ಶಹನಾಜ್ ಸಹೋದರ ಸಿದಾರ್ಥ್ ಶುಕ್ಲಾ ನೆನಪಿನಲ್ಲಿ ಮಾಡಿದ ಮನಮಿಡಿಯುವ ಕೆಲಸ ನೋಡಿ ಭಾವುಕರಾದ ನೆಟ್ಟಿಗರು

Written by Soma Shekar

Published on:

---Join Our Channel---

ಹಚ್ಚೆ ಹಾಕಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಒಂದು ಫ್ಯಾಷನ್ ಎನಿಸಿದೆ. ಅಲ್ಲದೇ ಹಚ್ಚೆ ಹಾಕಿಸಿಕೊಳ್ಳುವುದನ್ನು ಟ್ಯಾಟೂ ಎಂದು ಆಧುನಿಕ ಹೆಸರಿನಿಂದ ಕರೆಯಲಾಗುತ್ತದೆ. ತಮ್ಮ ಪ್ರೀತಿ ಪಾತ್ರರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳುವುದು ಒಂದು ಭಾವನಾತ್ಮಕ ಸಂಬಂಧದ ಕುರುಹಾಗಿರುತ್ತದೆ. ಇನ್ನು ಕೆಲವರು ತಮ್ಮ ಅಭಿಮಾನ ನಟ ಅಥವಾ ನಟಿಯರ ಇಲ್ಲವೇ ಕ್ರೀಡಾಪಟುಗಳ ಚಿತ್ರವನ್ನು ಟ್ಯಾಟು ಹಾಕಿಸಿಕೊಳ್ಳುವುದು ಕ್ರೇಜ್ ಎನಿಸಿದೆ. ಇಂತಹುದೇ ಒಂದು ಭಾವನಾತ್ಮಕ ಅಥವಾ ಎಮೋಷನಲ್ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ ಶಹನಾಜ್ ಗಿಲ್ ಅವರ ಸಹೋದರ ಶಹಬಾಜ್ ಬಡೇಶಾ.

ಹೌದು, ಕೆಲವು ದಿನಗಳ ಹಿಂದೆಯಷ್ಟೇ ಬಾಲಿವುಡ್ ಹಾಗೂ ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ, ಬಿಗ್ ಬಾಸ್ 13ನೇ ಸೀಸನ್ ವಿನ್ನರ್ ಕೂಡಾ ಆಗಿ, ತನ್ನ ಬಿಂದಾಸ್ ಸ್ಟ್ರೈಲ್ ಇಂದಲೇ ಜನರ ಮನಸ್ಸನ್ನು ಗೆದ್ದಿದ್ದ ಸಿದ್ದಾರ್ಥ್ ಶುಕ್ಲಾ ಅವರು ಇಹಲೋಕವನ್ನು ತ್ಯಜಿಸಿದರು. ಸಿದ್ದಾರ್ಥ್ ಶುಕ್ಲ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಬಹಳಷ್ಟು ಜನ ಸಿದ್ದಾರ್ಥ ಇನ್ನಿಲ್ಲ ಎನ್ನುವುದನ್ನು ನಂಬಲು ಸಿದ್ಧರಿರಲಿಲ್ಲ.

ಇಂತಹ ಸಂದರ್ಭದಲ್ಲಿ ಬಿಗ್ ಬಾಸ್ 13ರಲ್ಲಿ ಪರಿಚಯವಾಗಿದ್ದ ಶಹನಾಜ್ ಮತ್ತು ಸಿದ್ಧಾರ್ಥ್ ಶುಕ್ಲಾ ಬಹಳ ಹತ್ತಿರವಾಗಿ, ಅನಂತರ ಆತ್ಮೀಯವಾಗಿ ಇಬ್ಬರ ನಡುವೆ ಒಂದು ಅವಿನಾಭಾವ ಸ್ನೇಹ ಏರ್ಪಟ್ಟಿತ್ತು. ಶಹನಾಜ್ ಹಾಗೂ ಸಿದ್ದಾರ್ಥ್ ರನ್ನು ಅಭಿಮಾನಿಗಳು ಸಿದ್ನಾಜ್ ಎಂದೇ ಕರೆಯುತ್ತಿದ್ದರು. ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು, ಜೊತೆ ಜೊತೆಯಲ್ಲಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ಸಿದ್ದಾರ್ಥ್ ಹಾಗೂ ಶೆಹನಾಜ್ ನಟಿಸಿರುವ ಮ್ಯೂಸಿಕ್ ಆಲ್ಬಮ್ ಬಿಡುಗಡೆಯಾಗಿತ್ತು.

