉಡುಗೊರೆಯೊಂದು ದೊರಕಿದೆ. ಹೌದು, ನಟ ಶಿವಣ್ಣ ಕಾರ್ಯಕ್ರಮದ ವೇಳೆ ತಾವು ಧರಿಸಿದ್ದ ಜಾಕೆಟ್ ಒಂದನ್ನು ಅನುಶ್ರೀ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಶಿವಣ್ಣನಿಂದ ಇಂತಹ ಒಂದು ವಿಶೇಷ ಉಡುಗೊರೆ ಪಡೆದ ಅನುಶ್ರೀ ಅವರು ಬಹಳ ಸಂತೋಷಪಟ್ಟಿದ್ದಾರೆ. ತಮ್ಮ ಸಂತೋಷವನ್ನು ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೆಲವು ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಹಂಚಿಕೊಂಡಿದ್ದಾರೆ.

ಅನುಶ್ರೀ ಅವರು, ಇದು ಯಾವ ಜನ್ಮದ ಪುಣ್ಯ, ಕಳೆದ ವಾರ dkd ಶೂಟ್ ವೇಳೆ ಹೇಳಿದೆ, ಅಣ್ಣ ಜಾಕೆಟ್ ಸಕ್ಕತ್ ಆಗಿದೆ ಅಂತ. ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಅಂದ್ರು. ನಾನು ಸುಮ್ಮೆ ಹೇಳಿರ್ತಾರೆ ಅನ್ಕೊಂಡೆ. ಆದ್ರೆ ಎಷ್ಟೇ ಆದ್ರೂ ಅಣ್ಣಾವರ ರಕ್ತ ಅಲ್ವಾ, ಆಕಾಶ ನೋಡದೇ ಕೈ ಪ್ರೀತಿ ಹಂಚಿದ ಕೈಗಳು ಅದು. ಹೊರಡುವ ಮುನ್ನ ಜಾಕೆಟ್ ಬಿಚ್ಚಿ ಅದರ ಮೇಲೆ, ” With lots of love to dearest friend Anu ” ಬರೆದು ಸಹಿ ಹಾಕಿ ತಮ್ಮ ಕೈಯ್ಯಾರೆ ಜಾಕೆಟ್ ತೊಡಿಸಿ,ಮತ್ತೊಮ್ಮೆ ಮಮತೆ ಮೆರೆದ ಮುತ್ತಣ್ಣ .. …. Thanku @nimmashivarajkumar ನಿಮ್ಮ ರೂಪದಲ್ಲಿ ನಮ್ಮ ಪರಮಾತ್ಮನನ್ನು ಕಾಣ್ತಿದೀವಿ Thankuuuu once again sir. ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published.