ಬಾಲಿವುಡ್ ನಟ ಶಾರೂಖ್ ಖಾನ್ ಅವರಿಗೆ ಕಳೆದೊಂದು ವಾರದಿಂದಲೂ ಸಹಾ ಮಗನ ಬಂಧ ನ ಒಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಳೆದ ವಾರ ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್ ಶಿಪ್ ನಲ್ಲಿ ಡ್ರ ಗ್ಸ್ ಪಾರ್ಟಿ ನಡೆಯುತ್ತಿದೆ ಎನ್ನುವ ಸ್ಪಷ್ಟ ಮಾಹಿತಿಯ ಮೇರೆಗೆ ಎನ್ ಸಿ ಬಿ ಶಿಪ್ ಮೇಲೆ ನಡೆಸಿದ್ದ ಧಾ ಳಿ ಯಲ್ಲಿ ನಟ ಶಾರೂಖ್ ಖಾನ್ ಅವರ ಮಗ ಆರ್ಯನ್ ಖಾನ್ ಹಾಗೂ ಆತನ ಸ್ನೇಹಿತರು ಸೇರಿದಂತೆ ಒಂದು ಹತ್ತು ಜನರನ್ನು ಎನ್ ಸಿ ಬಿ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಬಂ ಧ ನ ಒಂದು ಸಂಚಲನವನ್ನೇ ಸೃಷ್ಟಿಸಿದೆ.
ನಟ ಶಾರೂಖ್ ಎಂದರೆ ಬಾಲಿವುಡ್ ಮಾತ್ರವೇ ಅಲ್ಲದೇ ಇಡೀ ದೇಶದಲ್ಲಿ ದೊಡ್ಡ ಹೆಸರು, ಅಭಿಮಾನಿಗಳನ್ನು ಹೊಂದಿರುವುದರಿಂದ ಬಹಳಷ್ಟು ಬ್ರಾಂಡ್ ಗಳಿಗೆ ಅವರು ರಾಯಭಾರಿಯಾಗಿದ್ದು, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದೀಗ ಒಂದು ಎಜುಕೇಷನಲ್ ಆ್ಯಪ್ ಬೈಜೂಸ್ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಶಾರೂಖ್ ಖಾನ್ ಅವರನ್ನು ತನ್ನೆಲ್ಲಾ ಜಾಹೀರಾತುಗಳಿಂದ ಕೈ ಬಿಡುವ ನಿರ್ಧಾರವೊಂದನ್ನು ಮಾಡಿದೆ ಎನ್ನಲಾಗಿದೆ.
ಶಾರೂಖ್ ಖಾನ್ ಅವರು 2017 ರಿಂದ ಬೈ ಜೂಸ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಆದರೆ ಯಾವಾಗ ಅವರ ಮಗನನ್ನು ಎನ್ ಸಿ ಬಿ ಡ್ರ ಗ್ಸ್ ವಿಚಾರದಲ್ಲಿ ಬಂಧಿಸಿತೋ ಕೂಡಲೇ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಬೈಜೂಸ್ ಗೆ ಶಾರೂಖ್ ನೀಡುವ ಜಾಹೀರಾತು ಗಳ ಫೋಟೋಸ್ ಗಳನ್ನು ಕಟ್ಟಿಕೊಂಡು ಟ್ರೋಲ್ ಮಾಡಿದರು, ಟೀಕೆ ಮಾಡಿದರು ಹಾಗೂ ಶಾರೂಖ್ ಖಾನ್ ರನ್ನು ಜಾಹೀರಾತು ಗಳಿಂದ ಬಹಿಷ್ಕಾರ ಹಾಕುವಂತೆ ಆಗ್ರಹ ಗಳು ಹೆಚ್ಚಿದವು.
ಹೀಗೆ ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆಗಳು ಹೊರ ಬಂದ ಕೆಲವೇ ದಿನಗಳಲ್ಲಿ ಬೈಜೂಸ್ ಶಾರೂಖ್ ಇದ್ದ ಎಲ್ಲಾ ಜಾಹೀರಾತುಗಳ ಪ್ರಸಾರವನ್ನು ನಿಲ್ಲಿಸಿದೆ. ಅಲ್ಲದೇ ದೇಶದ ಸುಪ್ರಸಿದ್ಧ ಎಜುಕೇಷನ್ ಇನ್ಸ್ಟಿಟ್ಯೂಷನ್ ಕಂಪನಿ ಒಂದು ಶಾರುಖ್ ಅವರನ್ನು ತಮ್ಮ ಬ್ರಾಂಡ್ ರಾಯಭಾರಿಯ ಸ್ಥಾನದಿಂದ ಕೈಬಿಟ್ಟಿದೆ ಎನ್ನುವ ಸುದ್ದಿ ಹರಡಿದ್ದು, ಆ ಎಜುಕೇಶನ್ ಕಂಪನಿ ಬೈಜೂಸ್ ಇರಬಹುದು ಎನ್ನಲಾಗಿದೆ.