ಶಾರೂಖ್ ಕುಟಂಬಕ್ಕೆ ಬಿಗ್ ರಿಲೀಫ್: ಆದ್ರೆ NCB ಅಧಿಕಾರಿ ಸಮೀರ್ ವಾಂಖೇಡೆ ಗೆ ಈಗ ಶುರುವಾಯ್ತು ಆತಂಕ

0 0

ಮುಂಬೈ ಹೈಕೋರ್ಟ್ ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಪೂರ್ತಿಯಾಗಿದೆ. ಬಾಂಬೆ ಹೈಕೋರ್ಟ್ ನ ಏಕ ಸದಸ್ಯ ಪೀಠವು ಆರ್ಯನ್ ಖಾನ್ ಗೆ ಜಾಮೀನು ಮಂಜೂರು ಮಾಡಿದೆ. ಈ ತೀರ್ಮಾನವು ನಟ ಶಾರೂಖ್ ಕುಟುಂಬಕ್ಕೆ ಒಂದು ಬಿಗ್ ರಿಲೀಫ್ ನೀಡಿದೆ. ಹಲವು ದಿನಗಳ ಪ್ರಯತ್ನದ ನಂತರ ಜಾಮೀನು ಸಿಕ್ಕಿದೆ. ಇನ್ನು ಆರ್ಯನ್ ಗೆ ಜಾಮೀನು ನೀಡಿರುವ ಕಾರಣವೇನೆಂದು ಕೋರ್ಟ್ ನಾಳೆ ವಿವರಿಸಲಿದೆ ಎನ್ನಲಾಗಿದೆ. ಆರ್ಯನ್ ಜೊತೆಗೆ ಆತನ ಸ್ನೇಹಿತರಾದ ಮುನ್ ಮುನ್ ಧಮೇಚಾ ಹಾಗೂ ಅರ್ಬಾಜ್ ಮರ್ಚೆಂಟ್ ಗೂ ಸಹಾ ಜಾಮೀನು ನೀಡಲಾಗಿದೆ.

ಎನ್ ಸಿ ಬಿ ಪರ ವಕೀಲ ಅನಿಲ್ ಸಿಂಗ್ ಅವರು ತಮ್ಮ‌ ವಾದದಲ್ಲಿ ಸಾಕಷ್ಟು ಕಾರಣಗಳನ್ನು ಹಾಗೂ ವಿವರಣೆಯನ್ನು ನೀಡುತ್ತಾ ವಾಟ್ಸಾಪ್ ಚಾಟ್ ಬಗ್ಗೆ, ವಾಣಿಜ್ಯ ದೃಷ್ಟಿಯಿಂದ ಡ್ರ ಗ್ಸ್ ಇಟ್ಟು ಕೊಂಡಿದ್ದ ವಿಷಯ, ಅರ್ಬಾಜ್ ಮತ್ತು ಆರ್ಯನ್ ನಡುವಿನ ಸಂಪರ್ಕ ಹಾಗೂ ಮಾತುಕತೆ ಹೀಗೆ ಹಲವು ವಿಚಾರ ಮುಂದಿರಿಸಿ ಆರ್ಯನ್ ಖಾನ್ ಗೆ ಜಾಮೀನು ನೀಡಬಾರದು ಎಂದು ವಾದಿಸಿದರೂ ಅದು ಸಫಲವಾಗಿಲ್ಲ. ಎನ್ ಸಿ ಬಿ ಪರ ವಕೀಲರು ಆರ್ಯನ್ ಗೆ ಅರ್ಬಾಜ್ ಡ್ರ ಗ್ಸ್ ತರುವ ವಿಚಾರ ಮೊದಲೇ ಗೊತ್ತಿತ್ತು, ಪ್ರಯಾಣದ ವೇಳೆ ಅದನ್ನು ಸೇವಿಸಲು ಪ್ಲಾನ್ ಮಾಡಿದ್ದರು ಎಂದು ಹೇಳಿದ್ದಾರೆ.

ಆರ್ಯನ್ ಪರ ವಕೀಲರು ಆರ್ಯನ್ ಗೆ ಸೂಕ್ತ ಕಾರಣ ನೀಡದೇ ಬಂಧಿಸಲಾಗಿದೆ. ಕಾರಣ ತಿಳಿಯುವ ಹಕ್ಮಿದೆ, ಆದರೆ ಎನ್ ಸಿ ಬಿ ಕಾರಣ ನೀಡದೇ ದಿಕ್ಕು ತಪ್ಪಿಸಿದೆ ಎಂದು ವಾದವನ್ನು ಮಾಡಿದ್ದಾರೆನ್ನಲಾಗಿದೆ. ಒಂದು ಕಡೆ ಶಾರುಖ್ ಕುಟುಂಬಕ್ಕೆ ರಿಲೀಫ್ ಸಿಕ್ಕರೆ ಮತ್ತೊಂದು ಕಡೆ ಈ ಪ್ರಕರಣದಲ್ಲಿ ಆರ್ಯನ್ ನನ್ನು ಬಂ ಧಿ ಸಿದ್ದ ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖೇಡೆ ಮೇಲೆ ಹಲವು ಆ ರೋ ಪಗಳು ಕೇಳಿ ಬಂದಿವೆ. ಅಲ್ಲದೇ ಅವರ ಮೇಲೆ ತನಿಖೆಗೆ ವಿಶೇಷ ತಂಡವನ್ನು ಕೂಡಾ ನೇಮಕ ಮಾಡಲಾಗಿದೆ.

ಇನ್ನು ಸಮೀರ್ ವಾಂಖೇಡೆ ಅವರು ಮಹಾರಾಷ್ಟ್ರ ಸರ್ಕಾರ ತನ್ನ ಮೇಲೆ ಆದೇಶಿಸಿರುವ ತನಿಖೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ತನಗೆ ಬಂ ಧ ನದ ಆತಂಕ ಎದುರಾಗಿದೆ. ಬಂಧನ ಆಗದಂತೆ ತಡೆ ನೀಡಬೇಕು ಎಂದು ಸಮೀರ್ ವಾಂಖೇಡೆ ಕೋರ್ಟ್ ಗೆ ಮನವಿಯನ್ನು ಮಾಡಿದ್ದಾರೆ. ಆದರೆ ಕೋರ್ಟ್ ಈ ಮನವಿಯನ್ನು ಕೈ ಬಿಟ್ಟಿದ್ದು, ತನಿಖೆಯನ್ನು ಕೈ ಬಿಡಲು ಸಾದ್ಯವಿಲ್ಲ ಎಂದು ಹೇಳಿದೆ. ಬಂಧಿಸುವುದಾದರೆ ಮೂರು ದಿನ ಮುಂಚಿತವಾಗಿ ನೋಟೀಸ್ ನೀಡಲಾಗುತ್ತದೆ ಎಂದು ಮುಂಬೈ ಸರ್ಕಾರದ ಪರ ವಕೀಲರು ಹೇಳಿದ್ದಾರೆ.

Leave A Reply

Your email address will not be published.