ಶಾಕಿಂಗ್! ವೈರಲ್ ಹಾಡು ಕಚಾ ಬಾದಾಮ್ ಗಾಯಕ ಭುವನ್ ಆಸ್ಪತ್ರೆಗೆ ದಾಖಲು: ಏನಾಯ್ತು ಈ ಗಾಯಕನಿಗೆ??

Entertainment Featured-Articles News

ಭುವನ್ ಅಥವಾ ಬುಭನ್ ಬಡ್ಯಾಕರ್ ಎನ್ನುವ ಹೆಸರು ಕೆಲವು ದಿನಗಳ ಹಿಂದೆ ಯಾರಿಗೂ ಸಹಾ ತಿಳಿದೇ ಇರಲಿಲ್ಲ. ಪಶ್ವಿಮ ಬಂಗಾಳದಲ್ಲಿ ಕಡಲೇಕಾಯಿ ಅಥವಾ ಶೇಂಗಾ ಮಾರಾಟ ಮಾಡುತ್ತಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಒಂದು ಹಾಡಿನಿಂದ ಇಂದು ದೇಶದ ಮೂಲೆ ಮೂಲೆಗಳಲ್ಲಿ ಸಹಾ ಹೆಸರನ್ನು ಪಡೆದುಕೊಂಡಿದ್ದು, ಇದಕ್ಕೆ ಕಾರಣವಾಗಿದ್ದು ಆತ ಶೇಂಗಾ ಮಾರಾಟ ಮಾಡುವಾಗ ಹಾಡಿದ್ದು ಕಚ್ಚಾ ಬಾದಾಮ್ ಹಾಡು. ಈ ಹಾಡನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ಮೇಲೆ ಆ ಹಾಡು ಒಂದು ದೊಡ್ಡ ಸಂಚಲನವನ್ನು ಹುಟ್ಟು ಹಾಕಿತು.

ಪಶ್ಚಿಮ ಬಂಗಾಳದ ಬಿರ್ಭೋಮ್ ಜಿಲ್ಲೆಯ ಕುರಲ್ಜರಿ ಗ್ರಾಮದ ದುಬ್ರಾಜ್ ಪುರ ಬ್ಲಾಕ್ ನ ನಿವಾಸಿಯಾದ ಭುವನ್ ತನ್ನ ಹಾಡು ವೈರಲ್ ಆದ ಮೇಲೆ ಒಬ್ಬ ಸೆಲೆಬ್ರಿಟಿ ಆಗಿ ಬದಲಾಗಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಭುವನ್ ತಾನು ಇನ್ಮುಂದೆ ಮೊದಲಿನಂತೆ ಶೇಂಗಾ ಮಾರಾಟ ಮಾಡಲು ಆಗುವುದಿಲ್ಲ. ಅದರಿಂದ ಅವಮಾನ ಎದುರಾಗುವ ಸಾಧ್ಯತೆಗಳು ಇವೆ ಎನ್ನುವ ಮಾತೊಂದನ್ನು ಹೇಳಿದ್ದು ಸಹಾ ಸುದ್ದಿಯಾಗಿತ್ತು. ಅವರ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ಗಳು ಹರಿದು ಬಂದಿತ್ತು.

ಇನ್ನು ಭುವನ್ ಅವರು ಇತ್ತೀಚಿಗೆ ಒಂದು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಕಾರನ್ನು ಹೇಗೆ ಓಡಿಸಬೇಕೆಂದು ಅಭ್ಯಾಸ ಮಾಡುವಾಗ ಅವರಿಗೆ ಅ ಪ ಘಾ ತ ಸಂಭವಿಸಿದೆ. ಅವರಿಗೆ ಎದೆ ನೋವು ಸಹಾ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಸೂರಿ ಸೂಪರ್ ಸ್ಪೆಷಾಲಿಟಿ ಎನ್ನುವ ಹೆಸರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎನ್ನಲಾಗಿದೆ. ಭುವನ್ ಅವರಿಗೆ ಅ ಪ ಘಾ ತ ಆದ ವಿಚಾರ ಕೇಳಿ ಅವರ ಅಭಿಮಾನಿಗಳಿಗೆ ಶಾ ಕ್ ಆಗಿದೆ.

ಭುವನ್ ಅವರ ಕುಟುಂಬದಲ್ಲಿ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಇದ್ದಾರೆ. ಅವರು ಸೈಕಲ್ ಏರಿ ಹಳ್ಳಿ ಹಳ್ಳಿಗೆ ತಿರುಗಿ ಕಡಲೇಕಾಯಿ ಮಾರಾಟ ವನ್ನು ಮಾಡುತ್ತಿದ್ದರು. ಕಡಲೆ ಕಾಯಿ ಮಾರಾಟ ಮಾಡುವಾಗ ಜನರನ್ನು ಆಕರ್ಷಿಸಲು ಅವರು ರಚಿಸಿದ್ದ ಹಾಡಿನಿಂದ ಅವರು ಫೇಮಸ್ ಆದರು. ಇನ್ನು ಅವರ ಈ ಹಾಡನ್ನು ರೀಮಿಕ್ಸ್ ಮಾಡಿ ಯೂಟ್ಯೂಬ್ ನಲ್ಲಿ ಶೇರ್ ಮಾಡಿದ ಮೇಲೆ ಅದು 50 ಮಿಲಿಯನ್ ವೀಕ್ಷಣೆ ಪಡೆದಿದೆ. ಭುವನ್ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿ ಬದಲಾಗಿ ಬಿಟ್ಟರು.

Leave a Reply

Your email address will not be published.