ಧೂ ಮ ಪಾನ ಅಥವಾ ಸ್ಮೋ ಕಿಂ ಗ್ ಮಾಡುವುದು ಬಹಳಷ್ಟು ಅ ಪಾ ಯಕಾರಿ ಎಂದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಸರ್ಕಾರವು ಮಾಡುತ್ತಲೇ ಇರುತ್ತದೆ. ಆದರೂ ಕೂಡಾ ಅನೇಕರಿಗೆ ಇದೊಂದು ಅಭ್ಯಾಸವಾಗಿದ್ದು, ಅವರು ಅದನ್ನು ಬಿಟ್ಟು ಬದುಕುವುದು ಅಸಾಧ್ಯ ಎನ್ನುವ ಭ್ರಮೆಯಲ್ಲೇ ಇರುತ್ತಾರೆ. ಸಿಗರೇಟ್ ಪ್ಯಾಕೆಟ್ ಗಳ ಮೇಲೆ ಕೂಡಾ ಸ್ಮೋಕಿಂಗ್ ಎನ್ನುವುದು ಅ ಪಾ ಯಕಾರಿ ಎನ್ನುವ ಸೂಚನೆಯನ್ನು ನೀಡಲಾಗಿರುತ್ತದೆ. ಅದರ ಅನೇಕರಿಗೆ ಅದರ ಕಡೆಗೆ ಗಮನ ನೀಡುವಷ್ಟು ತಾಳ್ಮೆ, ಆಲೋಚಿಸುವಷ್ಟು ವಿವೇಚನೆ ಉಳಿದಿಲ್ಲ ಎನ್ನುವುದು ವಾಸ್ತವದ ವಿಷಯವಾಗಿದೆ.
ಧೂಮಪಾನದ ಬಗ್ಗೆ ಕೇವಲ ಮನುಷ್ಯರಿಗೆ ಮಾತ್ರವೇ ಅಲ್ಲ ಇನ್ನು ಮುಂದೆ ಪ್ರಾಣಿಗಳಿಗೂ ಬುದ್ಧಿ ಹೇಳಬೇಕಾಗಬಹುದೇನೋ ಎನಿಸುವಂತಹ ಘಟನೆಯೊಂದರ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಜನರನ್ನು ಅಚ್ಚರಿಯಲ್ಲಿ ಮುಳುಗಿಸುತ್ತಿದೆ. ವಿಡಿಯೋ ನೋಡಿ ಜನರು ದಂಗಾಗಿದ್ದಾರೆ. ಅಲ್ಲದೇ ಏನಿದು ವಿಚಿತ್ರ?? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಘಟನೆಯು ಕೆಲವರಿಗೆ ಅರ್ಥವಾಗದೇ ತಲೆಕೆಡಿಸಿಕೊಂಡಿದ್ದಾರೆ. ಹಾಗಿದ್ದರೆ ಧೂಮಪಾನಕ್ಕೆ ಹಾಗೂ ಪ್ರಾಣಿಗೆ ಈ ವೀಡಿಯೋ ಹೇಗೆ ಸಂಬಂಧ ಎನ್ನುವುದನ್ನು ತಿಳಿಯೋಣ ಬನ್ನಿ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ತಿಳಿಸಿರುವ ಪ್ರಕಾರ ಈ ವಿಚಿತ್ರ ಘಟನೆ ನೇಪಾಳದಲ್ಲಿನಡೆದಿದೆ ಎನ್ನಲಾಗುತ್ತಿದೆ. ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯವನ್ನು ಗಮನಿಸಿದಾಗ, ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ ಮೇಕೆಯೊಂದು ಒಂದು ಬೆಂಚಿನ ಮೇಲೆ ಕುಳಿತುಕೊಂಡು, ತಮ್ಮ ಮುಂದೆ ಇರುವ ಟೇಬಲ್ ನ ಮೇಲೆ ಬರುತ್ತಿರುವ ಹೊಗೆಯನ್ನು ಎಷ್ಟೋ ಅಭ್ಯಾಸ ಆಗಿರುವಂತೆ ಮೂಗಿನ ಮೂಲಕ ಎಳೆದುಕೊಂಡು ಬಾಯಿಂದ ಹೊರಕ್ಕೆ ಬಿಡುವುದು ಕಾಣಿಸುತ್ತಿದೆ. ಮನುಷ್ಯರು ಸಿಗರೇಟಿನ ಹೊಗೆಯನ್ನು ಎಳೆದುಕೊಂಡು ಬಿಡುವಂತೆ ಮೇಕೆಯ ವರ್ತನೆಯೂ ಕಾಣುತ್ತಿದೆ.
ಮೇಕೆ ಯು ಹೀಗೆ ಹೊಗೆಯನ್ನು ಎಳೆದುಕೊಂಡು ಅದನ್ನು ಹೊರಗೆ ಬಿಡುವ ದೃಶ್ಯವನ್ನು ಕಂಡು ನೆಟ್ಟಿಗರು ಶಾ ಕ್ ಆಗಿದ್ದಾರೆ. ಇದೇನಾದರೂ ಫೋಟೋ ಶಾಪ್ ಅಥವಾ ಎಡಿಟ್ ಮಾಡಿರುವಂತಹ ವಿಡಿಯೋನಾ?? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮೇಕೆ ಹೀಗೆ ಹೊಗೆಯನ್ನು ಬಿಡುವುದಕ್ಕೆ ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ. ಫೆಬ್ರವರಿ 6ರಂದು ಟ್ವಿಟರ್ ಖಾತೆಯೊಂದರಲ್ಲಿ ಶೇರ್ ಆಗಿರುವ ಈ ವಿಡಿಯೋಗೆ ದೊಡ್ಡ ಮಟ್ಟದಲ್ಲಿ ವೀಕ್ಷಣೆಗಳು, ಲೈಕ್ ಗಳು ಮತ್ತು ಕಾಮೆಂಟ್ ಗಳು ಹರಿದು ಬರುತ್ತಿವೆ.
ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಬಹುಶಃ ದೇವಾಲಯವೊಂದರ ಹೊರಗೆ ಸಾಂಬ್ರಾಣಿ ಹೊಗೆ ಬರುತ್ತಿದ್ದರೆ, ಮೇಕೆ ಅದನ್ನು ಎಳೆದುಕೊಂಡು ಬಾಯಿಂದ ಹೊರಗೆ ಬಿಡುತ್ತಿದೆ ಎನ್ನುವಂತೆ ಕಾಣುತ್ತದೆ. ವೀಡಿಯೋ ನೋಡಿದ ನೆಟ್ಟಿಗರ ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕಾಮೆಂಟ್ ಗಳನ್ನು ಮಾಡಿದವರಲ್ಲಿ ಕೆಲವರು ಪ್ರಾಣಿಗಳು ಸಹ ಅಪ್ಡೇಟ್ ಆಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಇನ್ನೂ ಕೆಲವರು ಮುಗ್ದ ಪ್ರಾಣಿಗೆ ಅದೇನೆಂದು ತಿಳಿದಿಲ್ಲ, ಪ್ರಾಣಿಗಳನ್ನು ಅಂತಹ ಪರಿಸರದಿಂದ ದೂರವಿಡಿ ಎಂದು ಸಲಹೆ ನೀಡಿದ್ದಾರೆ.