ಶಮಿತಾ ಶೆಟ್ಟಿ ಮುಂದೆ ನಿಜ ಒಪ್ಪಿಕೊಂಡ ರಾಕೇಶ್ ಬಾಪಟ್: ನಾನು ಬಂದಿರೋದು ಅನುಭವ ಪಡೆಯೋಕೆ ಎಂದ ನಟ

Written by Soma Shekar

Published on:

---Join Our Channel---

ಇದೇ ಮೊದಲ ಬಾರಿಗೆ ದೇಶದ ಕಿರುತೆರೆಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಇದೇ ಮೊದಲ ಬಾರಿಗೆ ಓಟಿಟಿ ಪ್ಲಾಟ್ ಫಾರಂ ನಲ್ಲಿ ಬಂದಿದ್ದು ವೂಟ್ ನಲ್ಲಿ ಪ್ರಸಾರ ಆರಂಭಿಸಿ ದಿನಗಳೇ ಕಳೆದಿವೆ‌. ವೂಟ್ ನ ಈ ಬಿಗ್ ಬಾಸ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ದಿನಕ್ಕೊಂದು ಹೈಡ್ರಾಮಾ ನಡೆಯುತ್ತಿದೆ. ಓಟಿಟಿ ಬಿಗ್ ಬಾಸ್ ನಲ್ಲಿ ಪ್ರಸ್ತುತ ಸೆಂಟರ್ ಆಫ್ ದಿ ಅಟ್ರಾಕ್ಷನ್ ಎನಿಸಿಕೊಂಡಿದ್ದಾರೆ ಬಾಲಿವುಡ್ ನಟಿ, ಮತ್ತೋರ್ವ ಬಾಲಿವುಡ್ ನ ಸ್ಟಾರ್ ನಟಿ ಎನಿಸಿಕೊಂಡಿರುವ ಶಿಲ್ಪಾ ಶೆಟ್ಟಿ ಅವರ ತಂಗಿ ಶಮಿತಾ ಶೆಟ್ಟಿ. ಶಮಿತಾ ಅವರಿಗೆ ಈಗ 42 ವರ್ಷ ವಯಸ್ಸು ಆದರೆ ತಾನು ಬಯಸಿದಂತಹ ಜೀವನ ಸಂಗಾತಿ ಇನ್ನೂ‌‌ ದೊರೆತಿಲ್ಲ ಎನ್ನುವ ಕಾರಣಕ್ಕೆ ಮದುವೆಯಾಗದೇ ಒಂಟಿಯಾಗಿಯೇ ಉಳಿದಿದ್ದಾರೆ. ಈ ಹಿಂದೆ‌‌ ಸಂದರ್ಶನವೊಂದರಲ್ಲಿ ಶಮಿತಾ ಮದುವೆಯಾಗದೇ ಉಳಿದಿರುವುದಕ್ಕೆ ಕಾರಣವನ್ನು ಸಹಾ ತಿಳಿಸಿದ್ದರು.

ಆದರೆ ಬಿಗ್ ಬಾಸ್ ಮನೆಗೆ ಹೋದ ಶಮಿತಾ ಬಿಗ್ ಹೌಸ್ ನಲ್ಲಿ ತನ್ನ ಟಾಸ್ಕ್ ಗಳಲ್ಲಿನ ತಾನು ತೊಡಗಿಕೊಳ್ಳುವಿಕೆ, ಜಗಳಗಳು, ಮಾತುಗಳು ಮಾತ್ರವೇ ಅಲ್ಲದೇ ತಮ್ಮ ಹನಿ ಹನಿ‌ ಪ್ರೇಮ ಕಹಾನಿಯಿಂದ ಕೂಡಾ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಹೌದು ಬಿಗ್ ಬಾಸ್ ಮನೆಯಲ್ಲಿ ಶಮಿತಾ ಮತ್ತೋರ್ವ ಸ್ಪರ್ಧಿ 43 ವರ್ಷ ವಯಸ್ಸಿನ ರಾಕೇಶ್ ಬಾಪಟ್ ಗೆ ಬಹಳ ಹತ್ತಿರವಾಗಿದ್ದಾರೆ. ರಾಕೇಶ್ ಮತ್ತು ಶಮಿತಾ ನಡುವಿನ ಸಲುಗೆ, ಅವರ ನಡುವಿನ ಈ ಸಲುಗೆ ಎಲ್ಲರ ಗಮನ ಸೆಳೆದಿದೆ. ಆದರೆ ಟಾಸ್ಕ್ ವಿಚಾರದಲ್ಲಿ ಮಾತ್ರ ರಾಕೇಶ್ ಬಾಪಟ್ ಹಿಂದೇಟು ಹಾಕುತ್ತಾರೆ. ಇದೇ ವಿಷಯವಾಗಿ ಶಮಿತಾ ಮತ್ತು ರಾಕೇಶ್ ನಡುವೆ ಒಂದು ಚರ್ಚೆ ಕೂಡಾ ನಡೆದಿದೆ.

