ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಸಂಬಂಧದ ಉಳಿವು ಅಳಿವಿನ ಬಗ್ಗೆ ಸೆಲೆಬ್ರಿಟಿ ಸಂಖ್ಯಾ ಶಾಸ್ತ್ರಜ್ಞನ ಜ್ಯೋತಿಷ್ಯ

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಜೀವನದಲ್ಲಿ ಕಳೆದ ಕೆಲವು ದಿನಗಳಿಂದ ಎದ್ದಿದ್ದ ಬಿರುಗಾಳಿಯೊಂದು, ಕೆಲವು ದಿನಗಳ ಹಿಂದೆಯಷ್ಟೇ ಅ ಶ್ಲೀ ಲ ಸಿನಿಮಾಗಳ ತಯಾರಿಕೆ ಹಾಗೂ ಹಂಚಿಕೆ ವಿಚಾರದಲ್ಲಿ ಜೈಲು ಸೇರಿದ್ದ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಪತಿಯ ಮೇಲೆ ಆ ರೋ ಪ ಕೇಳಿ ಬಂದು, ಬಂ ಧ ನಕ್ಕೆ ಒಳಗಾದ ಮೇಲೆ ತೀವ್ರವಾದ ಮುಜುಗರಕ್ಕೆ ಒಳಗಾಗಿದ್ದ ಶಿಲ್ಪಾ ಶೆಟ್ಟಿ ಅವರು ಸ್ವಲ್ಪ ದಿನಗಳ ಮಟ್ಟಿಗೆ ಮಾದ್ಯಮಗಳು, ಟಿವಿ ಶೋ ಹಾಗೂ ಇನ್ನಿತರೆ ಚಟುವಟಿಕೆಗಳಿಂದ ಅಂತರವನ್ನು ಕಾಯ್ದುಕೊಂಡಿದ್ದರು.

ಅನಂತರ ಅವರು ಎಲ್ಲವನ್ನು ಎದುರಿಸಿ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದು ಮಾತ್ರವಲ್ಲದೇ, ತಮ್ಮ ಕೆಲಸಕ್ಕೂ ಹಿಂತಿರುಗಿದ್ದಾರೆ. ರಾಜ್ ಕುಂದ್ರಾ ಜೈ ಲಿನಲ್ಲಿ ಇದ್ದಾಗ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ರಿಂದ ದೂರವಾಗುತ್ತಾರೆ, ವಿಚ್ಛೇದನದ ಕುರಿತಾಗಿ ಆಲೋಚನೆ ಮಾಡಿದ್ದಾರೆ ಎನ್ನುವ ಸುದ್ದಿಗಳು ಸಹಾ ಹರಡಿದ್ದವು. ಆದರೆ ಈ ಎಲ್ಲದರ ನಡುವೆ ಪರಿಸ್ಥಿತಿ ಗಳು ಬದಲಾದವು, ರಾಜ್ ಕುಂದ್ರಾ ಹೊರಗೆ ಬಂದರು.

ರಾಜ್ ಕುಂದ್ರಾ ಜಾಮೀನಿನ ಮೇಲೆ ಹೊರ ಬಂದ ಮೇಲೆ ಬಿರುಗಾಳಿಯ ನಂತರವೂ ಕೆಲವು ಅಂದವಾದ ವಿಷಯಗಳು ಉಳಿಯುತ್ತದೆ ಎಂದು ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಈಗ ಇವೆಲ್ಲವುಗಳ ನಡುವೆ ಸಂಖ್ಯಾ ಶಾಸ್ತ್ರಜ್ಞರೊಬ್ಬರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಸಂಬಂಧದ ಬಗ್ಗೆ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಸಂಖ್ಯಾ ಶಾಸ್ತ್ರದ ಆಧಾರದಲ್ಲಿ ಅವರ ನಡುವಿನ ಬಾಂಧವ್ಯದ ಕುರಿತಾಗಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಖ್ಯಾತ ಸಂಖ್ಯಾ ಶಾಸ್ತ್ರಜ್ಞರಾದ ಜಗನ್ನಾಥ್ ಗುರೂಜಿ ಅವರು ಮಾತನಾಡುತ್ತಾ, ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಬದುಕಿನಲ್ಲಿ ಏರಿಳಿತಗಳಿರುವುದು ನಿಜ. ಆದರೆ ಅದೇ ವೇಳೆ ಅವರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಪರಸ್ಪರ ಬೆಂಬಲ ನೀಡುತ್ತಿರುತ್ತಾರೆ. ಗುರೂಜಿ ಅವರು ಇದೇ ವೇಳೆಯಲ್ಲಿ “ಮದುವೆ ಮುರಿಯಲ್ಲ. ಈಗ ಏನು ಸಮಸ್ಯೆ ಎದುರಿಸಿದ್ದಾರೋ ಆಗ ರಾಜ್‌ ಅವರಿಗೆ ಶಿಲ್ಪಾ ಶೆಟ್ಟಿ ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಬ್ಬರ ಬಾಂಧವ್ಯ ಇನ್ನೂ ಗಟ್ಟಿಯಾಗಿರಲಿದೆ” ಎನ್ನುವ ಮಾತುಗಳನ್ನು ಹೇಳಿದ್ದಾರೆ.

ರಾಜ್ ಕುಂದ್ರಾ ಮೇಲೆ ವಿ ವಾ ದದಲ್ಲಿ ಸಿಲುಕಿ ಕೊಂಡಿರುವುದು ಇದೇ ಮೊದಲೇನಲ್ಲ. ಐಪಿಎಲ್ ನಲ್ಲಿ ಬೆಟ್ಟಿಂಗ್ ವಿಷಯದಲ್ಲಿ ಕಿರಿಕ್ ಮಾಡಿಕೊಂಡಿದ್ದು ಹಳೆಯ ಸುದ್ದಿ. ಆಗಲೂ ನಟಿ ಶಿಲ್ಪಾ ಶೆಟ್ಟಿ ಅವರು ಆ ಬಗ್ಗೆ ಮಾತನಾಡಲು ಅಥವಾ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು ಸಿದ್ಧವಿರಲಿಲ್ಲ. ಇತ್ತೀಚಿಗೆ ಕೂಡಾ ರಾಜ್ ಕುಂದ್ರಾ ಬಗ್ಗೆ ಪ್ರಶ್ನೆ ಮಾಡಿದಾಗ ಶಿಲ್ಪಾ ಶೆಟ್ಟಿ ನಾನೇನು ರಾಜ್ ಕುಂದ್ರಾ ರೀತಿ ಕಾಣುತ್ತಿದ್ದೇನೆಯೇ?? ಎಂದು ಪ್ರಶ್ನೆ ಮಾಡಿದ್ದರು.

Leave a Comment