ಸುದ್ದಿಗಳ ಪ್ರಕಾರ ಬರುವ ಡಿಸೆಂಬರ್ ನಲ್ಲಿ ಇಬ್ಬರೂ ಮದುವೆಯಾಗುವ ನಿರ್ಧಾರವನ್ನು ಸಹ ಮಾಡಿದ್ದರು ಎನ್ನಲಾಗಿದೆ. ಶಹನಾಜ್ ಸಿದ್ಧಾರ್ಥ್ ಅವರನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬುದು ಬಹಳಷ್ಟು ಜನರಿಗೆ ತಿಳಿದಿರುವ ವಿಷಯವಾಗಿದೆ. ಹೀಗೆ ಬಹಳ ಪ್ರೀತಿಸಿದ ಸಿದ್ಧಾರ್ಥ್ ನಿಧನದ ನಂತರ ಶಹನಾಜ್ ಮಂಕಾಗಿದ್ದಾರೆ. ತಮ್ಮ ಫೋನ್ ಗಳ ಬಳಕೆಯನ್ನು ನಿಲ್ಲಿಸಿ, ಮಾದ್ಯಮಗಳಿಂದ ದೂರವೇ ಉಳಿತು ಅಂತರ್ಮುಖಿಯಾಗಿ ಬಿಟ್ಟಿದ್ದಾರೆ.

ಇಂತಹ ಸಂದರ್ಭದಲ್ಲಿ ಶಹನಾಜ್ ಅವರ ಸಹೋದರ ಶಹಬಾಜ್ ಅಗಲಿದ ಆಪ್ತ ಗೆಳೆಯ ಸಿದ್ಧಾರ್ಥ್ ಶುಕ್ಲಾ ಅವರ ಮುಖವನ್ನು ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಆ ಟ್ಯಾಟೂ ಚಿತ್ರದ ಕೆಳಗೆ ತಮ್ಮ ಸಹೋದರಿ ಶಹನಾಜ್ ಹೆಸರನ್ನು ಕೂಡಾ ಬರೆಸಿಕೊಂಡಿದ್ದಾರೆ. ಈ ಮೂಲಕ ಶಹಬಾಜ್ ಶಹನಾಜ್ ಮತ್ತು ಸಿದ್ದಾರ್ಥ್ ನಡುವಿನ ಪ್ರೀತಿ ಹಾಗೂ ಆತ್ಮೀಯತೆಯ ಆತ್ಮೀಯತೆಯನ್ನು ಭದ್ರಪಡಿಸಿದ್ದಾರೆ.

ಶಹಬಾಜ್ ಹಚ್ಚೆ ಹಾಕಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರು ಫೋಟೋ‌ ಜೊತೆಗೆ, “ನಿಮ್ಮಂತೆಯೇ ನಿಮ್ಮೊಂದಿಗಿನ ನೆನಪುಗಳು ಕೂಡಾ ಸದಾ ಹಸಿರಾಗಿರುತ್ತದೆ. ನೀವು ಯಾವಾಗಲೂ ನಮ್ಮೊಂದಿಗೆ ಜೀವಂತವಾಗಿರುತ್ತೀರಿ, ನಮ್ಮ ನೆನಪುಗಳಲ್ಲಿ ಜೀವಂತವಾಗಿರುತ್ತೀರಿ” ಎಂದು ಬರೆದುಕೊಂಡಿದ್ದಾರೆ
ಶಹಬಾಜ್ ಹಾಕಿಸಿಕೊಂಡಿರುವ ಟ್ಯಾಟೂ ಹಾಗೂ ಬರೆದುಕೊಂಡಿರುವ ಸಾಲುಗಳನ್ನು ನೋಡಿ ಬಹಳಷ್ಟು ಜನ ಸಿದ್ಧಾರ್ಥ್ ಅಭಿಮಾನಿಗಳು ಭಾವುಕರಾಗಿದ್ದಾರೆ.

ಭಾವುಕರಾದ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೆಟ್ಟಿಗರು ಸಹಾ ಶಹಬಾಜ್ ಅವರ ಈ ಕಾರ್ಯವನ್ನು ನೋಡಿ ತಮ್ಮ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ. ಅನಿರೀಕ್ಷಿತವಾಗಿ ತಮ್ಮೆಲ್ಲರನ್ನು ಅಗಲಿದ ಸಿದ್ದಾರ್ಥ್ ಶುಕ್ಲಾ ಅವರ ಬಗ್ಗೆ ಮತ್ತೊಮ್ಮೆ ಜನ ಸ್ಮರಿಸುತ್ತ ಭಾವುಕರಾಗಿದ್ದಾರೆ. ಶಹಬಾಜ್ ಹಾಕಿಸಿಕೊಂಡ ಹಚ್ಚೆಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ.

Leave a Comment