ಶಾರೂಖ್ ಖಾನ್ ಯಾರು? ಎಂದ ಅಸ್ಸಾಂ ಮುಖ್ಯಮಂತ್ರಿಗೆ ಮಧ್ಯರಾತ್ರಿ ಕರೆ ಮಾಡಿ ಶಾರೂಖ್ ಹೇಳಿದ್ದೇ‌ನು?

0 1

ಬಾಲಿವುಡ್ ನ ಸ್ಟಾರ್ ನಟ ಕಿಂಗ್ ಖಾನ್ ಶಾರೂಖ್ ಖಾನ್(Shahrukh khan) ಅಭಿನಯದ ಪಠಾಣ್ (Pathan) ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆನ್ಲೈನ್ ನಲ್ಲಿ ಸಿನಿಮಾದ ಟಿಕೆಟ್ ಗಳ ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಒಂದು ಕಡೆ ಸಿನಿಮಾ ಮುಂಗಡ ಬುಕ್ಕಿಂಗ್ ಬಹಳ ವೇಗವಾಗಿ ನಡೆಯುತ್ತಿದ್ದರೂ ಮತ್ತೊಂದು ಕಡೆ ಸಿನಿಮಾ ಕುರಿತಾದ ಕಾಂಟ್ರವರ್ಸಿಗಳು ಸಹಾ ಕಡಿಮೆ ಏನಿಲ್ಲ. ಒಂದಲ್ಲಾ ಒಂದು ವಿಚಾರವಾಗಿ ಪಠಾಣ್ ಸುದ್ದಿಯಾಗುತ್ತಿರುವುದು ಮಾತ್ರವೇ ಅಲ್ಲದೇ ವಿ ವಾ ದಗಳಿಗೂ ಸಹಾ ಕಾರಣವಾಗುತ್ತಲೇ ಇದೆ. ಈ ಸಿನಿಮಾದ ಬೇಷರಂ ರಂಗ್ ಹಾಡಿನಿಂದ ಎದ್ದ ವಿ ವಾ ದ ವಂತೂ ಆಗಾಗ ಮುನ್ನೆಲೆಗೆ ಬರುತ್ತಲೇ ಇದೆ.

ಇನ್ನು ಇವೆಲ್ಲವುಗಳ ನಡುವೆ ಅಸ್ಸಾಂ ನ(Assam) ಗುವಹಾಟಿಯಲ್ಲಿ(Guwahati) ಪಠಾಣ್(Pathan) ಸಿನಿಮಾಕ್ಕೆ ವಿ ರೋ ಧ ವ್ಯಕ್ತವಾಗಿತ್ತು. ಇದಾದ ನಂತರ ನಟ ಶಾರೂಖ್ ಖಾನ್(Shah Rukh Khan) ಅವರು ಅಸ್ಸಾಂ ನ ಮುಖ್ಯಮಂತ್ರಿಯವರಾದ ಹಿಮಂತ್ ಬಿಸ್ವಾ ಶರ್ಮಾ(Himanth Biswa Sharma) ಅವರಿಗೆ ಕರೆಯನ್ನು ಮಾಡಿದ್ದು, ತಮ್ಮ ಸಿನಿಮಾಕ್ಕೆ ಎದುರಾಗಿರುವ ಸಮಸ್ಯೆಯ ಕುರಿತಾಗಿ ಮಾತನಾಡಿದ್ದು, ತಮ್ಮ ಆ ತಂ ಕ ವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಈ ವಿಷಯವನ್ನು ಸ್ವತಃ ಅಸ್ಸಾಂ ನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಟ್ವೀಟ್ ಮಾಡಿದ ಅಸ್ಸಾಂ ನ‌ ಮುಖ್ಯಮಂತ್ರಿ(Assam chief Minister) ಅವರು, ಬಾಲಿವುಡ್(Bollywood) ನಟ ಶಾರೂಖ್ ಖಾನ್ (Shah Rukh Khan) ನನಗೆ ಬೆಳಗಿನ ಜಾವ 2 ಗಂಟೆಗೆ ಕರೆ ಮಾಡಿದ್ದರು. ಗುವಹಾಟಿಯಲ್ಲಿ ಪಠಾಣ್ ಸಿನಿಮಾಕ್ಕೆ ವಿ ರೋ ಧ ಮಾಡಿರುವ ಘಟನೆಯ ಬಗ್ಗೆ ಅವರು ಕಳವಳವನ್ನು ವ್ಯಕ್ತಪಡಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ನಾನು ಅವರಿಗೆ ಭರವಸೆಯನ್ನು ನೀಡಿದ್ದೇನೆ. ಘಟನೆ ಬಗ್ಗೆ ವಿಚಾರಣೆ ನಡೆಸಿ, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುತ್ತೇವೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಒಂದು ದಿನದ ಹಿಂದೆಯಷ್ಟೇ ಮಾದ್ಯಮಗಳು ಹಿಮಂತ್ ಬಿಸ್ವಾ ಶರ್ಮಾ(Himant Biswa Sharma) ಅವರನ್ನು ಪಠಾಣ್ ಸಿನಿಮಾದ ಕುರಿತಾಗಿ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದವು. ಅದಕ್ಕೆ ಪ್ರತಿಕ್ರಿಯೆ ನೀಡುವ ವೇಳೆಯಲ್ಲಿ ಹಿಮಂತ್ ಬಿಸ್ವಾ ಶರ್ಮಾ ಅವರು, ಶಾರೂಖ್ ಖಾನ್ ಯಾರು? ಎನ್ನುವ ಪ್ರಶ್ನೆ ಮಾಡಿದ್ದರು. ಶಾರೂಖ್ ಖಾನ್ ಬಗ್ಗೆಯಾಗಲೀ, ಅವರ ಸಿನಿಮಾ ಬಗ್ಗೆಯಾಗಲೀ ನನಗೇನೂ ಗೊತ್ತಿಲ್ಲ ಎನ್ನುವ ಮಾತನ್ನು ಸಹಾ ಅವರು ಹೇಳಿದ್ದರು. ಅಲ್ಲದೇ ರಾಜ್ಯದ ಜನರು ಅಸ್ಸಾಮಿ ಸಿನಿಮಾಗಳ ಕಡೆಗೆ ಆದ್ಯತೆ ನೀಡಬೇಕೇ ಹೊರತು ಬಾಲಿವುಡ್ ಸಿನಿಮಾಗಳಿಗೆ ಅಲ್ಲ ಎನ್ನುವ ಮಾತನ್ನೂ ಅವರು ಹೇಳಿದ್ದರು.

Leave A Reply

Your email address will not be published.