ಶಾಕಿಂಗ್!! ಪ್ರಭಾಸ್ ಸಿನಿಮಾಕ್ಕೆ ಮೊದಲ ದಿನವೇ ಕಲೆಕ್ಷನ್ ನಲ್ಲಿ ಪ್ರಬಲ ಸ್ಪರ್ಧೆ ಒಡ್ಡಿದೆ ಈ ಸಿನಿಮಾ

Entertainment Featured-Articles News

ಈ ಶುಕ್ರವಾರ ಬಾಲಿವುಡ್ ಅಂಗಳದಲ್ಲಿ ಎರಡು ಅದ್ಭುತ ಸಿನಿಮಾಗಳು ತೆರೆಕಂಡಿವೆ. ಎರಡು ಸಿನಿಮಾಗಳ ನಡುವಿನ ಪ್ರಮುಖವಾದ ಅಂತರವೇನು ಎನ್ನುವುದಾದರೆ ಒಂದು ಸಿನಿಮಾದ ಬಜೆಟ್ 350 ಕೋಟಿ ರೂಪಾಯಿಗಳಾದರೆ, ಮತ್ತೊಂದು ಸಿನಿಮಾದ ಬಜೆಟ್ ಕೇವಲ 14 ಕೋಟಿ ರೂಪಾಯಿಗಳಾಗಿವೆ. ಆದರೆ ಕಲೆಕ್ಷನ್ ವಿಚಾರಕ್ಕೆ ಬಂದಾಗ ಎರಡು ಸಿನಿಮಾಗಳು ಕೂಡಾ ಮೊದಲನೇ ದಿನವೇ ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಿವೆ. ಎರಡು ಸಿನಿಮಾಗಳೂ ಉತ್ತಮ ಕಲೆಕ್ಷನ್ ನೊಂದಿಗೆ ಮುನ್ನುಗ್ಗಿರುವುದು ಮಾತ್ರವೇ ಅಲ್ಲದೇ 14 ಕೋಟಿ ರೂಪಾಯಿಗಳಲ್ಲಿ ತಯಾರಾದ ಸಿನಿಮಾ 350 ಕೋಟಿ ರೂಪಾಯಿ ಸಿನಿಮಾಗೆ ಭರ್ಜರಿ ಸ್ಪರ್ಧೆಯನ್ನು ಒಡ್ಡಿದೆ.

ನಿನ್ನೆ ತೆರೆ ಕಂಡ ಆ ಎರಡು ಅದ್ಭುತ ಸಿನಿಮಾಗಳು ಯಾವುವು ಎಂದರೆ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ರಾಧೇಶ್ಯಾಮ್ ಸಿನಿಮಾ ಹಾಗೂ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಿ ಕಾಶ್ಮೀರ್ ಫೈಲ್ ಸಿನಿಮಾಗಳಾಗಿವೆ. ಈ ಸಿನಿಮಾ 90ರ ದಶಕದಲ್ಲಿ ಕಾಶ್ಮೀರದಲ್ಲಿ ಅಲ್ಲಿನ ನಿವಾಸಿಗಳಾಗಿದ್ದ ಕಾಶ್ಮೀರಿ ಪಂಡಿತರನ್ನು ವಸತಿ ಹೀನರನ್ನಾಗಿ ಮಾಡಿ, ಅವರ ಮೇಲೆ ನಡೆಸಿದ ದೌ ರ್ಜ ನ್ಯ ದ ಕಣ್ಣೀರ ಕಥೆಯನ್ನು ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಇರಿಸಲಾಗಿದೆ.

ವೀವೇಕ್ ಅಗ್ನಿಹೋತ್ರಿ ನಿರ್ದೇಶದನ ಈ ಸಿನಿಮಾ ಬಿಡುಗಡೆಯ ನಂತರ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮೂಲಕ ಸಿನಿಮಾ ಅಬ್ಬರಿಸುತ್ತಿದೆ. ಮೊದಲ ದಿನವೇ ಈ ಸಿನಿಮಾ ಮೂರೂವರೆ ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿದೆ.‌ ಸಿನಿಮಾ ಕಲೆಕ್ಷನ್ ಇದೇ ವೇಗದಲ್ಲಿ ಹೋದರೆ, ಕೆಲವೇ ದಿನಗಳಲ್ಲಿ ಸಿನಿಮಾ 50 ಕೋಟಿ ರೂಪಾಯಿಗಳ ಗಳಿಕೆಯನ್ನು ಸಿ ಕಾಣಲಿದೆ ಎಂದು ಹೇಳಲಾಗುತ್ತಿದೆ. ದಿ ಕಶ್ಮೀರ್ ಫೈಲ್ಸ್ ಸಿನಿಮಾ ಒಟ್ಟು 700 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದು, ನೈಜ ಕಥೆಯು, ವಿಭಿನ್ನವಾದ ಕಥಾನಕವು ಜನರ ಮನಸ್ಸನ್ನು ಮುಟ್ಟಿದೆ.

ಇದೇ ವೇಳೆ ದಕ್ಷಿಣದ ಸ್ಟಾರ್ ನಟ ಪ್ರಭಾಸ್ ಅಭಿನಯದ ರಾಧೇ ಶ್ಯಾಮ್ ಸಿನಿಮಾ ದಕ್ಷಿಣದಲ್ಲಿ ಮೊದಲನೇ ದಿನವೇ 35 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿ ಅಬ್ಬರಿಸಿದೆ. ಬಾಲಿವುಡ್ ನಲ್ಲಿ ಇದರ ಹಿಂದಿ ವರ್ಷನ್ ನ ಮೊದಲ ದಿನದ ಕಲೆಕ್ಷನ್ ನಾಲ್ಕುವರೆ ಕೋಟಿ ರೂಪಾಯಿಗಳು ಮಾತ್ರವಾಗಿದೆ. ಸಿನಿಮಾದ ಬಜೆಟ್ ಗೆ ಹೋಲಿಕೆ ಮಾಡಿದಾಗ ಇದು ಬಹಳ ಕಡಿಮೆ ಎನ್ನಲಾಗಿದೆ. ದಿ ಕಶ್ಮೀರ್ ಫೈಲ್ಸ್ ಕಲೆಕ್ಷನ್ ವಿಚಾರದಲ್ಲಿ ರಾಧೇಶ್ಯಾಮ್ ಸಿನಿಮಾಕ್ಕೆ ಪ್ರಬಲ ಸ್ಪರ್ಧೆಯನ್ನು ಒಡ್ಡುವಲ್ಲಿ ದಾಪುಗಾಲು ಹಾಕುತ್ತಿದೆ.

Leave a Reply

Your email address will not be published.