ಶಾಕಿಂಗ್:ವಿಕ್ಕಿ-ಕತ್ರೀನಾ ಮದುವೆ ಬಗ್ಗೆ ವಿಕ್ಕಿ ಕೌಶಲ್ ಸಂಬಂಧಿ ಹೇಳಿದ ಮಾತು ಕೇಳಿ ಅಭಿಮಾನಿಗಳು ಶಾಕ್
ಬಾಲಿವುಡ್ ನ ವಿಚಾರಗಳಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡಿರುವುದು, ಪರಸ್ಪರ ಪ್ರೀತಿಯಲ್ಲಿ ಮುಳುಗಿರುವ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಮದುವೆಯ ವಿಷಯವಾಗಿದೆ. ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಹಾಗೂ ಇವರ ಮದುವೆ ಬರುವ ಡಿಸೆಂಬರ್ ತಿಂಗಳ 7 ನೇ ತಾರೀಖಿನಿಂದ 12 ನೇ ತಾರೀಖಿನವರೆಗೂ ರಾಜಸ್ಥಾನದ ಒಂದು ಐಶಾರಾಮೀ ಹೋಟೆಲ್ ನಲ್ಲಿ ನಡೆಯಲಿದೆ ಎನ್ನುವ ಸುದ್ದಿ ಈಗಾಗಲೇ ಬಾಲಿವುಡ್ ತುಂಬೆಲ್ಲ ಹರಿದಾಡುತ್ತಿದೆ. ಅಲ್ಲದೇ ಮದುವೆಯ ಕುರಿತಾದ ಆಸಕ್ತಿಕರ ಮಾಹಿತಿಗಳು ಕೂಡಾ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.
ರಾಜಸ್ಥಾನದಲ್ಲಿರುವ ಸಿಕ್ಸ್ ಸೆನ್ಸಸ್ ಪೋರ್ಟ್ ಹೋಟೆಲಲ್ಲಿ ವಿಕ್ಕಿ ಹಾಗೂ ಕತ್ರಿನಾ ಮದುವೆ ವಿಜೃಂಭಣೆಯಿಂದ ನಡೆಯಲಿದೆ. ಈ ಮದುವೆ ಸಿದ್ಧತೆಯನ್ನು ಗಮನಿಸಲು ಹತ್ತು ಜನರ ತಂಡವೊಂದು ಈಗಾಗಲೇ ಅಲ್ಲಿಗೆ ರವಾನೆಯಾಗಿದೆ ಎನ್ನುವ ಬಹಳಷ್ಟು ಸುದ್ದಿಗಳು ವರದಿಯಾಗಿದ್ದು, ಎಲ್ಲರ ಗಮನವನ್ನು ಸೆಳೆದಿದ್ದಾರೆ. ಹೀಗೆ ತಮ್ಮ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರೂ ಸಹಾ ನಟ ವಿಕ್ಕಿ ಕೌಶಲ್ ಹಾಗೂ ನಟಿ ಕತ್ರಿನಾ ಕೈಫ್ ಇಬ್ಬರಲ್ಲಿ ಯಾರೊಬ್ಬರೂ ಕೂಡಾ ಇನ್ನೂ ತಮ್ಮ ಮದುವೆಯ ಕುರಿತಾಗಿ ಚಿಕ್ಕ ಮಾತನ್ನು ಕೂಡಾ ಆಡಿಲ್ಲ.
ಈ ಇಬ್ಬರೂ ಇನ್ನೂ ಯಾವುದೇ ಮಾಧ್ಯಮಗಳ ಮುಂದೆ ತಮ್ಮ ಮದುವೆಯ ವಿಷಯವನ್ನು ಬಹಿರಂಗಪಡಿಸಿಲ್ಲ. ಆದರೆ ಮದುವೆಯ ಬಗ್ಗೆ ರೂಮರ್ಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ರೂಮರ್ಸ್ ಗಳ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ವಿಕ್ಕಿ ಕೌಶಲ್ ಅವರ ಸಂಬಂಧಿಯೊಬ್ಬರು ಮದುವೆಯ ಕುರಿತಾಗಿ ಮಾತನಾಡಿದ್ದಾರೆ. ವಿಕ್ಕಿ ಕೌಶಲ್ ಸಂಬಂಧಿ ಎನ್ನಲಾಗಿರುವ ಇವರು ಮದುವೆಯ ವಂದತಿ ಸುಳ್ಳು, ಯಾವುದೇ ಮದುವೆ ನಡೆಯುತ್ತಿಲ್ಲ ಎನ್ನುವ ವಿಚಾರವನ್ನು ತಿಳಿಸಿದ್ದಾರೆನ್ನಲಾಗಿದೆ.
