ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಅಮ್ಮನ ಬಗ್ಗೆ ಅದ್ಭುತ ಸಾಲುಗಳ ಬರೆದ ಬಿಗ್ಬಾಸ್ ಖ್ಯಾತಿಯ ನಟಿ ಕೃತ್ತಿಕಾ

Written by Soma Shekar

Published on:

---Join Our Channel---

ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಪಡೆದು, ಅನಂತರ ಸ್ಯಾಂಡಲ್ವುಡ್ ಗೂ ಅಡಿಯಿಟ್ಟ ವರು ನಟಿ ಕೃತ್ತಿಕಾ. ನಟಿ ಕೃತ್ತಿಕಾ ಅವರ ಹೆಸರು ಕೇಳಿದರೆ ಕಿರುತೆರೆಯ ಪ್ರೇಕ್ಷಕರಿಗೆ ಕೂಡಲೇ ನೆನಪಾಗುವುದು ಕನ್ನಡ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ರಾಧಾ ಕಲ್ಯಾಣ ಸೀರಿಯಲ್. ಹೌದು ರಾಧಾ ಕಲ್ಯಾಣ ಸೀರಿಯಲ್ ಮೂಲಕ ಮನೆ ಮನೆ ಮಾತಾದವರು ನಟಿ ಕೃತ್ತಿಕಾ. ಸೀರಿಯಲ್ ಮಾತ್ರವೇ ಅಲ್ಲದೇ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸಹಾ ಅವರು ಸ್ಪರ್ಧಿಯಾಗಿದ್ದರು.

ಕೃತ್ತಿಕಾ ಅವರು ಬಿಗ್ ಬಾಸ್ ಸೀಸನ್ ಮೂರರಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದ ಕೃತ್ತಿಕಾ ಅವರಿಗೆ ಬಿಗ್ ಬಾಸ್ ನಂತರ ಸಹಜವಾಗಿಯೇ ಅವರು ಜನಪ್ರಿಯತೆ ಹೆಚ್ಚಾಯಿತು. ಕೃತ್ತಿಕಾ ಅವರು ಸ್ಯಾಂಡಲ್ವುಡ್ ನಲ್ಲಿ ಪಟ್ರೆ ಲವ್ಸ್ ಪದ್ಮ, ಆಟೋ, ಲಿಫ್ಟ್ ಕೊಡ್ಲಾ, ಕೆಂಗುಲಾಬಿ ಹಾಗೂ ಇನ್ನೂ ಕೆಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ನಟಿ ಕೃತ್ತಿಕಾ ಅವರು ಸಕ್ರಿಯವಾಗಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ಕೃತ್ತಿಕಾ ಅವರು ಹಲವು ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅನುಭವ ಹಾಗೂ ವಿಶೇಷ ಎನಿಸುವ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಕೃತ್ತಿಕಾ ಅವರು ಹಂಚಿಕೊಂಡಿರುವ ಒಂದು ವಿಷಯ ಎಲ್ಲರ ಗಮನವನ್ನು ಸೆಳೆದಿದೆ. ಕೃತ್ತಿಕಾ ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಮ್ಮ ತಾಯಿಯ ಕುರಿತಾಗಿ ಒಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.

ಕೃತ್ತಿಕಾ ಅವರು ತಮ್ಮ ಪೋಸ್ಟ್ ನಲ್ಲಿ, ನನ್ನ ಮುದ್ದು ಅಮ್ಮ ಶಿಕ್ಷಕಿಯಾಗಿ 31 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದರು. ಅತ್ಯಂತ ಭಾವಪೂರ್ಣ ಕ್ಷಣಕ್ಕೆ ನಾನು ಸಾಕ್ಷಿಯಾದದ್ದು ನನ್ನ ಅದೃಷ್ಟ. ನನಗೂ ನನ್ನ ತಾಯಿ ಮೂರು ವರ್ಷ ಶಿಕ್ಷಕಿಯಾಗಿದ್ದರು. ಅಮ್ಮ, ನಿನ್ನಿಂದ ತುಂಬಾ ಕಲಿತಿದ್ದೇನೆ. ಶಿಸ್ತು, ಸಮಯನಿಷ್ಠೆ, ಕರ್ತವ್ಯಪಾಲನೆ, ದೂರಾಲೋಚನೆ ಇವೆಲ್ಲಾ ನೀನು ಕಲಿಸಿಕೊಟ್ಟಿರೋದು ನನಗೆ.

ಸದಾ ಋಣಿ. ನೀನು ನನ್ನ ತಾಯಿ ಹಾಗೂ ಶಿಕ್ಷಕಿ ಎಂದು ಹೇಳಿಕೊಳ್ಳಲು ನನಗೆ ತುಂಬಾ ಹೆಮ್ಮೆ ಆಗತ್ತೆ .
Thanks for everything. Love you Ma.. ಎಂದು ಬರೆದುಕೊಂಡು ಕೃತ್ತಿಕಾ ಅವರು ತಮ್ಮ ತಾಯಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಂದರ ಕ್ಷಣಗಳ ವಿಚಾರವನ್ನು ಫೋಟೋ ಸಹಿತವಾಗಿ ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

Leave a Comment