ಟಾಸ್ಕ್ ವಿಷಯದಲ್ಲಿ ತನ್ನ ಉದ್ದೇಶವೇನು ಎನ್ನುವುದನ್ನು ರಾಕೇಶ್ ಶಮಿತಾಗೆ ಹೇಳಿದ್ದಾರೆ. ಆಗ ಶಮಿತಾ “ಇದೊಂದು ಸ್ಪರ್ಧೆ ಡಾರ್ಲಿಂಗ್” ಎಂದು ಹೇಳಿದ್ದಾರೆ. ಆದರೆ ಈ ಮಾತಿಗೆ ರಾಕೇಶ್ ಒಪ್ಪಲಿಲ್ಲ. ಅವರು ನೀನು ಬೇಕಿದ್ದರೆ ಟಾಸ್ಕ್ ನಲ್ಲಿ ಸ್ಪರ್ಧೆ ಮಾಡು, ನಿನಗೆ ಒಳ್ಳೆಯದಾಗಲಿ, ನಾನು ಇಲ್ಲಿಗೆ ಕೇವಲ ಅನುಭವ ಪಡೆಯಲು ಬಂದಿದ್ದೇನೆ, ಒಂದ್ಸಲ ಎಲ್ಲರೂ ಸರಿಯಾಗಿ ಕೇಳಿಸಿಕೊಳ್ಳಿ ಎಂದು ರಾಕೇಶ್ ಮನೆಯ ಎಲ್ಲಾ ಸದಸ್ಯರು ಕೇಳುವಂತೆ ಗಟ್ಟಿಯಾಗಿ ಹೇಳಿ ಸ್ಪಷ್ಟ ವಿಚಾರವನ್ನು ತಿಳಿಸಿದ್ದಾರೆ. ಆದರೆ ಶಮಿತಾ ಇದನ್ನು ಒಪ್ಪಲು ಸಿದ್ಧವಾಗಲಿಲ್ಲ. ಅವರು ರಾಕೇಶ್ ಕುರಿತಾಗಿ ನೀನು ಕಂಫೋರ್ಟ್ ಜೋನ್ ನಲ್ಲಿ ಇದ್ದೀಯಾ, ಮೊದಲು ಅಲ್ಲಿಂದ ಹೊರಗೆ ಬಾ ಎಂದು ಹೇಳಿದ್ದಾರೆ.

ಆದರೆ ರಾಕೇಶ್ ಮಾತ್ರ ಶಮಿತಾ ಮಾತು ಒಪ್ಪಲು ನಿರಾಕರಿಸಿದ್ದಾರೆ. ಅಲ್ಲದೇ ಅವರು ಇದೆಲ್ಲಾ ನನಗೆ ಸಾಕಾಗಿದೆ ಎಂದು ಕೈ ಮುಗಿದಾಗ, ಶಮಿತಾ ಹಾಗಂದ್ರೇ ಏನರ್ಥ??ನಿನಗೇನು 70 ವರ್ಷ ಆಗಿದ್ಯಾ?? ಇನ್ನೂ 43 ವರ್ಷ ಮಾತ್ರ ನಿನ್ನ ವಯಸ್ಸು ಎಂದು ಶಮಿತಾ ಹೇಳಿದ್ದಾರೆ. ಒಟ್ಟಿನಲ್ಲಿ ಶಮಿತಾ ಮತ್ತು ರಾಕೇಶ್ ಬಾಪಟ್ ನಡುವಿನ ಮಾತುಗಳು, ಅವುಗಳ ಸ್ನೇಹ, ಸಲುಗೆ ಎಲ್ಲವೂ ಕೂಡಾ ಭರ್ಜರಿ ಮನರಂಜನೆಯನ್ನು ನೀಡುತ್ತಿರುವುದು ಮಾತ್ರ ವಾಸ್ತವವಾಗಿದೆ.

Leave a Comment