ಆ ವಿಷಯದಲ್ಲಿ ನಾನು ಸ್ವಲ್ಪ ಹಳೇ ಕಾಲದ ಆಲೋಚನೆ ಹೊಂದಿದ್ದೇನೆ ಎಂದ ರಶ್ಮಿಕಾ, ಅದಕ್ಕೆ ಕಾರಣ ಕೂಡಾ ಹೇಳಿದ್ದಾರೆ.

0 2

ಸದಾ ಒಂದಲ್ಲಾ ಒಂದು ವಿಷಯವಾಗಿ ಸುದ್ದಿಯಾಗುತ್ತಾ ಇರುವ ನಟಿಯರಲ್ಲಿ ರಶ್ಮಿಕಾ ಮಂಚೂಣಿಯಲ್ಲಿದ್ದಾರೆ. ಆ ಮೂಲಕ ರಶ್ಮಿಕಾ ಮಾದ್ಯಮಗಳ ಸುದ್ದಿಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ರಶ್ಮಿಕಾ ಅಲ್ಲಿ ಬಹಳ ಬೋಲ್ಡಾಗಿ ಆಡಿದ ಮಾತುಗಳು, ನೀಡಿದ ಹೇಳಿಕೆಗಳು ಬಹಳ ಸದ್ದು ಮಾಡಿದೆ. ರಶ್ಮಿಕಾ ಡೇಟಿಂಗ್ ಆ್ಯಪ್ ಗೆ ಸಂಬಂಧಿಸಿದ ಒಂದು ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು, ಈ ವೇಳೆ ರಶ್ಮಿಕಾ ಅವರನ್ನು ಡೇಟಿಂಗ್ ಆ್ಯಪ್ ನ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆ ಬಹಳ ಬೋಲ್ಡಾಗಿ, ನೇರ ಉತ್ತರವನ್ನು ನೀಡಿದ್ದಾರೆ.

ಸಂದರ್ಶನದಲ್ಲಿ ರಶ್ಮಿಕಾ ಅವರನ್ನು ಹಲವು ಪ್ರಶ್ನೆಗಳನ್ನು ಕೇಳಲಾಯಿತು. ‌ಅದರಲ್ಲಿ ಡೇಟಿಂಗ್ ವಿಚಾರವಾಗಿ ಸಹಾ ಅವರನ್ನು ಪ್ರಶ್ನೆ ಮಾಡಲಾಗಿತ್ತು. ಎಲ್ಲಾ ಪ್ರಶ್ನೆ ಗಳಿಗೂ ಸಹಾ ರಶ್ಮಿಕಾ ನೇರವಾಗಿ ಉತ್ತರವನ್ನು ನೀಡಿದ್ದರು. ಡೇಟಿಂಗ್ ಆ್ಯಪ್ ನಲ್ಲಿ ಹುಡುಗರ ಪ್ರೊಫೈಲ್ ಪಿಕ್ ಹೇಗಿರಬೇಕು?? ಯುವಕರ ಬಾಡಿ ಪಿಟ್ನೆಸ್ ಕುರಿತಾಗಿ ಹಾಗೂ ಡೇಟಿಂಗ್ ಮಾಡುವುದುಕ್ಕೆ ವಯಸ್ಸು ಮುಖ್ಯವೋ ಅಥವಾ ವ್ಯಕ್ತಿ ಮುಖ್ಯವೋ ಎನ್ನುವ ವಿಚಾರಗಳ ಕುರಿತಾಗಿ ರಶ್ಮಿಕಾ ಮಾತನಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‌

ನಾನು ಓದಿದ್ದ ಬೋರ್ಡಿಂಗ್ ಶಾಲೆಯಲ್ಲಿ, ಅಲ್ಲಿ ಒಬ್ಬ ಹುಡುಗನನ್ನು ಕಣ್ಣಿಟ್ಟು ನೋಡಿದರೆ ಅದನ್ನೇ ಡೇಟಿಂಗ್ ಎನ್ನುತ್ತಿದ್ದರು. ಚೆನ್ನಾಗಿ ವರ್ಕೌಟ್ ಮಾಡಿ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವ ಹುಡುಗರನ್ನು ನಾನು ಹೊಗಳುತ್ತೇನೆ. ಇದು ಅವರ ಬದ್ಧತೆಯನ್ನು ನಮಗೆ ತೋರಿಸುತ್ತದೆ. ಆದರೆ ಅವರು ಏಕೆ ಶರ್ಟ್ ಲೆಸ್ ಫೋಟೋ ಏಕೆ ತಮ್ಮ ಪ್ರೊಫೈಲ್ ಗೆ ಹಾಕುತ್ತಾರೋ ಎನ್ನುವುದು ನನಗೆ ಅರ್ಥವಾಗುವುದೇ ಇಲ್ಲ.‌ ಈ ವಿಚಾರದಲ್ಲಿ ನಾನು ಸ್ವಲ್ಪ ಹಳೆಯ ಕಾಲದ ಆಲೋಚನೆಯನ್ನು ಹೊಂದಿದ್ದೇನೆ ಎನ್ನುವ ಮಾತನ್ನು ಹೇಳಿದ್ದಾರೆ.

ಪ್ರಸ್ತುತ ರಶ್ಮಿನಾ ಬಹುಭಾಷಾ ನಟಿಯಾಗಿದ್ದು ಸಾಕಷ್ಟು ಬ್ಯುಸಿಯಾಗಿದ್ದಾರೆ. ಬಾಲಿವುಡ್ ಗೂ ಎಂಟ್ರಿ ನೀಡಿರುವ ರಶ್ಮಿಕಾ ಅವರ ಎರಡು ಬಾಲಿವುಡ್ ಸಿನಿಮಾಗಳು ಪ್ರಗತಿಯಲ್ಲಿದೆ. ಅಲ್ಲದೇ ಟಾಲಿವುಡ್ ನಲ್ಲಿ ಸಹಾ ರಶ್ಮಿಕಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿರುವ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಸಹಾ ಬಿಡುಗಡೆಗೆ ಸಜ್ಜಾಗಿದೆ. ಇನ್ನೊಂದೆಡೆ ರಶ್ಮಿಕಾ ಜಾಹೀರಾತು ಗಳಲ್ಲೂ ಸಹಾ ಮಿಂಚುತ್ತಿದ್ದಾರೆ.

Leave A Reply

Your email address will not be published.