HomeEntertainmentಶಾರೂಖ್ ಪುತ್ರನ ಬಂ ಧ ನದ ವಿ ರುದ್ಧ ದನಿ ಎತ್ತಿದ ಕೆಜಿಎಫ್-2 ನಟಿ ಬಾಲಿವುಡ್...

ಶಾರೂಖ್ ಪುತ್ರನ ಬಂ ಧ ನದ ವಿ ರುದ್ಧ ದನಿ ಎತ್ತಿದ ಕೆಜಿಎಫ್-2 ನಟಿ ಬಾಲಿವುಡ್ ಬೆಡಗಿ

ಬಾಲಿವುಡ್ ನಲ್ಲಿ ಸಂಚಲನವನ್ನು ಸೃಷ್ಟಿಸಿರುವ ನಟ ಶಾರೂಖ್ ಖಾನ್ ಪುತ್ರನ ಬಂಧನದ ವಿಷಯ ದಿನದಿಂದ ದಿನಕ್ಕೆ ಹೊಸ ರೂಪವನ್ನು ಪಡೆದುಕೊಂಡಿದೆ. ಆರ್ಯನ್ ಖಾನ್ ನನ್ನು ಬಂ ಧ ನ ದ ಹಿನ್ನಲೆಯಲ್ಲಿ ಬಾಲಿವುಡ್ ನ ಸ್ಟಾರ್ ನಟ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೇಸರವನ್ನು ಹಾಗೂ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಅದು ಮಾತ್ರವೇ ಅಲ್ಲದೇ ಇದೆಲ್ಲವೂ ಸಹಾ ಒಂದು ಪೂರ್ವಯೋಜಿತ ಪ್ರಕ್ರಿಯೆ ಎನ್ನುವ ಮಾತುಗಳು ಸಹಾ ಕೇಳಿ ಬರುತ್ತಿದೆ‌. ಇನ್ನು ನಿನ್ನೆ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ ಮಾಡಿ, ನ್ಯಾಯಾಂಗ ಬಂ ಧ ನ ದ ಅವಧಿ ವಿಸ್ತರಣೆ ಮಾಡಿದೆ.

ನಿನ್ನೆ ಶಾರೂಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರ 51 ನೇ ಜನ್ಮದಿನ ಇತ್ತು. ಆದರೆ ಈ ಬಾರಿ ಗೌರಿ ಖಾನ್ ಹಾಗೂ ಅವರ ಇಡೀ ಕುಟುಂಬಕ್ಕೆ ಜನ್ಮದಿನದ ಆಚರಣೆಯ ಸಂಭ್ರಮವೇ ಇಲ್ಲ ಹಾಗೂ ಜನ್ಮ ದಿನಾಚರಣೆಯ ಆಸಕ್ತಿಯ ಕೂಡಾ ಇಲ್ಲದಾಗಿದೆ. ಮಗ ನ್ಯಾಯಾಂಗ ಬಂ ಧ ನದಲ್ಲಿ ಜೈಲು ಸೇರಿರುವ ಕಾರಣದಿಂದಾಗಿ ಗೌರಿ ಖಾನ್ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಂಡಿಲ್ಲ. ಆರ್ಯನ್ ಖಾನ್ ನ ಜಾಮೀನಿಗಾಗಿ ತೀವ್ರವಾಗಿ ಪ್ರಯತ್ನ ಮಾಡಲಾಗುತ್ತಿದೆಯಾದರೂ ಜಾಮೀನು ಸಿಗುತ್ತಿಲ್ಲ.

ಶಾರೂಖ್ ಪುತ್ರನ ಬಂಧನದ ನಂತರ ಬಾಲಿವುಡ್ ನಟರಾದ ಸುನೀಲ್ ಶೆಟ್ಟಿ, ಸಲ್ಮಾನ್ ಖಾನ್, ಹೃತಿಕ್ ರೋಷನ್, ಗಾಯಕ ಮಿಕ್ಕಾ ಸಿಂಗ್, ನಟಿ ದಿಯಾ ಮಿರ್ಜಾ, ಹೃತಿಕ್ ರೋಷನ್ ಮಾಜಿ ಪತ್ನಿ ಸೂಸೆನ್ ಹೀಗೆ ಸಾಲು ಸಾಲು ನಟ ನಟಿಯರು ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆರ್ಯನ್ ನ ಬಂ ಧ ನ ಸರಿಯಲ್ಲ, ಆತನನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಈಗ ಇವೆಲ್ಲವುಗಳ ನಡುವೆ ಮತ್ತೋರ್ವ ಬಾಲಿವುಡ್ ನಟಿ ಸಹಾ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್ ನ ಒಂದು ಕಾಲದ ಸ್ಟಾರ್ ನಟಿ ರವೀನಾ ಟಂಡನ್ ಸಹಾ ತಮ್ಮ ಟ್ವಿಟರ್ ಖಾತೆಯ ಮೂಲಕ ಆರ್ಯನ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೊಂದು ಅಸಹ್ಯಕರ ಬೆಳೆವಣಿಗೆ ಎಂದು ದೇಶದ ರಾಜಕೀಯ ವ್ಯವಸ್ಥೆಯನ್ನು ರವೀನಾ ಟೀಕೆ ಮಾಡಿದ್ದಾರೆ. ರವೀನಾ ತಮ್ಮ ಟ್ವೀಟ್ ನಲ್ಲಿ “ನಾಚಿಕೆಗೇಡಿನದ ರಾಜಕಾರಣವನ್ನು ಆಡಲಾಗುತ್ತಿದೆ. ಇದು ಯುವಕನ ಜೀವನ ಮತ್ತು ಭವಿಷ್ಯದೊಡನೆ ಆಡುತ್ತಿದ್ದು… ಹೃದಯ ವಿದ್ರಾವಕ” ಎಂದು ಬರೆದುಕೊಂಡಿದ್ದಾರೆ.

- Advertisment -