ಶಾಕಿಂಗ್ ವೀಡಿಯೋ: ಸಿಂಹವನ್ನು ನೋಡಿ ಉಗ್ರ ರೂಪ ತಾಳಿದ ಕಾಡೆಮ್ಮೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್!

Entertainment Featured-Articles News Viral Video

ಸಿಂಹ ಕಾಡಿನ ರಾಜ, ಸಿಂಹವನ್ನು ಎದುರಲ್ಲಿ ನೋಡಿದರೆ ಹಲವು ಪ್ರಾಣಿಗಳು ಕಂಗಾಲಾಗಿ ಬಿಡುತ್ತವೆ. ಸಿಂಹ ಕಾಡಿನಲ್ಲಿ ಯಾವುದೇ ಭ ಯ ಇಲ್ಲದೇ ತಿರುಗಾಡುತ್ತದೆ. ಆದರೆ ಸಿಂಹವು ಬರುತ್ತಿರುವುದನ್ನು ಕಂಡಾಗ ಕಾಡಿನಲ್ಲಿನ ಪ್ರಾಣಿಗಳು ಅಲ್ಲಿಂದ ಓಡಿ ಹೋಗುತ್ತವೆ ಇಲ್ಲವೇ ಎಲ್ಲಾದರೂ ಅಡಗಿಕೊಳ್ಳುತ್ತವೆ. ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಒಂದು ವೀಡಿಯೋ ಇದಕ್ಕೆ ಸಂಪೂರ್ಣವಾಗಿ ವಿ ರೋ ಧ ವಾಗಿದೆ. ವೈರಲ್ ವೀಡಿಯೋದಲ್ಲಿ ಕಾಡಿನ ರಾಜನಾದ ಸಿಂಹ ಕ್ಕೆ ಒಂದು ಕಾಡೆಮ್ಮೆಯು ಹಗಲಿನ ವೇಳೆಯಲ್ಲೇ ನಕ್ಷತ್ರಗಳನ್ನು ತೋರಿಸಿದೆ.

ಸಿಂಹವನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವ ಎಲ್ಲಾ ಕಥೆಗಳನ್ನು ಎಮ್ಮೆಯು ಸುಳ್ಳಾಗಿಸಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ವೀಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಕಾಡಿನ ಹಾದಿಯಲ್ಲಿ ನಡೆದು ಬರುತ್ತಿದ್ದ ಎಮ್ಮೆಗೆ ಸಿಂಹವನ್ನು ಕಂಡು ರಕ್ತ ಕುದಿಯಿತೇನೋ ಎನ್ನುವಂತೆ ಉ ದ್ರಿ ಕ್ತಗೊಂಡಿದೆ. ಎಮ್ಮೆ ಸಿಂಹದ ಮೇಲೆ ಯಾವ ರೀತಿ ದಾಳಿ ಮಾಡುತ್ತದೇ ಎಂದರೆ ಕೆಲವೇ ಕ್ಷಣಗಳಲ್ಲಿ ಅದು ಸಿಂಹವನ್ನು ಮಣ್ಣು ಮುಕ್ಕಿಸುತ್ತದೆ. ಈ ವೀಡಿಯೋ ಸಾಕಷ್ಟು ರೋಚಕವಾಗಿದೆ ಎನ್ನುವುದು ಮಾತ್ರ ವಾಸ್ತವ ಆಗಿದೆ.

ಏಕೆಂದರೆ ಸಾಮಾನ್ಯವಾಗಿ ಸಿಂಹವನ್ನು ನೋಡಿದ ಕೂಡಲೇ ಎಮ್ಮೆಗಳು ಓಡಿ ಹೋಗುತ್ತವೆ. ಆದರೆ ಇಲ್ಲಿನ ಸನ್ನಿವೇಶದಲ್ಲಿ ಹಾಗೆ ನಡೆದಿಲ್ಲ. ಹೌದು ಕಾಡಿನಲ್ಲಿ ಕಾಡೆಮ್ಮೆಯೊಂದು ಕಾಡಿನಲ್ಲಿ ನಡೆದಾಡುತ್ತಿರುವುದನ್ನು ನಾವು ನೋಡಬಹುದು. ಹಾಗೆ ನಡೆದು ಬರುತ್ತಿದ್ದ ಎಮ್ಮೆ ಅಲ್ಲೇ ಪೊದೆಗಳ ನಡುವೆ ವಿಶ್ರಾಂತಿ ಪಡೆಯುತ್ತಿದ್ದ ಸಿಂಹವನ್ನು ನೋಡುತ್ತದೆ. ಸಿಂಹದ ಮೇಲೆ ಕಣ್ಣು ಬಿದ್ದ ಕೂಡಲೇ ಕ್ಷಣ ಕಾಲ ಕೂಡಾ ತಡ ಮಾಡದ ಎಮ್ಮೆ ಸಿಂಹದ ಮೇಲೆ ದಾ ಳಿ ಯಿಡಲು ಮುನ್ನುಗ್ಗುತ್ತದೆ. ಅದನ್ನು ಕಂಡು ಸಿಂಹ ಭ ಯ ದಿಂದ ಓಡುವ ಪ್ರಯತ್ನವನ್ನು ಮಾಡುತ್ತದೆ.

ಆದರೆ ಸಿಂಹವು ಹೆಚ್ಚು ದೂರ ಓಡುವುದು ಸಾಧ್ಯವಾಗುವುದಿಲ್ಲ. ಅದರ ಬೆನ್ನಟ್ಟಿ ಹಿಡಿದ ಎಮ್ಮೆಯು ತನ್ನ ಬಲವಾದ ಕೊಂಬುಗಳನ್ನು ಬಳಸಿ ಅದರಿಂದ ಸಿಂಹವನ್ನು ಗಾಳಿಯಲ್ಲಿ ಮೇಲೆತ್ತಿ ಎಸೆಯುತ್ತದೆ. ಮೇಲೆ ಹಾರಿದ ಸಿಂಹ ದೊಪ್ಪನೆ ಕೆಳಗೆ ಬೀಳುತ್ತದೆ. ಎಮ್ಮೆಯು ಸಿಂಹವನ್ನು ಹೇಗೆ ಎತ್ತಿ ಎಸೆಯುತ್ತದೆ ಎನ್ನುವುದನ್ನು ನೋಡಿದಾಗ ಒಂದು ಕ್ಷಣ ಬಹಳ ಅಚ್ಚರಿಯನ್ನುಂಟು ಮಾಡುತ್ತದೆ. ವೀಡಿಯೋ ನೋಡಿ ನೆಟ್ಟಿಗರು ಎಮ್ಮೆ ಸಾಹಸವನ್ನು ಭರ್ಜರಿಯಾಗಿ ಹಾಡಿ ಹೊಗಳುತ್ತಿದ್ದಾರೆ.

Leave a Reply

Your email address will not be published.