ಶಾಕಿಂಗ್: ಟಾಪ್ 5 ರೇಸ್ ನಿಂದ ಔಟ್ ಆದ ಜನಪ್ರಿಯ ಸೀರಿಯಲ್: ಹೊಸ ಸೀರಿಯಲ್ ಈ ರೇಸ್ ಗೆ ಎಂಟ್ರಿ!!

Entertainment Featured-Articles News

ಕನ್ನಡ ಕಿರುತೆರೆ ಎಂದ ಕೂಡಲೇ ಪ್ರೇಕ್ಷಕರಿಗೆ ನೆನಪಾಗುವ ಮೊದಲ ವಿಷಯ ಧಾರಾವಾಹಿಗಳು. ಏಕೆಂದರೆ ಕಿರುತೆರೆಯ ಲೋಕದಲ್ಲಿ ಈ ಧಾರಾವಾಹಿಗಳದ್ದೇ ಸಿಂಹ ಪಾಲು ಹಾಗೂ ಅವುಗಳನ್ನು ಮೆಚ್ಚಿ ನೋಡುವ ಪ್ರೇಕ್ಷಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲೇ ಇದೆ ಎನ್ನುವುದು ನಿಜ. ಆದ್ದರಿಂದಲೇ ಸೀರಿಯಲ್ ಗಳು ಮೆಗಾ ಸೀರಿಯಲ್ ಗಳ ರೂಪದಲ್ಲಿ ವರ್ಷಗಳ ಕಾಲ ಕಿರುತೆರೆಯಲ್ಲಿ ಮಿಂಚುತ್ತವೆ, ಕೆಲವು ಸೀರಿಯಲ್ ಗಳು ಜನರ ಅಪಾರ ಆದರ, ಅಭಿಮಾನ ಪಡೆದು ಟಾಪ್ ಸೀರಿಯಲ್ ಗಳಲ್ಲಿ ಸ್ಥಾನ ಪಡೆದು ಮಿಂಚುತ್ತವೆ.

ಸಾಮಾನ್ಯವಾಗಿ ಕಳೆದ ಕೆಲವು ವರ್ಷಗಳಿಂದಲೂ ಟಾಪ್ ಸೀರಿಯಲ್ ಗಳ ರೇಸ್ ನಲ್ಲಿ ಜೀ ಕನ್ನಡ ವಾಹಿನಿಯ ಸೀರಿಯಲ್ ಗಳೇ ಟಾಪ್ ಐದರಲ್ಲಿ ಸ್ಥಾನ ವನ್ನು ಪಡೆದು ಬೀಗುತ್ತಿವೆ. ಅಲ್ಲದೇ ಈ ವಾಹಿನಿಯ ಸೀರಿಯಲ್ ಗಳು ಬಿಟ್ಟರೆ ಬೇರೆ ವಾಹಿನಿಯ ಸೀರಿಯಲ್ ಗಳು ಟಾಪ್ ಇದರಲ್ಲಿ ಸ್ಥಾನ ಪಡೆಯುವುದು ಅಪರೂಪಕ್ಕೊಮ್ಮೆ ಎನ್ನುವ ಹಾಗೆ ನಡೆಯುತ್ತಿತ್ತು, ಆದರೆ ಅದು ಕೂಡಾ ಬೆರಳೆಣಿಕೆಯಷ್ಟು ಸಂದರ್ಭಗಳಲ್ಲಿ ಮಾತ್ರವೇ ಎನ್ನುವುದು ವಾಸ್ತವ.

ಕಳೆದ ವಾರವೂ ಸಹಾ ಟಾಪ್ ಐದರ ವಿಚಾರಕ್ಕೆ ಬಂದರೆ ಟಿ ಆರ್ ಪಿ ಆಧಾರವಾಗಿ ಟಾಪ್ ಐದರಲ್ಲಿ ಜೀ ವಾಹಿನಿಯ ಸೀರಿಯಲ್ ಗಳೇ ಇದ್ದವು. ಆದರೆ ಈಗ ಈ ವಾರದ ಟಿ ಆರ್ ಪಿ ಹೊರ ಬಂದ ಮೇಲೆ ಟಾಪ್ ಐದು ಧಾರಾವಾಹಿಗಳಲ್ಲಿ ಒಂದು ದೊಡ್ಡ ಬದಲಾವಣೆಯೇ ಆಗಿದೆ. ಹೌದು, ಈ ವಾರ ಟಾಪ್ ಐದರಲ್ಲಿ ಹೊಸ ಸೀರಿಯಲ್ ಒಂದು ಎಂಟ್ರಿ ನೀಡಿದ್ದು, ಈ ಮೂಲಕ ಜೀ ವಾಹಿನಿಯ ಒಂದು ಜನಪ್ರಿಯ ಸೀರಿಯಲ್ ಟಾಪ್ ಐದರಿಂದ ಹೊರ ಬಿದ್ದಿದೆ.

ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಭಾರೀ ವೈಭವದಿಂದ, ಅದ್ದೂರಿಯಾಗಿ ಭಾರೀ ತಾರಾಗಣದೊಂದಿಗೆ ಆರಂಭವಾಗಿರುವ ಹೊಸ ಸೀರಿಯಲ್ ರಾಮಾಚಾರಿ ಆರಂಭವಾದ ಮೊದಲ ವಾರದಲ್ಲೇ ದೊಡ್ಡ ಮಟ್ಟದ ಯಶಸ್ಸನ್ನು ತನ್ನದಾಗಿಸಿಕೊಂಡಿದ್ದು, ಟಾಪ್ ಸೀರಿಯಲ್ ಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ. ಅದರ ಮೊದಲ ಭಾಗ ಎನ್ನುವಂತೆ ಈಗ ರಾಮಾಚಾರಿ ಇಷ್ಟು ದಿನ ಜನಪ್ರಿಯತೆ ಪಡೆದಿದ್ದ ಟಾಪ್ ಸೀರಿಯಲ್ ಒಂದನ್ನು ಹಿಂದಕ್ಕೆ ಹಾಕಿ ಆ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ಕಿರುತೆರೆಯಲ್ಲಿ ಬೋಲ್ಡ್, ಬಿಂದಾಸ್ ಆಗಿ ಮನೆಯ ಜವಾಬ್ದಾರಿ ಹೊತ್ತ ಕೆಚ್ಚೆದೆಯ ಹೆಣ್ಣಾದ ಸತ್ಯ ಳ ಕಥೆ ಹೊತ್ತು ಜನರ ಅಪಾರ ಮೆಚ್ಚುಗೆ ಪಡೆದು ಆರಂಭದಲ್ಲಿ ಟಾಪ್ ಒಂದು ಸ್ಥಾನ ತನ್ನದಾಗಿಸಿಕೊಂಡು ಅನಂತರ ಒಂದೊಂದೇ ಸ್ಥಾನ ಕಳೆದುಕೊಂಡು, ಕಳೆದ ಕೆಲವು ಸಮಯದಿಂದ ಟಾಪ್ ಐದನೇ ಸ್ಥಾನದಲ್ಲಿ ತೃಪ್ತಿ ಪಟ್ಟುಕೊಂಡಿದ್ದ ಸತ್ಯ ಸೀರಿಯಲ್ ಈ ವಾರ ಟಾಪ್ ಐದರ ರೇಸ್ ನಿಂದ ಹೊರ ಬಿದ್ದಿದೆ, ಸತ್ಯ ಜಾಗಕ್ಕೆ ರಾಮಾಚಾರಿ ಆಗಮನವಾಗಿದೆ. ಇದು ನಿಜಕ್ಕೂ ಯಾರೂ ನಿರೀಕ್ಷೆ ಮಾಡಿರದ ಬೆಳೆವಣಿಗೆ ಆಗಿದೆ..

ಈ ವಾರ ಪುಟ್ಟಕ್ಕನ ಮಕ್ಕಳು ಎಂದಿನಂತೆ ಮೊದಲ ಸ್ಥಾನದಲ್ಲಿ ಇದ್ದು, ಎರಡನೇ ಸ್ಥಾನದಲ್ಲಿ ಗಟ್ಟಿಮೇಳ, ಮೂರರಲ್ಲಿ ಹಿಟ್ಲರ್ ಕಲ್ಯಾಣ, ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲಿ ಇದ್ದರೆ ಐದನೇ ಸ್ಥಾನ ಹೊಸ ಧಾರಾವಾಹಿ ರಾಮಾಚಾರಿಯ ಪಾಲಾಗಿದ್ದು, ಸತ್ಯ ಸೀರಿಯಲ್ ಬಹಳ ದಿನಗಳ ನಂತರ ಟಾಪ್ ರೇಸ್ ನಿಂದ ಹೊರ ಬಿದ್ದಿದೆ.

Leave a Reply

Your email address will not be published. Required fields are marked *