ಶಾಕಿಂಗ್: ಕನ್ನಡತಿ ಸೀರಿಯಲ್ ನಿಂದ ಹೊರ ಬಂದ ನಟ! ಆ ನಟನ ಜಾಗಕ್ಕೆ ಬೇರೊಬ್ಬ ನಟನ ಎಂಟ್ರಿ

0 5

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ತನ್ನದೇ ಆದ ಹೊಸ ಶೈಲಿ, ವಿಭಿನ್ನ ಕಥಾನಕ ಹಾಗೂ ರೋಚಕ ಕಥೆಯೊಂದಿಗೆ ಪ್ರೇಕ್ಷಕರ ಅಭಿಮಾನವನ್ನು ಪಡೆದು ಯಶಸ್ವಿಯಾಗಿ ಸಾಗುತ್ತಿರುವ ಧಾರಾವಾಹಿ ಎಂದರೆ ಅದು ಕನ್ನಡತಿ ಧಾರಾವಾಹಿ. ಕಿರುತೆರೆಯ ಪ್ರೇಕ್ಷಕರ ವಿಶೇಷ ಆದರ, ಅಭಿಮಾನಗಳನ್ನು ಗಳಿಸಿಕೊಂಡಿರುವ ಕನ್ನಡತಿ ಸೀರಿಯಲ್ ಅನ್ನು ಮೆಚ್ಚಿರುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇನ್ನು ಇದೀಗ ಈ ಧಾರಾವಾಹಿಯಲ್ಲಿನ ಹೊಸ ಟ್ವಿಸ್ಟ್ ಗಳು ಹಾಗೂ ರೋಚಕ ಸನ್ನಿವೇಶಗಳು ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯನ್ನು ನೀಡುತ್ತಿದ್ದು, ಹೆಚ್ಚು ಆಕರ್ಷಕವಾಗಿ ಮೂಡಿ ಬರುತ್ತಿದೆ.

ಕನ್ನಡತಿ ಸೀರಿಯಲ್ ನಲ್ಲಿ ಮದುವೆಯ ಎಪಿಸೋಡ್ ಗಳು ಪ್ರಸಾರವಾಗುತ್ತಿದ್ದು, ಬೆಂಗಳೂರಿನ ಹೊರ ವಲಯದಲ್ಲಿರುವ ರೆಸಾರ್ಟ್ ಒಂದರಲ್ಲಿ ಅದ್ದೂರಿ ಸೆಟ್ ಹಾಕಿ ಮದುವೆ ಸಂಚಿಕೆಗಳ ಚಿತ್ರೀಕರಣವನ್ನು ನಡೆಸಲಾಗುತ್ತಿದೆ. ಅರಿಶಿಣ ಶಾಸ್ತ್ರದಿಂದ ಹಿಡಿದು ಬಳೆ ಶಾಸ್ತ್ರದ ವರೆಗಿನ ಸನ್ನಿವೇಶಗಳು ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆದಿದೆ. ಮದುವೆಯ ಎಪಿಸೋಡ್ ಗಳ ಚಿತ್ರೀಕರಣವು ಕಳೆದ ಕೆಲವು ದಿನಗಳಿಂದಲೂ ಬಹಳ ಜೋರಾಗಿ ನಡೆದಿದೆ ಎನ್ನಲಾಗಿದೆ. ಈಗ ಇವೆಲ್ಲವುಗಳ ನಡುವೆಯೇ ಹೊಸ ಸುದ್ದಿಯೊಂದು ಸಹಾ ಹೊರ ಬಂದಿದೆ.

ಕನ್ನಡತಿ ಸೀರಿಯಲ್ ನಲ್ಲಿ ನಾಯಕ ಹರ್ಷನ ಅಣ್ಣ ನ‌ ಪಾತ್ರದಲ್ಲಿ ನಟಿಸುತ್ತಿದ್ದ ಅಂದರೆ ಡಾ. ದೇವ್ ಪಾತ್ರದಲ್ಲಿ ನಟಿಸುತ್ತಿದ್ದ ನಟ ವಿಜಯ್ ಕೃಷ್ಣ ಅವರು ತಮ್ಮ ಪಾತ್ರದಿಂದ ಹೊರ ನಡೆದಿದ್ದಾರೆ‌. ಮಾದ್ಯಮವೊಂದರ ವರದಿಯ ಪ್ರಕಾರ ನಟ ವಿಜಯ್ ಕೃಷ್ಣ ಅವರು ತಮ್ಮ ಕಮಿಟ್ಮೆಂಟ್ ಗಳ ಕಾರಣದಿಂದ ಕನ್ನಡತಿ ಸೀರಿಯಲ್ ನ ತಮ್ಮ ಪಾತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ ಅವರ ಈ ಪಾತ್ರಕ್ಕೆ ಈಗಾಗಲೇ ಹೊಸ ನಟನ ಆಗಮನ ಸಹಾ ಆಗಿದೆ ಎಂದು ತಿಳಿದು ಬಂದಿದೆ.

ಹೌದು ಇನ್ಮುಂದೆ ನಾಯಕ ಹರ್ಷನ ಅಣ್ಣ, ಡಾ. ದೇವ್ ಪಾತ್ರದಲ್ಲಿ ಮತ್ತೊಬ್ಬ ಜನಪ್ರಿಯ ನಟ ಹೇಮಂತ್ ಕುಮಾರ್ ಅವರು ಕಾಣಿಸಿಕೊಳ್ಳಲಿದ್ದಾರೆ. ನಟ ಹೇಮಂತ್ ಕುಮಾರ್ ಅವರು ಈಗಾಗಲೇ ಸೀರಿಯಲ್ ತಂಡವನ್ನು ಸೇರಿಕೊಂಡಿದ್ದು, ಅವರ ಪಾತ್ರದ ಚಿತ್ರೀಕರಣದಲ್ಲಿ ಸಹಾ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಕನ್ನಡತಿ ಸೀರಿಯಲ್ ನ ಮದುವೆ ಭಾಗದ ಚಿತ್ರೀಕರಣದ ವೇಳೆಯಲ್ಲೇ ಹೇಮಂತ್ ಅವರು ಸೀರಿಯಲ್ ತಂಡವನ್ನು ಸೇರಿದ್ದಾರೆ. ಇನ್ಮುಂದೆ ಅವರೇ ಡಾ. ದೇವ್ ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

Leave A Reply

Your email address will not be published.