ಶಾರೂಖ್ ನಟನೆಯ ಜವಾನ್ ಸಿನಿಮಾಕ್ಕೆ ದಕ್ಷಿಣದ ಸ್ಟಾರ್ ನಟ ಪಡೆದ ಸಂಭಾವನೆ ಕೇಳಿ ಬೆಚ್ಚಿ ಬಿತ್ತು ಬಾಲಿವುಡ್

Entertainment Featured-Articles Movies News

ಬಾಲಿವುಡ್ ಸಿನಿಮಾ ನಾಯಕರಿಗೆ ಅದರಲ್ಲೂ ವಿಶೇಷವಾಗಿ ಬಾಲಿವುಡ್ ನ ಸ್ಟಾರ್ ಗಳಿಗೆ ಈಗ ಯಶಸ್ವಿ ಸಿನಿಮಾ ಮಾಡುವ ಜನರ ಮೆಚ್ಚುಗೆಗಳನ್ನು ಪಡೆಯುವ ಅನಿವಾರ್ಯತೆ ಏರ್ಪಟ್ಟಿದೆ. ಇದು ಬಾಲಿವುಡ್ ನಲ್ಲಿ ಕಿಂಗ್ ಖಾನ್ ಎನಿಸಿಕೊಂಡಿರುವ ಶಾರೂಖ್ ಖಾನ್ ಗೂ ಅನ್ವಯವಾಗುತ್ತದೆ. ಈಗ ದಕ್ಷಿಣದ ಸಿನಿಮಾಗಳು ಅಬ್ಬರಿಸುತ್ತಿರುವ ಸಮಯದಲ್ಲಿ ಶಾರೂಖ್ ಖಾನ್ ಸಹಾ ತಮ್ಮ ಮುಂದಿನ ಸಿನಿಮಾಕ್ಕಾಗಿ ದಕ್ಷಿಣ ಸಿನಿಮಾ ರಂಗದ ನಿರ್ದೇಶಕನ ಕಡೆಗೆ ನಿರೀಕ್ಷೆ ಇಟ್ಟಿದ್ದಾರೆ. ಹೌದು, ಶಾರೂಖ್ ಅಭಿನಯದ ಜವಾನ್ ಸಿನಿಮಾ ತಮಿಳಿನ ನಿರ್ದೇಶಕ ಆ್ಯಟ್ಲಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.

ಈ ಸಿನಿಮಾದಲ್ಲಿ ನಾಯಕಿ ಸಹಾ ದಕ್ಷಿಣ ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಟಿ ನಯನತಾರಾ ಆಗಿದ್ದು, ನಟಿ ಬಾಲಿವುಡ್‌ ಗೆ ಎಂಟ್ರಿ ನೀಡುತ್ತಿದ್ದಾರೆ. ಇದೇ ವೇಳೆ ತಮಿಳು ಚಿತ್ರರಂಗದ ಮತ್ತೊಬ್ಬ ಜನಪ್ರಿಯ ನಟ, ವೈವಿದ್ಯಮಯ ಪಾತ್ರಗಳ ಮೂಲಕ ಜನರನ್ನು ರಂಜಿಸುತ್ತಿರುವ ನಟ ವಿಜಯ್ ಸೇತುಪತಿ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಈಗ ಬಾಲಿವುಡ್ ಗೆ ಮರಳ ಜೀವ ತುಂಬಲು ದಕ್ಷಿಣದ ಮಂದಿಯೇ ಬೇಕೇನೋ ಎನ್ನುವಂತಹ ಪರಿಸ್ಥಿತಿ ಒಂದು ಖಂಡಿತ ನಿರ್ಮಾಣವಾಗಿದೆ.

ಈಗ ನಟ ವಿಜಯ್ ಸೇತುಪತಿ ಶಾರೂಖ್ ಅಭಿನಯದ ಜವಾನ್ ಸಿನಿಮಾದಲ್ಲಿ ನಟಿಸುವುದಕ್ಕೆ ಪಡೆದಿರುವ ಭಾರೀ ಮೊತ್ತದ ಸಂಭಾವನೆಯ ವಿಚಾರವು ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಹೌದು, ನಟ ವಿಜಯ್ ಸೇತುಪತಿ ಜವಾನ್ ಸಿನಿಮಾದ ತಮ್ಮ ಪಾತ್ರಕ್ಕಾಗಿ ಪಡೆದಿರುವ ದೊಡ್ಡ ಮೊತ್ತದ ಸಂಭಾವನೆ ಈಗ ಎಲ್ಲರ ಗಮನವನ್ನು ಸೆಳೆದಿದೆ. ಹಾಗಾದರೆ ನಟ ವಿಜಯ್ ಸೇತುಪತಿ ಪಡೆದ ಸಂಭಾವನೆ ಎಷ್ಟು ಎನ್ನುವುದನ್ನು ನಾವೀಗ ತಿಳಿಯೋಣ ಬನ್ನಿ. ನಟ ವಿಜಯ್ ಸೇತುಪತಿ ಈಗಾಗಲೇ ದಕ್ಷಿಣ ಸಿನಿಮಾ ರಂಗದಲ್ಲಿ ಸಖತ್ ಬೇಡಿಕೆಯ ನಟನಾಗಿದ್ದಾರೆ.

ವಿಜಯ್ ಸೇತುಪತಿ ಒಂದು ಕಡೆ ನಾಯಕನ ಪಾತ್ರಗಳನ್ನು ನಿರ್ವಹಿಸುತ್ತಲೇ, ಮತ್ತೊಂದು ಕಡೆ ಖಳ ನಾಯಕನ ಪಾತ್ರಗಳನ್ನು, ಪಾತ್ರಕ್ಕೆ ಪ್ರಾಧಾನ್ಯತೆ ಇರುವ ಪೋಷಕ ಪಾತ್ರಗಳನ್ನು ಮಾಡಿ ಮಿಂಚುತ್ತಿದ್ದಾರೆ. ಆದ್ದರಿಂದಲೇ ಅವರ ಬೇಡಿಕೆ ಸಹಾ ಹೆಚ್ಚಿದೆ. ಇದೀಗ ಜವಾನ್ ಸಿನಿಮಾಕ್ಕಾಗಿ ನಟ ವಿಜಯ್ ಸೇತುಪತಿ ಅವರು ಬರೋಬ್ಬರಿ 21 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡು ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದ್ದಾರೆ. ಈ ವಿಚಾರ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ ಆದರೂ, ವಿಜಯ್ ಸೇತುಪತಿ ದೊಡ್ಡ ಮೊತ್ತದ ಸಂಭಾವನೆ ಬೇಡಿಕೆ ಇಟ್ಟಿರುವುದು ಮಾತ್ರ ನಿಜ ಎನ್ನಲಾಗಿದೆ.

Leave a Reply

Your email address will not be published.