ಸಲ್ಮಾನ್ ಖಾನ್ ಮುಂದೇನೇ ಶಮಿತಾ ಶೆಟ್ಟಿ ನನ್ನ ಚಪ್ಪಲಿಗೆ ಸಮಾನ ಎಂದ ಸ್ಪರ್ಧಿ : ಬಿಗ್ ಬಾಸ್ ಮನೆಯಲ್ಲಿ ನಡೆಯಿತು ಬಿಗ್ ಫೈಟ್

0 2

ಬಿಗ್ ಬಾಸ್ ಶೋ ಕಿರುತೆರೆಯ ಬಹು ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ವಿಶೇಷವೆಂದರೆ ಹಿಂದಿಯಲ್ಲಿ ಈ ಬಾರಿ 15 ನೇ ಸೀಸನ್ ನಡೆಯುತ್ತಿದೆ. ಹಿಂದಿ ಬಿಗ್ ಬಾಸ್ ಎಂದರೆ ಮನರಂಜನೆ ಹಾಗೂ ವಿ ವಾ ದಗಳಿಗೆ ಎತ್ತಿದ ಕೈ. ಈ ಬಾರಿ ಮಾತ್ರ ಅದೇಕೋ ಏನೆಲ್ಲಾ ಪ್ರಯತ್ನ ಮಾಡಿದರೂ ಬಿಗ್ ಬಾಸ್ ನ ಟಿ ಆರ್ ಪಿ ಮೇಲೆ ಏಳುತ್ತಿಲ್ಲ, ಅರ್ಧ ಸೀಸನ್ ಮುಗಿಯುವ ಮೊದಲೇ ಮನೆಯಿಂದ ಅರ್ಧ ಸ್ಪರ್ಧಿಗಳನ್ನು ಹೊರಗೆ ಬಂದಾಗಿದೆ. ಹೊಸ ಹೊಸ ಪ್ರಯತ್ನಗಳು ನಡೆದಿವೆ ಆದರೂ ಬಿಗ್ ಬಾಸ್ ನಿರೀಕ್ಷಿತ ಯಶಸ್ಸು ಪಡೆಯುತ್ತಿಲ್ಲ.

ಇದೇ ಕಾರಣದಿಂದ ಬಿಗ್ ಬಾಸ್ ಹಿಂದಿನ ಸೀಸನ್ ಗಳ ಸಾಕಷ್ಟು ಸದ್ದು ಮಾಡಿದ ಸ್ಪರ್ಧಿಗಳನ್ನು ಮತ್ತೆ ಮನೆಯೊಳಕ್ಕೆ ಕಳುಹಿಸಿ ಈ ಸೀಸನ್ ನ ಸ್ಪರ್ಧಿಗಳಿಗೆ ಸ್ಪರ್ಧೆಯನ್ನು ನೀಡುವ ಅವಕಾಶ ಕಲ್ಪಿಸಿದೆ. ಹೀಗೆ ಮನೆಯೊಳಗೆ ಬಂದವರಲ್ಲಿ ಎಂಟರ್ಟೈನ್ಮೆಂಟ್ ಕ್ವೀನ್ ರಾಖೀ ಸಾವಂತ್ ಹಾಗೂ ಆಕೆಯ ಪತಿ ರಿತೇಶ್, ರಶ್ಮಿ ದೇಸಾಯಿ, ದೇವೋಲಿನಾ ಭಟ್ಟಾಚಾರ್ಜಿ ಹಾಗೂ ಮರಾಠಿ ಬಿಗ್ ಬಾಸ್ ಖ್ಯಾತಿಯ ಅಭಿಜೀತ್ ಬೀಚುಕ್ಲೆ ಸೇರಿದ್ದಾರೆ. ಈ ವಿಐಪಿ ಕಂಟೆಸ್ಟಂಟ್ ಗಳ ಆಗಮನ ಬಿಗ್ ಬಾಸ್ ಮನೆ ಜಗಳಗಳಿಂದ ಹೊತ್ತಿ ಉರಿಯುವಂತೆ ಆಗಿದೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಕೂಡಾ ಇದ್ದು ಶಮಿತಾ ತನ್ನ ರಾಣಿಯಂತ ನಡೆ, ನುಡಿಗೆ ಹೆಸರಾಗಿದ್ದಾರೆ, ನಿರೂಪಕ ಸಲ್ಮಾನ್ ಖಾನ್ ಕೂಡಾ ಶಮಿತಾಗೆ ಬುದ್ಧಿ ಮಾತು ಹೇಳುತ್ತಲೇ ಇರುತ್ತಾರೆ. ಈಗ ಇವೆಲ್ಲವುಗಳ ನಡುವೆ ವೈಲ್ಡ್ ಕಾರ್ಡ್ ಆಗಿ ಮನೆಗೆ ಎಂಟ್ರಿ ಪಡೆದ ಅಭಿಜೀತ್ ಬಿಚುಕ್ಲೇ ಶಮಿತಾ ಶೆಟ್ಟಿ ಅವರ ವಿಚಾರದಲ್ಲಿ ಟಾಸ್ಕ್ ಒಂದರಲ್ಲಿ ಅಸಮಾಧಾನಗೊಂಡಿದ್ದಾರೆ, ಅಲ್ಲದೇ ಶಮಿತಾ ವರ್ತನೆಯಿಂದ ಅವರು ಬೇಸತ್ತಿದ್ದಾರೆ.