ಮದುವೆಯ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳೆಲ್ಲ ಸುಳ್ಳು, ಇದೆಲ್ಲವೂ ಕೂಡಾ ಮೀಡಿಯಾ ಹಬ್ಬಿಸುತ್ತಿರುವ ಗಾಳಿ ಸುದ್ದಿಗಳು. ಮದುವೆ ನಡೆಯುವುದೇ ಆಗಿದ್ದರೆ ಅದರ ಬಗ್ಗೆ ಅಧಿಕೃತವಾಗಿ ವಿಷಯಗಳನ್ನು ತಿಳಿಸುತ್ತಿದ್ದರು. ಆದರೆ ಅಂತಹ ಯಾವುದೇ ವಿಚಾರ ಕೂಡಾ ಇಲ್ಲ. ಬಾಲಿವುಡ್ ನಲ್ಲಿ ಇಂತಹ ರೂಮರ್ಸ್ ಗಳು ಹರಡುವುದು ಸಹಜ. ಎಷ್ಟೋ ಬಾರಿ ಇಂತಹ ವದಂತಿಗಳು ಸುಳ್ಳಾಗಿವೆ. ಈ ಸುದ್ದಿಯು ಕೂಡಾ ಸುಳ್ಳು. ವಿಕ್ಕಿ ಕೌಶಲ್ ಹತ್ತಿರ ಕೂಡಾ ಈ ವಿಷಯ ಮಾತನಾಡಿದೆ.
ಅವರ ಮದುವೆ ನಡೆಯುತ್ತಿಲ್ಲ ಎಂದು ವಿಕ್ಕಿ ಅವರ ಸಂಬಂಧಿ ಯಾಗಿರುವ ಡಾಕ್ಟರ್ ಉಪಾಸನಾ ವೋಹ್ರಾ ಅವರು ವೆಬ್ಸೈಟ್ ಒಂದರ ಜೊತೆಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದೇ ವೇಳೆ ಮದುವೆಯ ಕುರಿತಾಗಿ ಸಾಕಷ್ಟು ಸುದ್ದಿಯಾಗಿ ಎಲ್ಲರ ಗಮನ ಅತ್ತ ಹರಿದಿರುವುದರಿಂದ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಅಥವಾ ಅಟೆಂಶನ್ ಡೈವರ್ಟ್ ಮಾಡುವ ಸಲುವಾಗಿ ವಿಕ್ಕಿ ಅವರ ಸಂಬಂಧಿ ಇಂತಹದೊಂದು ಹೇಳಿಕೆಯನ್ನು ನೀಡಿರಬಹುದು ಎನ್ನುವ ಅನುಮಾನಗಳು ಕೂಡ ವ್ಯಕ್ತವಾಗುತ್ತಿದೆ.
ಆದರೆ ಇಲ್ಲಿ ಗಮನಿಸಲೇಬೇಕಾದ ವಿಷಯ ಏನೆಂದರೆ ಮದುವೆಯ ವಿಚಾರವಾಗಿ ವಿಕ್ಕಿ ಕೌಶಲ್ ಅಥವಾ ಕತ್ರಿನಾ ಕೈಫ್ ಮಾತ್ರ ಮೌನಕ್ಕೆ ಜಾರಿದ್ದಾರೆ. ಅವರು ಯಾವುದೇ ರೀತಿಯ ವಿಚಾರವನ್ನು ಬಹಿರಂಗಪಡಿಸಿಲ್ಲ. ಮದುವೆ ನಡೆಯುತ್ತದೆ ಅಥವಾ ಇಲ್ಲವೇ ಎನ್ನುವ ವಿಚಾರ ಅವರ ನೇರವಾಗಿ ಹೇಳದ ಕಾರಣ ಈಗ ಎಲ್ಲರಿಗೂ ಸಹಾ ಒಂದು ಅನುಮಾನ ಖಂಡಿತ ಮೂಡಿದೆ.