ಅಭಿಜೀತ್ ಬಿಚುಕ್ಲೆ ತಮ್ಮ ಕೋಪದಲ್ಲಿ ನಟಿ ಶಮಿತಾ ಶೆಟ್ಟಿಯನ್ನು ತಾನು ಧರಿಸುವ ಚಪ್ಪಲಿಗೆ ಸಮಾನ ಎಂದು ಹೇಳಿದ್ದು, ಇದು ಮನೆಯಲ್ಲಿರುವ ಮಹಿಳಾ ಸದಸ್ಯರ ಸಿಟ್ಟಿಗೆ ಕಾರಣವಾಗಿದೆ. ವೀಕೆಂಡ್ ನಲ್ಲಿ ಸಲ್ಮಾನ್ ಖಾನ್ ಮುಂದೆ ಕೂಡಾ ಇದೇ ವಿಚಾರವು ಚರ್ಚೆಗೆ ಬಂದಿದ್ದು, ಶಮಿತಾ ಅಭಿಜೀತ್ ಬಿಚುಕ್ಲೆ ಬಗ್ಗೆ ದೂರನ್ನು ಹೇಳಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಶಮಿತಾ ಇವನ್ಯಾರು?? ಶೋ ನಲ್ಲಿ ಏಕೆ ಬಂದ?? ಎಂದು ಅಭಿಜೀತ್ ಬಗ್ಗೆ ಮಾತನಾಡಿದ್ದರಿಂದ ಅಭಿಜೀತ್ ಬಿಚುಕ್ಲೆ ಕೋಪಗೊಂಡು ಮತ್ತೊಮ್ಮೆ ಇಂತಹ ಹುಡುಗಿಯರು ನನ್ನ ಚಪ್ಪಲಿಗೆ ಸಮಾನ ಎಂದು ಅರಚಾಡಿದ್ದಾರೆ.

ಇನ್ನು ಶಮಿತಾ ಶೆಟ್ಟಿ ಆಡಿದ ಮಾತಿಗೆ ಸಲ್ಮಾನ್ ಖಾನ್ ಕೂಡಾ ಕೋಪಗೊಂಡಿದ್ದಾರೆ. ಆತ ಯಾರು?? ಶೋ ಗೆ ಯಾಕೆ ಬಂದ?? ಇಂತಹ ಪ್ರಶ್ನೆ ಕೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ. ಈ ವೇಳೆ ಶಮಿತಾ ಆತ ತನ್ನನ್ನು ನಾಯಿ ಎಂದಿದ್ದಾನೆ ಎಂದಾಗ, ಸಲ್ಮಾನ್ ಖಾನ್ ಹಾಗೆಲ್ಲ ಆತ ಹೇಳಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ವಿಐಪಿ ಗಳ ಆಗಮನ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಮಟ್ಟದ ಅಸಮಾಧಾನವನ್ನು ಹುಟ್ಟು ಹಾಕಿದೆ.

Leave A Reply

Your email address will not be published.